ಕಾಸರಗೋಡು ಕನ್ನಡಿಗರ ಹೋರಾಟಕ್ಕೆ ಜಯ: ಮಂಜೇಶ್ವರಕ್ಕೆ 'ಭಾಷಾ ಅಲ್ಪಸಂಖ್ಯಾತ ಸ್ಥಾನಮಾನ' ನೀಡಿದ ಕೇರಳ ಸರ್ಕಾರ

ಕೇರಳ ಗಡಿ ಜಿಲ್ಲೆ ಕಾಸರಗೋಡಿನ ಕನ್ನಡಿಗರ ಪಾಲಿಗಿದು ದೊಡ್ದ ಜಯವೇ ಸರಿ! ಕಾಸರಗೋಡು ಜಿಲ್ಲೆ ಮಂಜೇಶ್ವರ ತಾಲೂಕು ವ್ಯಾಪ್ತಿಯ ಪ್ರದೇಶವನ್ನು " ಕನ್ನಡ ಭಾಷೆಯ ಅಲ್ಪಸಂಖ್ಯಾತ ಪ್ರದೇಶ" ಎಂಬುದಾಗಿ ಕೇರಳ ಸರ್ಕಾರ ಘೋಷಣೆ ಮಾಡಿದೆ.
ಕಾಸರಗೋಡು ಕನ್ನಡಿಗರ ಹೋರಾಟಕ್ಕೆ ಜಯ: ಮಂಜೇಶ್ವರಕ್ಕೆ 'ಭಾಷಾ ಅಲ್ಪಸಂಖ್ಯಾತ ಸ್ಥಾನಮಾನ' ನೀಡಿದ ಕೇರಳ ಸರ್ಕಾರ
Updated on

ಕಾಸರಗೋಡು: ಕೇರಳ ಗಡಿ ಜಿಲ್ಲೆ ಕಾಸರಗೋಡಿನ ಕನ್ನಡಿಗರ ಪಾಲಿಗಿದು ದೊಡ್ದ ಜಯವೇ ಸರಿ! ಕಾಸರಗೋಡು ಜಿಲ್ಲೆ ಮಂಜೇಶ್ವರ ತಾಲೂಕು ವ್ಯಾಪ್ತಿಯ ಪ್ರದೇಶವನ್ನು " ಕನ್ನಡ ಭಾಷೆಯ ಅಲ್ಪಸಂಖ್ಯಾತ ಪ್ರದೇಶ " ಎಂಬುದಾಗಿ ಕೇರಳ ಸರ್ಕಾರ ಘೋಷಣೆ ಮಾಡಿದೆ. ಈ ಸಂಬಂಧ ಮಂಜೇಶ್ವರ ತಾಲ್ಲೂಕಿಗೆ ಕನ್ನಡ ಭಾಷೆಯ ಅಲ್ಪಸಂಖ್ಯಾತ ಪ್ರದೇಶ ಸ್ಥಾನಮಾನವನ್ನು ನೀಡಿ ಕೇರಳ ಸರ್ಕಾರ ಆದೇಶ ಹೊರಡಿಸಿದೆ.

ಕನ್ನಡ ಭಾಷೆಯ ಅಲ್ಪಸಂಖ್ಯಾತ ಪ್ರದೇಶವಾದ ಕಾಸರಗೋಡವನ್ನು ವಿಭಜಿಸುವ ಮೂಲಕ ಮಂಜೇಶ್ವರನನ್ನು ಪ್ರತ್ಯೇಕ ತಾಲೂಕಾಗಿ ಮಾಡಲಾಗಿತ್ತಾದರೂ ಆ ವೇಳೆ  ಭಾಷಾ ಅಲ್ಪಸಂಖ್ಯಾತ ಸ್ಥಾನಮಾನವನ್ನು ಮಂಜೇಶ್ವರಕ್ಕೆ ನೀಡಲಾಗಿರಲಿಲ್ಲ. ಇದರಿಂದಾಗಿ ಅಲ್ಲಿನ ಕನ್ನಡಿಗರು ಕೆಲ ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗಿದ್ದರು. ಇದನ್ನು ಗಮನದಲ್ಲಿಟ್ಟುಕೊಂಡು ಪ್ರದೇಶ  ಕರ್ನಾಟಕ ಸಮಿತಿಯ ಅಧ್ಯಕ್ಷ ಮತ್ತು ವಕೀಲ ಕೆ ಎಂ ಬಳ್ಳಕುರಾಯ2014 ರಲ್ಲಿಯೇ ಮಂಜೇಶ್ವರ ತಾಲ್ಲೂಕಿಗೆ ಈ ಸ್ಥಾನಮಾನ ನೀಡುವ ಕುರಿತು ಹೋರಾಟಕ್ಕೆ ಮುಂದಾಗಿದ್ದರು.  ಈ ಬೇಡಿಕೆಯನ್ನು ಜಿಲ್ಲಾಧಿಕಾರಿ ಮತ್ತು ರಾಜ್ಯ ಅಲ್ಪಸಂಖ್ಯಾತರ ಸಮಿತಿಯೊಂದಿಗೆ ಸಕ್ರಿಯವಾಗಿ ಚರ್ಚಿಸಲಾಗಿ ಇದರ ಸಂಬಂಧ ಪ್ರತಿಭಟನೆ, ಮುಷ್ಕರಗಳು ಸಹ ನಡೆದಿದ್ದವು. 

