ಮಧ್ಯಪ್ರದೇಶ: ದಲಿತರಿಂದ ಥಳಿತ, ಮೂತ್ರ ಸೇವನೆಗೆ ಒತ್ತಾಯ: ಆತ್ಮಹತ್ಯೆಗೆ ಶರಣಾದ ಯುವಕ

ಕ್ಷುಲ್ಲಕ ಕಾರಣಕ್ಕಾಗಿ ಯುವಕನ ಮೇಲೆ ದಲಿತ ಸಮುದಾಯದ ಮೂವರು ಹಲ್ಲೆ ನಡೆಸಿದ್ದು ಮೂತ್ರ ಸೇವನೆ ಒತ್ತಾಯಿಸಿದ ಪರಿಣಾಮ ಹಲ್ಲೆಗೊಳಗಾಗಿದ್ದ ಯುವಕ ಮನನೊಂದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಧ್ಯಪ್ರದೇಶದ ಶಿವಪುರಿಯಲ್ಲಿ ನಡೆದಿದೆ. 
ಮಧ್ಯಪ್ರದೇಶ: ದಲಿತರಿಂದ ಥಳಿತ, ಮೂತ್ರ ಸೇವನೆಗೆ ಒತ್ತಾಯ: ಆತ್ಮಹತ್ಯೆಗೆ ಶರಣಾದ ಯುವಕ
ಮಧ್ಯಪ್ರದೇಶ: ದಲಿತರಿಂದ ಥಳಿತ, ಮೂತ್ರ ಸೇವನೆಗೆ ಒತ್ತಾಯ: ಆತ್ಮಹತ್ಯೆಗೆ ಶರಣಾದ ಯುವಕ
Updated on

ಭೋಪಾಲ್: ಕ್ಷುಲ್ಲಕ ಕಾರಣಕ್ಕಾಗಿ ಯುವಕನ ಮೇಲೆ ದಲಿತ ಸಮುದಾಯದ ಮೂವರು ಹಲ್ಲೆ ನಡೆಸಿದ್ದು ಮೂತ್ರ ಸೇವನೆ ಒತ್ತಾಯಿಸಿದ ಪರಿಣಾಮ ಹಲ್ಲೆಗೊಳಗಾಗಿದ್ದ ಯುವಕ ಮನನೊಂದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಧ್ಯಪ್ರದೇಶದ ಶಿವಪುರಿಯಲ್ಲಿ ನಡೆದಿದೆ. 

ಭೋಪಾಲ್ ನಿಂದ 380 ಕಿ,.ಮೀ ದೂರದಲ್ಲಿರುವ ಸರೋಜ್ ಗ್ರಾಮದಲ್ಲಿ ಈ ಘಟನೆ ನಡೆದಿದ್ದು ವಿಕಾಸ್ ಶರ್ಮ ಎಂಬ ಯುವಕ ತನ್ನ ಮನೆಯಲ್ಲೇ ನೇಣಿಗೆ ಶರಣಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನಾ ಸ್ಥಳದಲ್ಲಿ ಆತ್ಮಹತ್ಯೆಗೂ ಮುನ್ನ ಬರೆದಿರುವ ಪತ್ರ ಹಾಗೂ ವಿಡಿಯೋ ದೊರೆತಿದೆ. ವಿಕಾಸ್ ಧಾರ್ಮಿಕ ಪ್ರಕ್ರಿಯೆಗಳಿಗಾಗಿ ನೀರು ತರಲು ಹೋಗಿದ್ದಾಗ ದಲಿತರ ಪಾತ್ರೆಗಳ ಮೇಲೆ ನೀರು ಬಿದ್ದಿದ್ದು ಇದೇ ವಾಗ್ವಾದಕ್ಕೆ ಕಾರಣವಾಗಿದೆ. 

ಘಟನೆಯಿಂದ ಆಕ್ರೋಶಗೊಂಡ ದಲಿತ ಯುವಕರು ವಿಕಾಸ್ ಶರ್ಮಾನನ್ನು ಥಳಿಸಿ ಧಾರ್ಮಿಕ ಕ್ರಿಯೆಗಳಿಗಾಗಿ ಇಟ್ಟುಕೊಂಡಿದ್ದ ಲೋಟದಲ್ಲಿ ಮೂತ್ರ ವಿಸರ್ಜನೆ ಮಾಡಿ ಅದನ್ನು ಸೇವಿಸುವಂತೆ ಒತ್ತಾಯಿಸಿದ್ದಾರೆ. ಇದರಿಂದ ಮನನೊಂದ ವಿಕಾಸ್ ಶರ್ಮಾ ಮನೆಗೆ ಬಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆರೋಪಿಗಳನ್ನು ಆತ್ಮಹತ್ಯೆಗೆ ಪ್ರಚೋದನೆ ನೀಡಿದ, ಐಪಿಸಿ 306, 323 ಸೆಕ್ಷನ್ ಅಡಿಯಲ್ಲಿ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಅಡಿ ಪ್ರಕರಣ ದಾಖಲಿಸಲಾಗಿದೆ. 
 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com