ಗರ್ಭಿಣಿ ಪತ್ನಿ, ಮಗುವನ್ನು 700 ಕಿಮೀ ಬಂಡಿಯಲ್ಲಿ ಎಳೆದು ಸಾಗಿದ ವ್ಯಕ್ತಿ! 

ಲಾಕ್ ಡೌನ್ ಪರಿಣಾಮ ಮಧ್ಯಪ್ರದೇಶದ ಕಾರ್ಮಿಕನೋರ್ವ ತನ್ನ ಊರಿಗೆ ತಲುಪಲು 700 ಕಿ.ಮೀ ನಷ್ಟು ದೂರ ಗರ್ಭಿಣಿ ಹಾಗೂ ಮಗುವನ್ನು ಬಂಡಿಯಲ್ಲಿ ಎಳೆದು ಸಾಗಿದ್ದಾನೆ. 
ಗರ್ಭಿಣಿ ಪತ್ನಿ, ಮಗುವನ್ನು 700 ಕಿಮೀ ಬಂಡಿಯಲ್ಲಿ ಎಳೆದು ಸಾಗಿದ ವ್ಯಕ್ತಿ!
ಗರ್ಭಿಣಿ ಪತ್ನಿ, ಮಗುವನ್ನು 700 ಕಿಮೀ ಬಂಡಿಯಲ್ಲಿ ಎಳೆದು ಸಾಗಿದ ವ್ಯಕ್ತಿ!

ನವದೆಹಲಿ: ಲಾಕ್ ಡೌನ್ ಪರಿಣಾಮ ಮಧ್ಯಪ್ರದೇಶದ ಕಾರ್ಮಿಕನೋರ್ವ ತನ್ನ ಊರಿಗೆ ತಲುಪಲು 700 ಕಿ.ಮೀ ನಷ್ಟು ದೂರ ಗರ್ಭಿಣಿ ಹಾಗೂ ಮಗುವನ್ನು ಬಂಡಿಯಲ್ಲಿ ಎಳೆದು ಸಾಗಿದ್ದಾನೆ. ಹೈದರಾಬಾದ್ ನಿಂದ ತನ್ನ ಊರಿಗೆ ತೆರಳಲು ಮಧ್ಯಪ್ರದೇಶದ ಕಾರ್ಮಿಕ ಎರಡು ವಾರಗಳ ಪ್ರಯಾಣದ ನಂತರ ಮಧ್ಯಪ್ರದೇಶಕ್ಕೆ ತಲುಪಿಸಿದ್ದಾರೆ.  

ಎರಡು ವರ್ಷದ ಮಗು ಹಾಗೂ ಗರ್ಭಿಣಿ ಪತ್ನಿಯನ್ನು ಮರದ ಬಂಡಿಯ ಮೇಲೆ ಕೂರಿಸಿ ಎಳೆದು ಕರೆತಂದಿದ್ದಾರೆ.ಈ ಮಾಹಿತಿ ಲಭ್ಯವಾಗುತ್ತಿದ್ದಂತೆಯೇ ಉಪವಿಭಾಗಾಧಿಕಾರಿ ನಿತೇಶ್ ಭಾರ್ಗವ ಕಾರ್ಮಿಕ ಕುಟುಂಬಕ್ಕೆ ಮನೆಗೆ ತೆರಳಲು ಸಾರಿಗೆ ವ್ಯವಸ್ಥೆ ಮಾಡಿದ್ದಾರೆ. ಕಾರ್ಮಿಕ ಕುಟುಂಬ ಮಧ್ಯಪ್ರದೇಶ-ಮಹಾರಾಷ್ಟ್ರದ ಗಡಿಯಲ್ಲಿ ಬಂಡಿಯಲ್ಲಿ ತೆರಳುತ್ತಿರುವುದು ಕಂಡುಬಂದಿತ್ತು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com