ಲಾಕ್ ಡೌನ್ 4.0: ಆಯ್ದ ಪ್ರದೇಶಗಳಲ್ಲಿ ವಿಮಾನ, ಬಸ್ ಸಂಚಾರಕ್ಕೆ ಅವಕಾಶ- ಮೂಲಗಳು

ಮೇ 18ರಿಂದ ಲಾಕ್ ಡೌನ್ 4.0 ಜಾರಿಯಾಗಲಿದ್ದು, ಆಯ್ದ ಪ್ರದೇಶಗಳಲ್ಲಿ ವಿಮಾನ, ಬಸ್ ಗಳ ಸಂಚಾರಕ್ಕೆ ಅವಕಾಶ ದೊರೆಯುವ ಸಾಧ್ಯತೆ ಇದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ವಿಮಾನಗಳ ಚಿತ್ರ
ವಿಮಾನಗಳ ಚಿತ್ರ

ನವದೆಹಲಿ: ಮೇ 18ರಿಂದ ಲಾಕ್ ಡೌನ್ 4.0 ಜಾರಿಯಾಗಲಿದ್ದು, ಆಯ್ದ ಪ್ರದೇಶಗಳಲ್ಲಿ ವಿಮಾನ, ಬಸ್  ಗಳ ಸಂಚಾರಕ್ಕೆ ಅವಕಾಶ ದೊರೆಯುವ ಸಾಧ್ಯತೆ ಇದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಈ ವಾರದ ಆರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಕೋರಿರುವ ರಾಜ್ಯಗಳ ನೀಲನಕ್ಷೆ ಹಾಗೂ ಅದು ಪರಿಸ್ಥಿತಿಗೆ ಹೇಗೆ ಹೊಂದಿಕೊಳ್ಳಲಿದೆ ಎಂಬುದರ ಆಧಾರದ ಮೇಲೆ ಪ್ರದೇಶಗಳನ್ನು ಆಯ್ಕೆ ನಡೆಯಲಿದೆ ಎಂದು  ಲಾಕ್‌ಡೌನ್ 4.0 ಮಾರ್ಗಸೂಚಿಗಳನ್ನು ರೂಪಿಸುವಲ್ಲಿ ತೊಡಗಿರುವ  ಗೃಹ ಸಚಿವಾಲಯದ ಅಧಿಕಾರಿಗಳು ತಿಳಿಸಿರುವುದಾಗಿ ಸುದ್ದಿವಾಹಿನಿಯೊಂದು ವರದಿ ಮಾಡಿದೆ.

ಇತ್ತೀಚಿಗೆ ಪ್ರಧಾನಿ ನರೇಂದ್ರ ಮೋದಿ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ನಡೆಸಿದ ವಿಡಿಯೋ ಸಂವಾದದಲ್ಲಿ ಹಾಟ್ ಸ್ಪಾಟ್ ಗಳನ್ನು ನಿರ್ಧರಿಸುವ ಅಧಿಕಾರವನ್ನು ತಮ್ಮಗೆ ನೀಡಬೇಕೆಂದು ಬಹು ರಾಜ್ಯಗಳ ಬೇಡಿಕೆಯಾಗಿದ್ದು, ಇದಕ್ಕೆ ಕೇಂದ್ರ ಸರ್ಕಾರ ಅನುಮತಿಸುವ ಸಾಧ್ಯತೆ ಇದೆ. ಲಾಕ್ ಡೌನ್ 4.0 ಹೊಸ ನಿಯಮಗಳೊಂದಿಗೆ ಸಂಪೂರ್ಣವಾಗಿ ವಿಭಿನ್ನವಾಗಿರಲಿದೆ ಎಂದು ನರೇಂದ್ರ ಮೋದಿ ದೇಶವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ  ಸ್ಪಪ್ಟಪಡಿಸಿದ್ದಾರೆ.

ಹಾಟ್ ಸ್ಪಾಟ್ ಯೇತರ ಪ್ರದೇಶಗಳಲ್ಲಿ ನಿಗದಿತ ಪ್ರಯಾಣಿಕರೊಂದಿಗೆ ಕಾರ್ಯಾರಂಭ ಮಾಡಲಿವೆ. ಪ್ರಯಾಣಿಕರ ಸಂಖ್ಯೆ ನಿರ್ಬಂಧದೊಂದಿಗೆ ಆಟೋ, ಟ್ಯಾಕ್ಸಿಗಳಿಗೆ ಅವಕಾಶ ನೀಡಲಾಗುವುದು, ಇವುಗಳು ಕಂಟೈನ್ ಮೆಂಟ್ ಯೇತರ ವಲಯಗಳಲ್ಲಿ ಜಿಲ್ಲೆಯೊಳಗೆ ಸಂಚರಿಸಲು ಅವಕಾಶ ನೀಡಲಾಗುವುದು ಎಂದು ಅಧಿಕಾರಿಗಳು ವಿವರಿಸಿದ್ದಾರೆ. 

