ಎನ್ಎಸ್ ಜಿ ವೈದ್ಯಕೀಯ ಸಿಬ್ಬಂದಿಗೆ ಕೋವಿಡ್-19: ಸಿಎಪಿಎಫ್ ನಲ್ಲಿ 745 ಕ್ಕೂ ಹೆಚ್ಚು ಪ್ರಕರಣ ಪತ್ತೆ

ಭಾರತದ ಅತ್ಯುತ್ಕೃಷ್ಟ ಭಯೋತ್ಪಾದನಾ ನಿಗ್ರಹ ದಳ, ಎನ್ಎಸ್ ಜಿಯ ವೈದ್ಯಕೀಯ ಸಿಬ್ಬಂದಿಯೋರ್ವರಿಗೆ ಕೊರೋನಾ ಸೋಂಕು ದೃಢಪಟ್ಟಿದೆ. 
ಎನ್ಎಸ್ ಜಿ ವೈದ್ಯಕೀಯ ಸಿಬ್ಬಂದಿಗೆ ಕೋವಿಡ್-19: ಸಿಎಪಿಎಫ್ ನಲ್ಲಿ 745 ಕ್ಕೂ ಹೆಚ್ಚು
ಎನ್ಎಸ್ ಜಿ ವೈದ್ಯಕೀಯ ಸಿಬ್ಬಂದಿಗೆ ಕೋವಿಡ್-19: ಸಿಎಪಿಎಫ್ ನಲ್ಲಿ 745 ಕ್ಕೂ ಹೆಚ್ಚು

ನವದೆಹಲಿ: ಭಾರತದ ಅತ್ಯುತ್ಕೃಷ್ಟ ಭಯೋತ್ಪಾದನಾ ನಿಗ್ರಹ ದಳ, ಎನ್ಎಸ್ ಜಿಯ ವೈದ್ಯಕೀಯ ಸಿಬ್ಬಂದಿಯೋರ್ವರಿಗೆ ಕೊರೋನಾ ಸೋಂಕು ದೃಢಪಟ್ಟಿದೆ. 

ಕಮಾಂಡೋ ಪಡೆಯಲ್ಲಿ ಇದೇ ಮೊದಲ ಬಾರಿಗೆ ಕೊರೋನಾ ಸೋಂಕು ಕಾಣಿಸಿಕೊಂಡಿದ್ದು, 33 ವರ್ಷದ ಕಾಂಬಾಟ್ ಶ್ರೇಣಿಯಲ್ಲಿರುವ ಬ್ಲ್ಯಾಕ್ ಕ್ಯಾಟ್ ಕಮಾಂಡೋ ಪಡೆಯಲ್ಲಿ ಸೇವೆ ಸಲ್ಲಿಸುತ್ತಿರುವವರಿಗೆ ಕೊರೋನಾ ಸೋಂಕು ಕಾಣಿಸಿಕೊಂಡಿದೆ. 

ಈ ಎನ್ಎಸ್ ಜಿ ಸಿಬ್ಬಂದಿಯನ್ನು ಆಸ್ಪತ್ರೆಯ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಕರ್ತವ್ಯ ಮುಗಿಸಿ ಎನ್ಎಸ್ ಜಿ ಬೇಸ್ ಗೆ ವಾಪಸ್ಸಾದ ಬಳಿಕ ಅವರನ್ನು ಎರಡು ವಾರಗಳ ಕಾಲ ಕ್ವಾರಂಟೇನ್ ಗೆ ಕಳಿಸಲಾಗಿತ್ತು. ಈ ಅವಧಿಯಲ್ಲಿ ಎನ್ಎಸ್ ಜಿ ಕಮಾಂಡೋಗೆ ಕೊರೋನಾ ರೋಗ ಲಕ್ಷಣಗಳು ಕಾಣಿಸಿಕೊಂಡಿವೆ. ಎನ್ಎಸ್ ಜಿ ಸಿಬ್ಬಂದಿಯನ್ನು ಗ್ರೇಟರ್ ನೋಯ್ಡಾದಲ್ಲಿರುವ ಸಿಎಪಿಎಫ್ ನ ರೆಫರೆಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com