ಕೋವಿಡ್-19 ರಿಲೀಫ್ ಪ್ಯಾಕೇಜ್: ಸಣ್ಣ ರೈತರಿಗೆ ಘೋಷಿಸಿರುವ ಆರ್ಥಿಕ ನೆರವು ಕೃಷಿಕರ ಮನಗೆದ್ದಿದೆಯೇ?

ಆತ್ಮ ನಿರ್ಭರ ಭಾರತ ಅಭಿಯಾನದ ಪರಿಹಾರ ಕ್ರಮಗಳ ಎರಡನೇ ಭಾಗವಾಗಿ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಕೃಷಿ ವಲಯಕ್ಕೆ ಒಂದಷ್ಟು ಆರ್ಥಿಕ ನೆರವನ್ನು ಘೋಷಿಸಿದ್ದರು. 
For representational purposes
For representational purposes
Updated on

ನವದೆಹಲಿ: ಆತ್ಮ ನಿರ್ಭರ ಭಾರತ ಅಭಿಯಾನದ ಪರಿಹಾರ ಕ್ರಮಗಳ ಎರಡನೇ ಭಾಗವಾಗಿ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಕೃಷಿ ವಲಯಕ್ಕೆ ಒಂದಷ್ಟು ಆರ್ಥಿಕ ನೆರವನ್ನು ಘೋಷಿಸಿದ್ದರು. 

ಸಣ್ಣ ರೈತರಿಗೆ 4 ಲಕ್ಷ ರೂಪಾಯಿವರೆಗೆ ಸಾಲ ಸೌಲಭ್ಯ, ಹೊಸದಾಗಿ 25 ಲಕ್ಷ ಕಿಸಾನ್ ಕ್ರೆಡಿಟ್ ಕಾರ್ಡುಗಳನ್ನು ಮಂಜೂರು, ಸಕಾಲದಲ್ಲಿ ಸಾಲ ಮರುಪಾವತಿಸಿರುವ ರೈತರಿಗೆ ಮೇ 31ರವರೆಗೆ ಬಡ್ಡಿ ರಿಯಾಯಿತಿ, ಸಣ್ಣ ರೈತರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಮಂಜೂರು, ಮಾರ್ಚ್ ಮತ್ತು ಏಪ್ರಿಲ್ ತಿಂಗಳಲ್ಲಿ ರೈತರಿಗೆ 86,600 ಕೋಟಿ ರೂ ಸಾಲ ಸೇರಿದಂತೆ ಕೃಷಿ ಕ್ಷೇತ್ರಕ್ಕೆ ಆರ್ಥಿಕ ನೆರವನ್ನು ನಿರ್ಮಲಾ ಸೀತಾರಾಮನ್ ಘೋಷಿಸಿದ್ದರು. ಇದರಿಂದಾಗಿ 3 ಕೋಟಿ ಉಪಯೋಗವಾಗಲಿದೆ.  

ಕೇಂದ್ರದ ಘೋಷಣೆ ಬಗ್ಗೆ ರೈತ ಒಕ್ಕೂಟದ ಪ್ರತಿಕ್ರಿಯೆ ಏನು?

ಕೇಂದ್ರ ಸರ್ಕಾರ ಮೇ.14 ರಂದು ಪ್ರಕಟಿಸಿರುವ ಅರ್ಥಿಕ ನೆರವು ಘೋಷಣೆಗಳಿಂದ ಒಂದಷ್ಟು ರೈತರಿಗೆ ಅನುಕೂಲವಾಗಬಹುದು. ಆದರೆ ರೈತರು ತಮ್ಮ ಬೆಳೆಗಳಿಗೆ ಮಾರುಕಟ್ಟೆಯನ್ನು ಹುಡುಕುತ್ತಿರುವಾಗ, ತೀವ್ರವಾದ ನಷ್ಟ ಎದುರಿಸುತ್ತಿರುವಾಗ ಇನ್ನಷ್ಟು ಸಾಲ ವಿಸ್ತರಣೆ ಮಾಡುವುದು ರೈತರ ಸಂಕಷ್ಟಕ್ಕೆ ಪರಿಹಾರವಾಗುವುದಿಲ್ಲ ಎಂದು ಅಖಿಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿಯ (ಎಐಐಕೆಎಸ್ ಸಿಸಿ) ಸದಸ್ಯರು ಹೇಳಿದ್ದಾರೆ.

14.5 ಕೋಟಿ ಇರುವ ಕೃಷಿಕರ ಸಮುದಾಯದಲ್ಲಿ ಕೇಂದ್ರ ಸರ್ಕಾರ ಘೋಷಣೆ ಮಾಡಿರುವ ಪರಿಹಾರ ಕ್ರಮಗಳಿಂದ 5 ಕೋಟಿ ರೈತರು ಹೊರಗುಳಿದಿದ್ದಾರೆ ಎಂದು  ಎಐಐಕೆಎಸ್ ಸಿಸಿ ಹೇಳಿದ್ದಾರೆ. 

ಇದೇ ವೇಳೆ ಆರ್ ಎಸ್ಎಸ್ ನ ಭಾಗವಾಗಿರುವ ಭಾರತೀಯ ಕಿಸಾನ್ ಸಂಘದ ಬದ್ರಿ ನಾರಾಯಣ ಚೌಧರಿ ಕೇಂದ್ರ ಸರ್ಕಾರದ ಘೋಷಣೆಗಳನ್ನು ಸ್ವಾಗತಿಸಿದ್ದಾರೆ. ಆದರೆ ಇದೇ ಮಾದರಿಯಲ್ಲಿ ಮತ್ತಷ್ಟು ಕ್ರಮಗಳನ್ನು ಕೈಗೊಳ್ಳಬೇಕೆಂದೂ ಅಭಿಪ್ರಾಯಪಟ್ಟಿದ್ದಾರೆ. 


ಸರ್ಕಾರ ಪಿಎಂ-ಕಿಸಾನ್ ಯೋಜನೆ ಘೋಷಣೆಯಾದಾಗ 14.5 ಕೋಟಿ ರೈತರಿಗೆ ಇದರಿಂದ ಲಾಭವಾಗುತ್ತದೆ ಎಂದಿತ್ತು. ಆದರೆ 3 ಕೋಟಿ ರೈತರಷ್ಟೇ ಕೃಷಿ ಸಾಲ ಪಡೆದಿದ್ದಾರೆ. ಮುಂದಿನ ಋತುವಿಗೆ ಸಾಲಮನ್ನ ಅಥವಾ ಬಡ್ಡಿ ರಹಿತ ಸಾಲವನ್ನೂ ಘೋಷಣೆ ಮಾಡಿಲ್ಲ ಮೇ.31 ವರೆಗೆ ಮಾತ್ರ ಬಡ್ಡಿಗೆ ವಿನಾಯಿತಿ ನೀಡಿದ್ದಾರೆ ಎಂದು ರೈತ ಒಕ್ಕೂಟ ಆಕ್ಷೇಪಿಸಿದೆ 

ಆದರೆ ರೈತ ಒಕ್ಕೂಟಗಳು 29,500 ಗ್ರಾಮೀಣ ಬ್ಯಾಂಕುಗಳಿಗೆ ನಬಾರ್ಡ್‌ನಿಂದ ಧನಸಹಾಯದ ಘೋಷಣೆಯನ್ನು ಸ್ವಾಗತಿಸಿವೆ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com