ಮೇವು ಹಗರಣ: ಲಾಲು ಯಾದವ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ
ರಾಂಚಿ: ಮೇವು ಹಗರಣದ ಆರೋಪದಲ್ಲಿ ಜೈಲು ಸೇರಿರುವ ಬಿಹಾರದ ಮಾಜಿ ಮುಖ್ಯಮಂತ್ರಿ, ಆರ್‌ಜೆಡಿ ವರಿಷ್ಠಲಾಲು ಪ್ರಸಾದ್ ಯಾದವ್ ಅವರಿಗೆ ದೊಡ್ಡ ಹಿನ್ನಡೆಯಾಗಿದೆ. ಜಾರ್ಖಂಡ್ ಹೈಕೋರ್ಟ್ ಶುಕ್ರವಾರ ಅವರ ಜಾಮೀನು ಅರ್ಜಿಯ ವಿಚಾರಣೆಯನ್ನು ನವೆಂಬರ್ 27 ರವರೆಗೆ ಮುಂದೂಡಿದೆ.
ನ್ಯಾಯಮೂರ್ತಿ ಅಪ್ರೇಶ್ ಸಿಂಗ್ಅವರ ಏಕ ಸದಸ್ಯ ನ್ಯಾಯಪೀಠವಿಚಾರಣೆಯನ್ನು ಮುಂದೂಡಿದೆ ಮತ್ತು ಸಿಬಿಐ ಪರ ವಕೀಲರು ತಮ್ಮ ಉತ್ತರವನ್ನು ಸಲ್ಲಿಸಲು ನ್ಯಾಯಾಲಯದಿಂದ ಹೆಚ್ಚಿನ ಸಮಯವನ್ನು ಕೋರಿದ ನಂತರ ನವೆಂಬರ್ 27ಕ್ಕೆ ಮುಂದಿನ ದಿನಾಂಕವೆಂದು ನಿಗದಿಪಡಿಸಿದೆ.
ನ್ಯಾಯಾಲಯದ ತೀರ್ಪುಯಾದವ್ ಮತ್ತು ಅವರ ಬೆಂಬಲಿಗರಿಗೆ ದೊಡ್ಡ ಹಿನ್ನಡೆಯೆಂದು ಪರಿಗಣಿಸಲ್ಪಟ್ಟಿದೆ, ಏಕೆಂದರೆ ಅವರು ದೀಪಾವಳಿ ಮತ್ತು ಛಾತ್ ಹಬ್ಬಗಳನ್ನು ಕಂಬಿಗಳ ಹಿಂದೆಯೇ ಆಚರಿಸಬೇಕಾಗಿದೆ. ಪ್ರಸ್ತುತ, ಅವರು ರಿಮ್ಸ್ ನಿರ್ದೇಶಕರ ಬಂಗಲೆಯಲ್ಲಿ ವಾಸ್ತವ್ಯ ಹೂಡಿದ್ದು ಅನಾರೋಗ್ಯದ ಸಂಬಂಧ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೇವು ಹಗರಣಕ್ಕೆ ಸಂಬಂಧಿಸಿದ ಮೂರು ಪ್ರಕರಣಗಳಲ್ಲಿ ಆರ್‌ಜೆಡಿ ಮುಖಂಡ ಶಿಕ್ಷೆಗೆ ಒಳಗಾಗಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