ಕೇಂದ್ರ ಸರ್ಕಾರ ಘೋಷಿಸಿರುವುದು 20 ಲಕ್ಷ ಕೋಟಿ ಪ್ಯಾಕೇಜ್ ಅಲ್ಲ, ಕೇವಲ 3 ಲಕ್ಷ ಕೋಟಿ- ಕಾಂಗ್ರೆಸ್ 

ಲಾಕ್ ಡೌನ್ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ 20 ಲಕ್ಷ ಕೋಟಿ ಆರ್ಥಿಕ ಪ್ಯಾಕೇಜ್ ಘೋಷಿಸಿಲ್ಲ, ಕೇವಲ 3. 22 ಲಕ್ಷ ಕೋಟಿ ಮಾತ್ರ ಘೋಷಿಸಿದೆ. ಇದು ಜಿಡಿಪಿಯ ಶೇ. 1. 6 ರಷ್ಟು ಮಾತ್ರ ಆಗಿದೆ ಎಂದು ಕಾಂಗ್ರೆಸ್ ಮುಖಂಡ ಆನಂದ್ ಶರ್ಮಾ ಹೇಳಿದ್ದಾರೆ.
ಕಾಂಗ್ರೆಸ್ ಮುಖಂಡ ಆನಂದ್ ಶರ್ಮಾ
ಕಾಂಗ್ರೆಸ್ ಮುಖಂಡ ಆನಂದ್ ಶರ್ಮಾ

ನವದೆಹಲಿ: ಲಾಕ್ ಡೌನ್ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ 20 ಲಕ್ಷ ಕೋಟಿ ಆರ್ಥಿಕ ಪ್ಯಾಕೇಜ್ ಘೋಷಿಸಿಲ್ಲ, ಕೇವಲ 3. 22 ಲಕ್ಷ ಕೋಟಿ ಮಾತ್ರ ಘೋಷಿಸಿದೆ. ಇದು ಜಿಡಿಪಿಯ ಶೇ. 1. 6 ರಷ್ಟು ಮಾತ್ರ ಆಗಿದೆ ಎಂದು ಕಾಂಗ್ರೆಸ್ ಮುಖಂಡ ಆನಂದ್ ಶರ್ಮಾ ಹೇಳಿದ್ದಾರೆ.

ನನ್ನ ಲೆಕ್ಕ ಸರಿಯಲ್ಲ ಎಂಬುದನ್ನು ಸಾಬೀತುಪಡಿಸಲು ಸರ್ಕಾರಕ್ಕೆ ಸವಾಲು ಹಾಕುವುದಾಗಿ ಹೇಳಿದ ಆನಂದ್ ಶರ್ಮಾ, ಈ ವಿಚಾರದಲ್ಲಿ ಹಣಕಾಸು ಸಚಿವರೊಂದಿಗೆ ಚರ್ಚೆಗೆ ಸಿದ್ಧ ಎಂದಿದ್ದಾರೆ.

ಕಾಂಗ್ರೆಸ್ ಪಕ್ಷದ ವಿರುದ್ಧ ನಿರ್ಮಾಲಾ ಸೀತಾರಾಮನ್ ವಾಗ್ದಾಳಿ ಕುರಿತಂತೆ ಪ್ರತಿಕ್ರಿಯಿಸಿದ ಆನಂದ್ ಶರ್ಮಾ, ವಿತ್ತ ಸಚಿವರಿಂದ ಗಂಭೀರವಾದದ್ದನ್ನು ನಿರೀಕ್ಷಿಸುತ್ತಿದ್ದೇವು. ಆದರೆ, ಅವರು, ಕಾಂಗ್ರೆಸ್ ವಿರುದ್ಧ ಕ್ಷುಲಕ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದರು. 

ಹಣಕಾಸು ಸಚಿವರು ಉತ್ತರ ನೀಡಬೇಕಿದೆ. ಪ್ರಶ್ನೆ ಮಾಡಬಾರದು, ಯೋಜನೆ ಕೊರತೆಯಿಂದಾಗಿ ರಸ್ತೆ ಮೇಲೆ ಕಾಲ್ನಡಿಯಲ್ಲಿ ತೆರಳುತ್ತಿರುವ ವಲಸೆ ಕಾರ್ಮಿಕರ ದುಸ್ಥಿತಿ ಬಗ್ಗೆ ಸರ್ಕಾರ ಉತ್ತರಿಸಬೇಕಾಗಿದೆ ಎಂದು ಶರ್ಮಾ ಹೇಳಿದರು. 

ಆರ್ಥಿಕ ಪ್ಯಾಕೇಜ್ ಹೆಸರಿನಲ್ಲಿ ಸರ್ಕಾರ ಜನರ ಗಮನವನ್ನು ಬೇರೆಡೆ ಸೆಳೆಯುತ್ತಿದೆ. ಪ್ರಧಾನಿ ಮೋದಿ ಈಗ ಮಾತನಾಡಬೇಕಾಗಿದೆ. ಸರ್ಕಾರ ಕೂಡಲೇ ಬಡ ನಾಗರಿಕರ ಕ್ಷಮೆ ಕೋರಬೇಕಾಗಿದೆ. ಅವರ ಮೂಲಭೂತ ಹಾಗೂ ಕಾನೂನಾತ್ಮಕ ಹಕ್ಕುಗಳನ್ನು ಉಲ್ಲಂಘನೆ ಮಾಡಲಾಗಿದೆ ಎಂದು ಆನಂದ್ ಶರ್ಮಾ ಆರೋಪಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com