ಇಷ್ಟೇ ಅಲ್ಲದೆ . ಒಂದು ನಿಯೋಗವು ತಿರುವನಂತಪುರಂಗೆ ಭೇಟಿ ನೀಡಿ ಮಂಜೇಶ್ವರವನ್ನು ಭಾಷಾ ಅಲ್ಪಸಂಖ್ಯಾತ ಪ್ರದೇಶವೆಂದು ಘೋಷಿಸುವ ಅಗತ್ಯತೆಯ ಬಗ್ಗೆ ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಟ್ಟಿತು. ಇದಾಗಿ ಕಳೆದ ಆರು ತಿಂಗಳಿನಿಂದ  ಮುಖ್ಯಮಂತ್ರಿ ಕಚೇರಿಯಲ್ಲಿ ಬಾಕಿ ಉಳಿದಿದ್ದ ಈ ವಿಷಯಕ್ಕೆ ಸಂಬಂಧಿಸಿದ ದಾಖಲೆಗಳಿದ್ದ ಕಡತವು ಇದೀಗ ಮುಖ್ಯಮಂತ್ರಿಯವರ ಸಹಿಯೊಂದಿಗೆ ಮರಳಿದೆ. ಮಂಜೇಶ್ವರ ಕನ್ನಡಿಗರು ಇನ್ನು ಮುಂದೆ ಕೇರಳದ ಕನ್ನಡ ಭಾಷಾ ಅಲ್ಪಸಂಖ್ಯಾತ ಸೌಲಭ್ಯಗಳನ್ನು ಮತ್ತು ಕರ್ನಾಟಕದ ಗದಿನಾಡ ಕನ್ನಡಿಗ ಸೌಲಭ್ಯಗಳನ್ನು ಪಡೆಯಲಿದ್ದಾರೆ. 

ಯಾವುದೇ ಬಹುಸಂಖ್ಯಾತ ಮಲಯಾಳಿ ಜನರು ಈ ಸೌಲಭ್ಯವನ್ನು ಪಡೆಯಲು ಸಾಧ್ಯವಾಗದ ರೀಇ ಕನ್ನಡಿಗರು ಜಾಗರೂಕರಾಗಿರಬೇಕಿದೆ. ಐದೇ ಉದ್ದೇಶದಿಂದ ಪ್ರಯತ್ನ ನಡೆಸಬೇಕು.ಈಗಾಗಲೇ ಸ್ಥಳೀಯರು ಕಾಸರ್‌ಗೋಡು ಡ್ ಜಿಲ್ಲೆಯ ಭಾಷಾ ಅಲ್ಪಸಂಖ್ಯಾತರು ತಮಗೆ ಸಾಕಷ್ಟು ಅನುಕೂಲ ಸಿಕ್ಕದಿರುವ ಬಗ್ಗೆ ಆರೋಪಿಸಿದ್ದಾರೆ.ಇಲ್ಲಿನ ಪ್ರತಿಯೊಂದು ಸರ್ಕಾರಿ ಕಚೇರಿಯಲ್ಲಿ ಕನ್ನಡ-ತಿಳಿದಿರುವ ಅಧಿಕಾರಿ ಇರಬೇಕು ಎಂಬ ನಿಯಮವಿದ್ದರೂ, ಮಲಯಾಳಿ ಅಧಿಕಾರಿಗಳು ಇದನ್ನು ವಿರೋಧಿಸುತ್ತಿದ್ದಾರೆ. ಭಾಷಾ ಅಲ್ಪಸಂಖ್ಯಾತ ಪ್ರದೇಶದ ಪ್ರೌ ಢ ಶಾಲಾ ಮುಖ್ಯೋಪಾಧ್ಯಾಯರು, ಸಹಾಯಕ ಶಿಕ್ಷಣ ಅಧಿಕಾರಿ ಮತ್ತು ಜಿಲ್ಲಾ ಶಿಕ್ಷಣ ಅಧಿಕಾರಿ ಹುದ್ದೆಗಳನ್ನು ಕನ್ನಡಿಗರಿಗೆ ಮೀಸಲಿಡಲಾಗಿದೆ ಆದರೆ ಬಹುಸಂಖ್ಯಾತರಿರುವ  ಹಾಗೂ ಅವರು ಪ್ರತಿನಿಧಿಸುವ  ಸಂಘಗಳು ಈ ಸೌಲಭ್ಯಗಳನ್ನು ಕಸಿದುಕೊಳ್ಳಲು ಪ್ರಯತ್ನಿಸುತ್ತಿವೆ. ಕನ್ನಡಿಗರು ತಮ್ಮ ಮಕ್ಕಳು ಕನ್ನಡ ಮಧ್ಯಮ ಶಾಲೆಗಳಲ್ಲಿ ಅಧ್ಯಯನ ಮಾಡುವುದನ್ನು ಖಾತ್ರಿಪಡಿಸಿಕೊಳ್ಳುವ ಮೂಲಕ ತಮ್ಮ ಹಿತಾಸಕ್ತಿಗಳನ್ನು ಪೂರೈಸಿಕೊಳ್ಲಲು ಇದು ಅನುಕೂಲವಾಗಲಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com