ಕೈಲಾಸ ಮಾನಸ ಸರೋವಕ್ಕೆ ಹೋಗಲು ಇನ್ನು ಸುಲಭ: ರಕ್ಷಣಾ ಸಚಿವರಿಂದ ಕಡಿಮೆ ವೆಚ್ಚದ, ಸುಲಭದ ಮಾರ್ಗ ಉದ್ಘಾಟನೆ

ಕೈಲಾಸ ಮಾನಸ ಸರೋವರ ಯಾತ್ರಿಕರಿಗೆ ಇಲ್ಲೊಂದು ಶುಭ ಸುದ್ದಿಯಿದೆ. ಸರೋವರಕ್ಕೆ ಹೋಗಲು ಹೊಸ ಮಾರ್ಗ ಉದ್ಘಾಟನೆಯಾಗಿದ್ದು ಇದು ಸುಲಭದ ಮತ್ತು ಕಡಿಮೆ ವೆಚ್ಚದ ಮಾರ್ಗವಾಗಿದೆ.
ಪಿಥೊರಗರ್ ನಿಂದ ಕೈಲಾಸ ಮಾನಸ ಸರೋವರಕ್ಕೆ ಹೋಗುವ ದಾರಿಯನ್ನು ಸೂಚಿಸುವ ಭೂಪಟ
ಪಿಥೊರಗರ್ ನಿಂದ ಕೈಲಾಸ ಮಾನಸ ಸರೋವರಕ್ಕೆ ಹೋಗುವ ದಾರಿಯನ್ನು ಸೂಚಿಸುವ ಭೂಪಟ
Updated on

ನವದೆಹಲಿ: ಕೈಲಾಸ ಮಾನಸ ಸರೋವರ ಯಾತ್ರಿಕರಿಗೆ ಇಲ್ಲೊಂದು ಶುಭ ಸುದ್ದಿಯಿದೆ. ಸರೋವರಕ್ಕೆ ಹೋಗಲು ಹೊಸ ಮಾರ್ಗ ಉದ್ಘಾಟನೆಯಾಗಿದ್ದು ಇದು ಸುಲಭದ ಮತ್ತು ಕಡಿಮೆ ವೆಚ್ಚದ ಮಾರ್ಗವಾಗಿದೆ.

ರಕ್ಷಣಾ ಇಲಾಖೆ ಸಚಿವ ರಾಜನಾಥ್ ಸಿಂಗ್ ವಿಡಿಯೊ ಕಾನ್ಫರೆನ್ಸ್ ಮೂಲಕ ಕೈಲಾಸ ಮಾನಸ ಸರೋವರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಉದ್ಘಾಟಿಸಿದರು.

ಇದು ಹಳೆಯ ಮಾರ್ಗ.ಆದರೆ ಎತ್ತರದ ಪ್ರದೇಶ ಮತ್ತು ಕಡಿದಾದ ಕಣಿವೆಯಿಂದಾಗಿ ಹೋಗುವವರಿಗೆ ಅಷ್ಟೊಂದು ಸುಗಮವಾಗಿರಲಿಲ್ಲ. ಹೊಸ ಮಾರ್ಗ ಸಂಪರ್ಕಿಸಿದ್ದರಿಂದ ಹಗುರ ವಾಹನಗಳು 75 ಕಿಲೋ ಮೀಟರ್ ವರೆಗೆ 5 ದಿನಗಳ ಟ್ರಕ್ ಪ್ರಯಾಣವನ್ನು ಎರಡು ದಿನಗಳ ರಸ್ತೆ ಪ್ರಯಾಣಕ್ಕೆ ಇಳಿಸಲಿದೆ, ಹೀಗೆ ಹೋಗಿ-ಬರುವುದು ಸೇರಿ ಆರು ದಿನಗಳ ಪ್ರಯಾಣ ಸಮಯವನ್ನು ಕಡಿಮೆ ಮಾಡಲಿದೆ.

