8 ಗಂಟೆಗಳ ಬದಲಿಗೆ 12 ಗಂಟೆಗಳ ಕಾಲ ಕೆಲಸ ಮಾಡಲು ಮಹಾರಾಷ್ಟ್ರ ಸರ್ಕಾರ ಅನುಮತಿ

ಲಾಕ್‌ಡೌನ್‌ನಿಂದ ಉಂಟಾಗಿರುವ ಉತ್ಪಾದನೆ ಮತ್ತು ಕಾರ್ಮಿಕರ ಕೊರತೆಯನ್ನು ನೀಗಿಸುವ ಸಲುವಾಗಿ ಕಾರ್ಮಿಕರನ್ನು ಕಾರ್ಖಾನೆಗಳಲ್ಲಿ 8 ಗಂಟೆ ಬದಲಿಗೆ 12 ಗಂಟೆ ದುಡಿಸಿಕೊಳ್ಳಲು ಮಹಾರಾಷ್ಟ್ರ ಸರ್ಕಾರ  ಅನುಮತಿ ನೀಡಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮುಂಬಯಿ: ಲಾಕ್‌ಡೌನ್‌ನಿಂದ ಉಂಟಾಗಿರುವ ಉತ್ಪಾದನೆ ಮತ್ತು ಕಾರ್ಮಿಕರ ಕೊರತೆಯನ್ನು ನೀಗಿಸುವ ಸಲುವಾಗಿ ಕಾರ್ಮಿಕರನ್ನು ಕಾರ್ಖಾನೆಗಳಲ್ಲಿ 8 ಗಂಟೆ ಬದಲಿಗೆ 12 ಗಂಟೆ ದುಡಿಸಿಕೊಳ್ಳಲು ಮಹಾರಾಷ್ಟ್ರ ಸರ್ಕಾರ  ಅನುಮತಿ ನೀಡಿದೆ.

ಕಳೆದ 6 ವಾರಗಳಿಂದ ರಾಷ್ಟ್ರದಾದ್ಯಂತ ಲಾಕ್‌ಡೌನ್ ಜಾರಿಯಲ್ಲಿದೆ. ಹೀಗಾಗಿ ಕಾರ್ಖಾನೆಗಳನ್ನು ಮುಚ್ಚಲ್ಪಟ್ಟಿದ್ದು ಉತ್ಪಾದನಾ ವಲಯ ಬಹುತೇಕ ಸ್ಥಗಿತವಾಗಿದೆ. ಹೀಗಾಗಿ ಲಾಕ್‌ಡೌನ್ ಅವಧಿ ಮುಗಿದ ನಂತರ ಕಾರ್ಮಿಕರನ್ನು 8 ಗಂಟೆ ಬದಲಿಗೆ 12 ಗಂಟೆ ದುಡಿಸಿಕೊಳ್ಳಬೇಕು ಎಂಬ ಮಾತುಗಳು ಕೇಳಿ ಬಂದಿದ್ದವು.

ಈ ನಡುವೆ ದೇಶದ ನಾನಾ ಮೂಲೆಯಲ್ಲಿದ್ದ ವಲಸೆ ಕಾರ್ಮಿಕರು ಅವರವರ ರಾಜ್ಯಗಳಿಗೆ ಹಿಂದಿರುಗಿದ್ದು, ಇದೀಗ ಕಾರ್ಮಿಕರ ಕೊರತೆಯೂ ಉಂಟಾಗಿರುವುದರಿಂದ ಮಹಾರಾಷ್ಟ್ರ ಸರ್ಕಾರ ಬೇರೆ ದಾರಿ ಕಾಣದೆ ಕಾರ್ಮಿಕರನ್ನು 8 ಗಂಟೆ ಬದಲಿಗೆ 12 ಗಂಟೆ ಶಿಫ್ಟ್‌ನಲ್ಲಿ ದುಡಿಸಿಕೊಳ್ಳಲು ಅನುಮತಿ ನೀಡಿದೆ. ಆದರೆ, ಸರ್ಕಾರದ ಈ ನಿರ್ಧಾರಕ್ಕೆ ಕಾರ್ಮಿಕ ಸಂಘಗಳು ವಿರೋಧ ವ್ಯಕ್ತಪಡಿಸಿವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com