ಸಿಎಂ ಉದ್ಧವ್ ಠಾಕ್ರೆ
ದೇಶ
ಮಹಾ ಮೇಲ್ಮನೆ ಚುನಾವಣೆಗೆ ಅಭ್ಯರ್ಥಿ ಹಿಂಪಡೆಯಲು ಕಾಂಗ್ರೆಸ್ ಗೆ ಒತ್ತಡ: ಉದ್ಧವ್ ಠಾಕ್ರೆ ಅವಿರೋಧ ಆಯ್ಕೆ ಸಾಧ್ಯತೆ
ಮಹಾರಾಷ್ಟ್ರ ಮೇಲ್ಮನೆ ಚುನಾವಣೆ ನಿಗದಿಯಾಗಿದ್ದು, ಮಹಾ ವಿಕಾಸ್ ಅಘಾಡಿಯ ಮಿತ್ರ ಪಕ್ಷ ಕಾಂಗ್ರೆಸ್ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿದ್ದನ್ನು ಶಿವಸೇನೆ ವಿರೋಧಿಸಿದ ಪರಿಣಾಮ ಈಗ ಕೈ ಅಭ್ಯರ್ಥಿಯನ್ನು ಹಿಂಪಡೆಯಲು ನಿರ್ಧರಿಸಲಾಗಿದೆ.
ಮುಂಬೈ: ಮಹಾರಾಷ್ಟ್ರ ಮೇಲ್ಮನೆ ಚುನಾವಣೆ ನಿಗದಿಯಾಗಿದ್ದು, ಮಹಾ ವಿಕಾಸ್ ಅಘಾಡಿಯ ಮಿತ್ರ ಪಕ್ಷ ಕಾಂಗ್ರೆಸ್ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿದ್ದನ್ನು ಶಿವಸೇನೆ ವಿರೋಧಿಸಿದ ಪರಿಣಾಮ ಈಗ ಕೈ ಅಭ್ಯರ್ಥಿಯನ್ನು ಹಿಂಪಡೆಯಲು ನಿರ್ಧರಿಸಲಾಗಿದೆ.
ಈಗ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಆದಿಯಾಗಿ ಮೇಲ್ಮನೆ ಚುನಾವಣೆಗೆ 9 ಅಭ್ಯರ್ಥಿಗಳು ಕಣದಲ್ಲಿದ್ದು, ಉದ್ಧವ್ ಠಾಕ್ರೆ ಅವಿರೋಧವಾಗಿ ಆಯ್ಕೆಯಾಗುವ ಸಾಧ್ಯತೆಗಳಿವೆ.
ಸ್ಪರ್ಧೆಯೇ ಇಲ್ಲದೇ ಮಹಾರಾಷ್ಟ್ರ ವಿಕಾಸ್ ಅಘಾಡಿಯ ಭಾಗವಾಗಿರುವ ಶಿವಸೇನೆ, ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ, ಕಾಂಗ್ರೆಸ್ ಪಕ್ಷ 5 ಸ್ಥಾನಗಳನ್ನು ಗಳಿಸಲಿದೆ. ಬಿಜೆಪಿ 4 ಸ್ಥಾನಗಳನ್ನು ಗಳಿಸಲಿದೆ.
ಮೇಲ್ಮನೆ ಚುನಾವಣೆಗಾಗಿ ಕಾಂಗ್ರೆಸ್ ಪಕ್ಷ ಮೇ.09 ರಂದು ಏಕಾಏಕಿಯಾಗಿ 2 ನೇ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿತ್ತು. ಇದಕ್ಕೆ ತೀವ್ರ ವಿರೋಧ ವ್ಯಕ್ತವಾದ ಬಳಿಕ ಎರಡನೇ ಅಭ್ಯರ್ಥಿಯನ್ನು ಹಿಂಪಡೆದಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