ಪ್ರಯಾಣದ ಪಾಸುಗಳನ್ನು ಹೊಂದಿರುವರಿಗೆ ಅಂತರ ರಾಜ್ಯ ಭೇಟಿಗೂ ಅವಕಾಶ ನೀಡುವ ಸಾಧ್ಯತೆ ಇದೆ. ಮುಂದಿನ ವಾರದಿಂದ ದೇಶಿಯ ಕ್ಷೇತ್ರದವರಿಗಾಗಿ ವಿಮಾನ ಸಂಚಾರ ಆರಂಭಿಸಲು ಸರ್ಕಾರ ಯೋಜಿಸುತ್ತಿದೆ. ರೈಲು ಸೇವೆ ಈಗಾಗಲೇ ಆರಂಭವಾಗಿದೆ. ಅವಶ್ಯಕ ವಸ್ತುಗಳಲ್ಲದೇ ಇತರ ಎಲ್ಲಾ ವಸ್ತುಗಳ ಹೋಮ್ ಡೆಲಿವರಿಗೆ ಅನುಮತಿ ನೀಡುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ. 

ಕೊರೋನಾವೈರಸ್ ತಡೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಎಲ್ಲಾ ರಾಜ್ಯಗಳು ಹೇಳಿದ್ದು,ಕಂಟೈನ್ ಮೆಂಟ್ ವಲಯಗಳಲ್ಲಿ ಯಾವುದೇ ಚಟುವಟಿಕೆಗಳಲ್ಲಿ ಅವಕಾಶ ನೀಡುವುದಿಲ್ಲ ಎಂದು ತಿಳಿಸಿವೆ. ಮಹಾರಾಷ್ಟ್ರದಲ್ಲಿ ಹೆಚ್ಚಿನ ಸಂಖ್ಯೆಯ ಸೋಂಕು ಕಂಡುಬಂದಿದ್ದು, ಲಾಕ್ ಡೌನ್ ವಿಸ್ತರಣೆಗೆ ಯೋಜಿಸಿದ್ದಾರೆ ಎಂದು ಮತ್ತೋರ್ವ ಅಧಿಕಾರಿ ತಿಳಿಸಿದ್ದಾರೆ.

 ಗುಜರಾತ್ ಎರಡನೇ ಸ್ಥಾನದಲ್ಲಿದ್ದು, ಎಲ್ಲ ನಗರಗಳಲ್ಲಿ ಆರ್ಥಿಕ ಚಟುವಟಿಕೆಗಳು ಪುನರ್ ಆರಂಭಗೊಂಡಿವೆ. ಅನೇಕ ಕ್ಷೇತ್ರಗಳನ್ನು ಓಪನ್ ಮಾಡುವಂತೆ ಆಂಧ್ರಪ್ರದೇಶ , ಕೇರಳ, ಕರ್ನಾಟಕ, ಗುಜರಾತ್ ಮತ್ತು ದೆಹಲಿ ರಾಜ್ಯಗಳು ಸಲಹೆ ನೀಡಿವೆ. ಪ್ರವಾಸೋದ್ಯಮ ಕ್ಷೇತ್ರವನ್ನು ಪುನರುಜ್ಜೀವನಗೊಳಿಸಲು ಮೆಟ್ರೋ ಸೇವೆಗಳು, ಸ್ಥಳೀಯ ರೈಲುಗಳು, ದೇಶೀಯ ವಿಮಾನಗಳು, ರೆಸ್ಟೋರೆಂಟ್‌ಗಳು ಮತ್ತು ಹೋಟೆಲ್‌ಗಳನ್ನು ಪುನರಾರಂಭಿಸಲು ಕೇರಳ ಬಯಸಿದೆ. ಬಿಹಾರ, ಜಾರ್ಖಂಡ್, ಒಡಿಶಾ ರಾಜ್ಯಗಳು ಕಠಿಣ ಲಾಕ್ ಡೌನ್ ಮುಂದುವರಿಕೆಗ ಒತ್ತಾಯಿಸಿವೆ ಎಂದು ಅವರು ತಿಳಿಸಿದ್ದಾರೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com