ಪ್ರಯಾಣದ ಸಮಯ ಉಳಿತಾಯವಾಗುವುದಲ್ಲದೆ ಇನ್ನೂ ಹಲವು ಪ್ರಯೋಜನಗಳಿವೆ. ಬೇರೆ ರಸ್ತೆ ಪ್ರಯಾಣಕ್ಕೆ ಹೋಲಿಸಿದರೆ ಹೊಸ ಮಾರ್ಗ 5ನೇ ಒಂದರಷ್ಟು ದೂರದ ಹಾದಿಯಾಗಿದೆ. ಬಹುತೇಕ ರಸ್ತೆ ಭಾರತದ ಕಡೆಗಿದೆ.

ಹೊಸ ಮಾರ್ಗ ಎಲ್ಲಿ ಹೇಗೆ?: ರಸ್ತೆಯ ಮೂಲಕ ದೆಹಲಿಯಿಂದ ಪಿಥೋರಗರ್ ಗೆ 490 ಕಿಲೋ ಮೀಟರ್ ಪ್ರಯಾಣಿಸುವುದು. ನಂತರ ರಸ್ತೆಯಲ್ಲಿ 130 ಕಿಲೋ ಮೀಟರ್, ಕಾಲ್ನಡಿಗೆ ಟ್ರಕ್ ಪ್ರಯಾಣವನ್ನು 5 ದಿನಗಳ ಕಾಲ ಘಟಿಯಬ್ ಗರ್ಹ್ ನಿಂದ ಲಿಪುಲೆಕ್ ಪಾಸ್ ವರೆಗೆ ಚೀನಾದ ಗಡಿಭಾಗವಾಗಿ ಪ್ರಯಾಣಿಸುವುದು. ಅಂತಾರಾಷ್ಟ್ರೀಯ ಗಡಿಯಲ್ಲಿ ಮತ್ತೆ 5 ಕಿಲೋ ಮೀಟರ್ ಟ್ರಕ್ ನಲ್ಲಿ ಚೀನಾದ ಭಾಗವಾಗಿ ಸಾಗಿ ನಂತರ 97 ಕಿಲೋ ಮೀಟರ್ ರಸ್ತೆ ಪ್ರಯಾಣ ಮತ್ತು 43 ಕಿಲೋ ಮೀಟರ್ ಕಾಲ್ನಡಿಗೆ ಪ್ರಯಾಣ ಸಾಗಬೇಕಾಗುತ್ತದೆ.

ಗಡಿ ರಸ್ತೆಗಳ ಸಂಸ್ಥೆ(ಬಿಆರ್ ಒ) ಕೈಲಾಶ್ ಮಾನಸ ಸರೋವರ್ ಮಾರ್ಗವನ್ನು ಚೀನಾ ಗಡಿಗೆ ಸಂಪರ್ಕಿಸುತ್ತದೆ. ಕೋವಿಡ್ -19 ಸಾಂಕ್ರಾಮಿಕ ರೋಗವನ್ನು ಎದುರಿಸುವಾಗ, ಉತ್ತರಾಖಂಡದ ಬಿಆರ್ ಒ ಕೈಲಾಶ್ ಮಾನಸರೋವರ ಮಾರ್ಗವನ್ನು 17 ಸಾವಿರದ 060 ಅಡಿ ಎತ್ತರದಲ್ಲಿ ಲಿಪುಲೆಖ್ ಪಾಸ್ ಗೆ ಸಂಪರ್ಕಿಸಿದೆ; ಹೀಗೆ ಗಡಿ ಗ್ರಾಮಗಳು ಮತ್ತು ಭದ್ರತಾ ಪಡೆಗಳಿಗೆ ಸಂಪರ್ಕವನ್ನು ಒದಗಿಸುತ್ತದೆ ಎಂದು ಸಚಿವ ರಾಜನಾಥ್ ಸಿಂಗ್ ಟ್ವೀಟ್ ಮಾಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com