ಪಾಕ್ ಹಿಂದೂ ದೇಗುಲದಲ್ಲಿ ಶಾಹಿದ್ ಅಫ್ರಿದಿ!

ಕೊರೋನಾ ಸಾಂಕ್ರಾಮಿಕ ಆರಂಭಗೊಂಡಾಗಿನಿಂದ ಪಾಕಿಸ್ತಾನದ ಮಾಜಿ ಕ್ರಿಕೆಟ್ ಪಟು ಶಾಹಿದ್ ಅಫ್ರಿದಿ ಸಂಕಷ್ಟದಲ್ಲಿರುವ ಬಡ ಜನರಿಗೆ ನೆರವಾಗುವ ಸೇವಾ ಕಾರ್ಯಕ್ರಮ ನಡೆಸುತ್ತಿದ್ದಾರೆ.
ಶಾಹಿದ್ ಆಫ್ರಿದಿ
ಶಾಹಿದ್ ಆಫ್ರಿದಿ

ಇಸ್ಲಾಮಾಬಾದ್: ಕೊರೋನಾ ಸಾಂಕ್ರಾಮಿಕ ಆರಂಭಗೊಂಡಾಗಿನಿಂದ ಪಾಕಿಸ್ತಾನದ ಮಾಜಿ ಕ್ರಿಕೆಟ್ ಪಟು ಶಾಹಿದ್ ಅಫ್ರಿದಿ ಸಂಕಷ್ಟದಲ್ಲಿರುವ ಬಡ ಜನರಿಗೆ ನೆರವಾಗುವ ಸೇವಾ ಕಾರ್ಯಕ್ರಮ ನಡೆಸುತ್ತಿದ್ದಾರೆ. 

ಪಾಕಿಸ್ತಾನದ ಮೂಲೆ ಮೂಲೆಯ ಪ್ರದೇಶಗಳಿಗೂ ತೆರಳಿ ಅಲ್ಲಿ ಅಗತ್ಯವಿರುವ ಬಡವರಿಗೆ ಆಹಾರ ಧಾನ್ಯ ಮತ್ತಿತರ ಪದಾರ್ಥಗಳ ಸಹಾಯ ಮಾಡುತ್ತಿದ್ದಾರೆ. ಶಾಹಿದ್ ಅಫ್ರಿದಿ ಪ್ರತಿಷ್ಠಾನದ ಮೂಲಕ ಜನರಿಂದ ದೇಣಿಗೆ ಸಂಗ್ರಹಿಸಿ ಕಷ್ಟದಲ್ಲಿರುವವರಿಗೆ ನೆರವು ಒದಗಿಸುತ್ತಿದ್ದಾರೆ.

ಈ ನಡುವೆ ಅಫ್ರಿದಿ ಹಿಂದೂ ದೇಗುಲವೊಂದರಲ್ಲಿ ನಡೆದ ಸೇವಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕಷ್ಟದಲ್ಲಿದ್ದವರಿಗೆ ಅಗತ್ಯ ವಸ್ತುಗಳನ್ನು ವಿತರಿಸಿದರು. “ಈ ಸಂಕಷ್ಟ ಸಮಯದಲ್ಲಿ ನಾವೆಲ್ಲ ಸೇರಿ ಒಗ್ಗಟ್ಟಾಗಿರಬೇಕು. ಐಕ್ಯತೆಯೇ ನಮ್ಮ ಶಕ್ತಿ ಎಂದು ಅಫ್ರಿದಿ ಹೇಳಿದ್ದಾರೆ. 

ಶ್ರೀ ಲಕ್ಷ್ಮಿನಾರಾಯಣ ಮಂದಿರಕ್ಕೆ ತೆರಳಿ ಅಲ್ಲಿ ಸಂಕಷ್ಟದಲ್ಲಿದದವರಿಗೆ ಅಗತ್ಯವಸ್ತುಗಳನ್ನು ವಿತರಿಸಿದೆ ಎಂದು ಅಫ್ರಿದಿ ಟ್ವೀಟ್ ಮಾಡಿದ್ದಾರೆ. 
ಅಫ್ರಿದಿ ಮಾಡಿರುವ ಈ ಕಾರ್ಯದ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಶಂಸೆಯ ಸುರಿಮಳೆಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com