ಚಿನ್ನ ಕಳ್ಳಸಾಗಣೆ ಪ್ರಕರಣ: ತಿರುವನಂತಪುರಂ ಜೈಲಿನಲ್ಲಿ ಇಡಿ ಅಧಿಕಾರಿಗಳಿಂದ ಸ್ವಪ್ನಾ ಸುರೇಶ್ ವಿಚಾರಣೆ

ಅಕ್ರಮ ಚಿನ್ನ ಕಳ್ಳ ಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ತಂಡ ತಿರುವನಂತಪುರದ ಅತ್ತಾಕುಲನಗರದಲ್ಲಿರುವ ಮಹಿಳಾ ಕಾರಾಗೃಹದಲ್ಲಿ ಆರೋಪಿ ಸ್ವಪ್ನಾ ಸುರೇಶ್ ವಿಚಾರಣೆ ನಡೆಸಿದೆ.
ಸ್ವಪ್ನ ಸುರೇಶ್
ಸ್ವಪ್ನ ಸುರೇಶ್

ತಿರುವನಂತಪುರಂ: ಅಕ್ರಮ ಚಿನ್ನ ಕಳ್ಳ ಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ತಂಡ ತಿರುವನಂತಪುರದ ಅತ್ತಾಕುಲನಗರದಲ್ಲಿರುವ ಮಹಿಳಾ ಕಾರಾಗೃಹದಲ್ಲಿ ಆರೋಪಿ ಸ್ವಪ್ನಾ ಸುರೇಶ್ ವಿಚಾರಣೆ ನಡೆಸಿದೆ.

ಕೊಚ್ಚಿಯಿಂದ ಬೆಳಗ್ಗೆ  10 ಗಂಟೆಗೆ ಆಗಮಿಸಿದ ಅಧಿಕಾರಿಗಳ ತಂಡ 10.30 ರಿಂದ ವಿಚಾರಣೆ ಆರಂಭಿಸಿದೆ.

ಎರಡನೇ ಬಾರಿಗೆ ತಂಡ ಸ್ವಪ್ನ ಅವರನ್ನು ವಿಚಾರಣೆ ನಡೆಸುತ್ತಿದೆ. ಈ ಹಿಂದೆ, ಇಡಿ ಅಧಿಕಾರಿಗಳಿಗೆ ಮಾಜಿ ಮುಖ್ಯಮಂತ್ರಿಯ ಪ್ರಧಾನ ಕಾರ್ಯದರ್ಶಿ ಎಂ.ಶಿವಶಂಕರ್ ಅವರಿಂದ ಮಾಹಿತಿ ದೊರೆತಿದ್ದು, ಲೈಫ್ ಮಿಷನ್ ಯೋಜನೆ ಸೇರಿದಂತೆ ವಿವಿಧ ಯೋಜನೆಗಳಿಂದ ಕಮಿಷನ್ ರೂಪದಲ್ಲಿ ಪಡೆದ ಹಣವನ್ನು ಸ್ವಪ್ನಾರಿಂದ ಹಂಚಿಕೊಳ್ಳಲಾಗಿದೆ. ಶಿವಕುಮಾರ್ ಅವರು
ಕೂಡ ಕೊಚ್ಚಿಯ ಇಡಿ ಅಧಿಕಾರಿಗಳ ವಶದಲ್ಲಿದ್ದಾರೆ. ಇದೇ ತಂಡ ಕಳೆದ ವಾರ ಚಿನ್ನ ಕಳ್ಳ ಸಾಗಣೆ ಪ್ರಕರಣ ಸಂಬಂಧ ಸ್ವಪ್ನ ಅವರನ್ನು ವಿಚಾರಣೆ ನಡೆಸಿತ್ತು. 

ಯುಎಇ ಕಾನ್ಸುಲೇಟ್‌ನ ಮೂಲಕ ಮಾಡಿದ ಹಣಕಾಸಿನ ವ್ಯವಹಾರಗಳ ವಿವರಗಳ ಬಗ್ಗೆ ಅವರು ಅವರನ್ನು ವಿಚಾರಣೆ ನಡೆಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com