ಅರ್ನಾಬ್ ಗೋಸ್ವಾಮಿ
ಅರ್ನಾಬ್ ಗೋಸ್ವಾಮಿ

ಅರ್ನಾಬ್ ಗೋಸ್ವಾಮಿ ವಿರುದ್ಧ ಎಫ್‌ಐಆರ್ ರದ್ದತಿಗೆ ಸುಪ್ರೀಂ ಕೋರ್ಟ್ ನಕಾರ

ಪಾಲ್ಘರ್ ಪ್ರಕರಣ ಟಿವಿ ಕಾರ್ಯಕ್ರಮ ಪ್ರಸಾರ ಸಂಬಂಧದಲ್ಲಿ ಪ್ರಕರಣದ ತನಿಖೆಯನ್ನು ವರ್ಗಾವಣೆ ಮಾಡುವಂತೆ ಕೋರಿ ರಿಪಬ್ಲಿಕ್ ಟಿವಿಯ ಪ್ರಧಾನ ಸಂಪಾದಕ ಅರ್ನಾಬ್ ಗೋಸ್ವಾಮಿ  ಸಲ್ಲಿಸಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ಮಂಗಳವಾರ ತಿರಸ್ಕರಿಸಿದೆ.ಅವರ ವಿರುದ್ಧ ದಾಖಲಾದ ಎಫ್‌ಐಆರ್‌ಗಳನ್ನು ರದ್ದುಗೊಳಿಸಲು ನ್ಯಾಯಾಲಯ ನಿರಾಕರಿಸಿತು. 
Published on

ನವದೆಹಲಿ: ಪಾಲ್ಘರ್ ಪ್ರಕರಣ ಟಿವಿ ಕಾರ್ಯಕ್ರಮ ಪ್ರಸಾರ ಸಂಬಂಧದಲ್ಲಿ ಪ್ರಕರಣದ ತನಿಖೆಯನ್ನು ವರ್ಗಾವಣೆ ಮಾಡುವಂತೆ ಕೋರಿ ರಿಪಬ್ಲಿಕ್ ಟಿವಿಯ ಪ್ರಧಾನ ಸಂಪಾದಕ ಅರ್ನಾಬ್ ಗೋಸ್ವಾಮಿ  ಸಲ್ಲಿಸಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ಮಂಗಳವಾರ ತಿರಸ್ಕರಿಸಿದೆ.ಅವರ ವಿರುದ್ಧ ದಾಖಲಾದ ಎಫ್‌ಐಆರ್‌ಗಳನ್ನು ರದ್ದುಗೊಳಿಸಲು ನ್ಯಾಯಾಲಯ ನಿರಾಕರಿಸಿತು.

ಏಪ್ರಿಲ್ 14 ರಂದು ಬಾಂದ್ರಾ ರೈಲ್ವೆ ನಿಲ್ದಾಣದ ಹೊರಗೆ ವಲಸಿಗರನ್ನು ಒಟ್ತಾಗಿಸಿದ್ದ ಕುರಿತಾದ ಟಿವಿ ಕಾರ್ಯಕ್ರಮವೊಂದಕ್ಕೆ ಸಂಬಂಧಿಸಿದಂತೆ ರಿಪಬ್ಲಿಕ್ ಟಿವಿಯ ಪ್ರಧಾನ ಸಂಪಾದಕ ಗೋಸ್ವಾಮಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಇದಲ್ಲದೆ, ಪಾಲ್ಘರ್ ಗುಂಪುದಾಳಿಗೆ ಸಂಬಂಧಿಸಿ  ಅವರ ಕಾರ್ಯಕ್ರಮಕ್ಕಾಗಿ ಅವರ ವಿರುದ್ಧ ಅನೇಕ ಎಫ್‌ಐಆರ್ ದಾಖಲಿಸಲಾಗಿದೆ. ಆ ಕಾರ್ಯಕ್ರಮದಲ್ಲಿ ಘಟನೆಯ ಬಗ್ಗೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಕೆಲವು ಪ್ರಶ್ನೆಗಳನ್ನು ಕೇಳಿದ್ದರು, ಅದರ ನಂತರ ಕಾಂಗ್ರೆಸ್ ಕಾರ್ಯಕರ್ತರು ವಿವಿಧ ರಾಜ್ಯಗಳಲ್ಲಿ ಅವರ ವಿರುದ್ಧ ದೂರು ನೀಡಿದ್ದರು.

ಇದೇ ವೇಳೆ ಗೋಸ್ವಾಮಿಯ ಬಂಧನದಿಂದ ಮಧ್ಯಂತರ ರಕ್ಷಣೆಯನ್ನು ಮೂರು ವಾರಗಳವರೆಗೆ ವಿಸ್ತರಿಸಲಾಗಿದೆ. 

ವಿಚಾರಣೆಯ ಸಮಯದಲ್ಲಿ, ಗೋಸ್ವಾಮಿ ಪರ ಹಾಜರಾದ ಹಿರಿಯ ವಕೀಲ ಹರೀಶ್ ಸಾಳ್ವೆ  ತನಿಖೆಯನ್ನು ಸಿಬಿಐನಂತಹ ಏಜೆನ್ಸಿಗೆ ವರ್ಗಾಯಿಸುವಂತೆ ನ್ಯಾಯಾಲಯವನ್ನು ಒತ್ತಾಯಿಸಿದ್ದರು. “ಅವರು ಅಹಿತಕರ ಧ್ವನಿಯನ್ನು ನಿಗ್ರಹಿಸಲು ಪ್ರಯತ್ನಿಸುತ್ತಿದ್ದಾರೆ. ಇದು ಪತ್ರಕರ್ತನನ್ನು ಗುರಿಯಾಗಿಸುವ ಉದ್ದೇಶಹೊಂದಿದೆ. ಎಲ್ಲಾ ದೂರುದಾರರು ಒಂದು ರಾಜಕೀಯ ಪಕ್ಷದ ಸದಸ್ಯರು. ಅವರಿಗೆ ಸರ್ಕಾರದೊಂದಿಗೆ ಸಮಸ್ಯೆ ಇದೆ. ಅವರು ಈ ಪತ್ರಕರ್ತರಿಗೆ ಪಾಠ ಕಲಿಸಲು ಬಯಸುತ್ತಾರೆ, ”ಎಂದು ಅವರು ವಾದಿಸಿದ್ದರು. 

ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಲು ಸಾಳ್ವೆ ಅವರ ಮನವಿಗೆ ಆಕ್ಷೇಪಿಸಿ, ಮಹಾರಾಷ್ಟ್ರ ಸರ್ಕಾರದ ಹಿರಿಯ ವಕೀಲಕಪಿಲ್ ಸಿಬಲ್, "ಸಿಬಿಐ ತನಿಖೆ ನಿಮ್ಮ ಕೈಗೆ(ಕೇಂದ್ರ ಸರ್ಕಾರ) ಹೋಗುತ್ತದೆ" ಎಂದು ಹೇಳಿದ್ದಾರೆ. ಗೋಸ್ವಾಮಿಗೆ ಕಿರುಕುಳ ನೀಡಲಾಗುತ್ತಿದೆ ಎನ್ನುವುದನ್ನು ಸಿಬಲ್ ನಿರಾಕರಿಸಿದ್ದಾರೆ. ಗೋಸ್ವಾಮಿ "ಈ ಕೋಮು ಹಿಂಸಾಚಾರ ನಿಲ್ಲಿಸಬೇಕು" ಎಂದು ಅವರು ಹೇಳಿದರು

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com