10 ಲಕ್ಷ ಕೋಟಿ ರೂ. ಪ್ರೋತ್ಸಾಹಕ ಧನ ನೀಡುವಂತೆ ಎಫ್ ಐಸಿಸಿಐ ಒತ್ತಾಯ!

ದೀರ್ಘಕಾಲೀನ ಆರ್ಥಿಕ ಕುಸಿತವನ್ನು ತಪ್ಪಿಸಲು ಬೇಡಿಕೆ ಮತ್ತು ಪೂರೈಕೆಯನ್ನು ಪ್ರೋತ್ಸಾಹಿಸಲು 9 ರಿಂದ  10 ಲಕ್ಷ ಕೋಟಿ ಅಥವಾ ಜಿಡಿಪಿಯ ಶೇಕಡಾ ನಾಲ್ಕರಿಂದ ಐದರಷ್ಟು ಪ್ರೋತ್ಸಾಹಕದ ಅವಶ್ಯಕತೆ ಇದೆ ಎಂದು ಭಾರತೀಯ ವಾಣಿಜ್ಯ ಮತ್ತು ಕೈಗಾರಿಕೆಗಳ ಮಹಾ ಒಕ್ಕೂಟ - ಎಫ್ ಐಸಿಸಿಐ ಒತ್ತಾಯಿಸಿದೆ.
ಎಫ್ ಐಸಿಸಿಐ ಅಧ್ಯಕ್ಷೆ ಸಂಗೀತಾ ರೆಡ್ಡಿ
ಎಫ್ ಐಸಿಸಿಐ ಅಧ್ಯಕ್ಷೆ ಸಂಗೀತಾ ರೆಡ್ಡಿ
Updated on

ನವದೆಹಲಿ: ದೀರ್ಘಕಾಲೀನ ಆರ್ಥಿಕ ಕುಸಿತವನ್ನು ತಪ್ಪಿಸಲು ಬೇಡಿಕೆ ಮತ್ತು ಪೂರೈಕೆಯನ್ನು ಪ್ರೋತ್ಸಾಹಿಸಲು 9 ರಿಂದ 10 ಲಕ್ಷ ಕೋಟಿ ಅಥವಾ ಜಿಡಿಪಿಯ ಶೇಕಡಾ ನಾಲ್ಕರಿಂದ ಐದರಷ್ಟು ಪ್ರೋತ್ಸಾಹಕದ ಅವಶ್ಯಕತೆ ಇದೆ ಎಂದು ಭಾರತೀಯ ವಾಣಿಜ್ಯ ಮತ್ತು ಕೈಗಾರಿಕೆಗಳ ಮಹಾ ಒಕ್ಕೂಟ - ಎಫ್ ಐಸಿಸಿಐ ಒತ್ತಾಯಿಸಿದೆ.

ಬೃಹತ್ ಮತ್ತು ಸಣ್ಣ ಉದ್ಯಮಗಳಿಗೆ ನೆರವು ನೀಡದಿದ್ದರೆ ಭಾರೀ ಪ್ರಮಾಣದ ಉದ್ಯೋಗ ನಷ್ಟವಾಗಲಿದೆ. ಅದು ಬೇಡಿಕೆಯನ್ನು ಗಮನಾರ್ಹವಾಗಿ ಸಂಕುಚಿತಗೊಳಿಸುತ್ತದೆ ಮತ್ತು ವ್ಯವಹಾರಗಳ ಬಳಕೆ ಮತ್ತು ಅವುಗಳ ದ್ರವ್ಯತೆಯ ಮೇಲೆ ಹೆಚ್ಚಿನ ಒತ್ತಡಕ್ಕೆ ಕಾರಣವಾಗುತ್ತದೆ ಎಂದು ಎಫ್ ಕೆಸಿಸಿಐ ಅಧ್ಯಕ್ಷ ಸಂಗೀತಾ ರೆಡ್ಡಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.

ಆರ್ಥಿಕ ಚಟುವಟಿಕೆಗಳು ಪುನರ್ ಆರಂಭಗೊಳ್ಳದಿದ್ದರೆ ವಿತ್ತೀಯ ಕೊರತೆ ಹಾಗೂ ಸರ್ಕಾರದ ತೆರಿಗೆ ಸಂಗ್ರಹದ ಮೇಲೆ ಮಹತ್ವದ ಪರಿಣಾಮ ಬೀರಲಿದೆ ಎಂದು ಅವರು ಹೇಳಿದ್ದಾರೆ. 

ದೊಡ್ಡ ಪ್ರಮಾಣದ ಉದ್ಯೋಗ ನಷ್ಟ ಮತ್ತು ಜನತೆಯ ಲಾಭಾಂಶ ನಷ್ಟದಿಂದಾಗುವ  ಸಾಮಾಜಿಕ-ಆರ್ಥಿಕ ಪರಿಣಾಮವು ಮಧ್ಯಮ ಅವಧಿಯಲ್ಲಿಯೂ ಸಹ ಭವಿಷ್ಯದ ಆರ್ಥಿಕ ಅಭಿವೃದ್ಧಿಯ ಹಾದಿಯನ್ನು ಪರಿಣಾಮ ಬೀರಲಿದೆ.ಆರ್ಥಿಕ ಚಟುವಟಿಕೆಗಳನ್ನು ಪುನರ್ ಆರಂಭಿಸದಿದ್ದರೆ ಧೀಘ ಕಾಲೀನ ಆರ್ಥಿಕ ಕುಸಿತದ ಮೇಲೆ ಪರಿಣಾಮ ಬೀರಲಿದ್ದು, ಕೂಡಲೇ ಕೂಡಲೇ ಪ್ರೋತ್ಸಾಹಕಗಳನ್ನು ನೀಡಬೇಕೆಂದು ಅವರು ಒತ್ತಾಯಿಸಿದ್ದಾರೆ. 

ಅತಿಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ವಲಯದ ಕೈಗಾರಿಕೆಗಳಿಗೆ ಒಂದು ವರ್ಷದವರೆವಿಗೂ ಬಡ್ಡಿ ರಹಿತ ಸಾಲ ನೀಡಬೇಕು. ಒಂದು ವೇಳೆ ಸರ್ಕಾರ ಎಂಎಸ್ ಎಂಇ ವ್ಯವಹಾರಗಳಿಗೆ 1 ಲಕ್ಷ ಕೋಟಿ ಸಾಲ ನೀಡಿದ್ದರೂ  8 ಸಾವಿರ ಕೋಟಿ ಬಡ್ಡಿ ವೆಚ್ಚವನ್ನು ಪಾವತಿಸಬೇಕಾಗುತ್ತದೆ. ಶೇ. 0.04 ರಷ್ಟು ಜಿಡಿಪಿ ಇರಲಿದೆ. ಕೆಲಸಗಾರರನ್ನು ತೆಗೆದುಹಾಕುವುದಿಲ್ಲ, ಕೈಗಾರಿಕೆಗಳನ್ನು ಮುಂದುವರೆಸುವುದಾಗಿ ಷರತ್ತಿನೊಂದಿಗೆ ಈ ಸಾಲವನ್ನು ನೀಡಬಹುದು ಎಂದು ಅವರು ಹೇಳಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com