ಬಿಹಾರ ಚುನಾವಣೆ ಫಲಿತಾಂಶ: ಸ್ವಪಕ್ಷದ ವಿರುದ್ಧ ಕಾಂಗ್ರೆಸ್ ನಾಯಕ ತಾರೀಕ್ ಅನ್ವರ್ ಅಸಮಾಧಾನ 

ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಕಳಪೆ ಪ್ರದರ್ಶನದಿಂದಾಗಿಯೇ ಮಹಾಘಟಬಂಧನ ಸರ್ಕಾರ ರಚನೆ ಸಾಧ್ಯತೆ ಕ್ಷೀಣಿಸಿದ್ದು ಎಂದು ಕಾಂಗ್ರೆಸ್ ನ ನಾಯಕ ತಾರೀಕ್ ಅನ್ವರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ನಾಯಕ ತಾರೀಕ್ ಅನ್ವರ್
ಕಾಂಗ್ರೆಸ್ ನಾಯಕ ತಾರೀಕ್ ಅನ್ವರ್
Updated on

ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಕಳಪೆ ಪ್ರದರ್ಶನದಿಂದಾಗಿಯೇ ಮಹಾಘಟಬಂಧನ ಸರ್ಕಾರ ರಚನೆ ಸಾಧ್ಯತೆ ಕ್ಷೀಣಿಸಿದ್ದು ಎಂದು ಕಾಂಗ್ರೆಸ್ ನ ನಾಯಕ ತಾರೀಕ್ ಅನ್ವರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದೇ ವೇಳೆ ಎಐಎಂಐಎಂ ಬಿಹಾರದಲ್ಲಿ ಪ್ರವೇಶಿಸಿರುವುದರ ಬಗ್ಗೆಯೂ ತೀವ್ರ ಆತಂಕವನ್ನು ತಾರೀಕ್ ಅನ್ವರ್ ಹೇಳಿದ್ದಾರೆ.

ಎಐಸಿಸಿ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಅನ್ವರ್, ಸರಣಿ ಟ್ವೀಟ್ ಗಳಲ್ಲಿ ಕಾಂಗ್ರೆಸ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದು, " ನಾವು ಸತ್ಯವನ್ನು ಒಪ್ಪಿಕೊಳ್ಳಬೇಕು, ಕಾಂಗ್ರೆಸ್ ನ ಕಳಪೆ ಪ್ರದರ್ಶನದಿಂದಾಗಿಯೇ ಬಿಹಾರದಲ್ಲಿ ಮಹಾಘಟಬಂಧನ್ ಸರ್ಕಾರದ ಕನಸು ಭಗ್ನಗೊಂಡಿದೆ. ತುರ್ತಾಗಿ ದೀರ್ಘವಾದ ಆತ್ಮಾವಲೋಕನ ಮಾಡಿಕೊಳ್ಳುವ ಅಗತ್ಯವಿದೆ ಎಂದು ಅನ್ವರ್ ಅಭಿಪ್ರಾಯಪಟ್ಟಿದ್ದಾರೆ.

ಬಿಜೆಪಿ ಹೇಗೆ ಹಿಂದೂಗಳನ್ನು ಬೆಂಬಲಿಸುತ್ತದೆಯೋ ಹಾಗೆಯೇ ಎಐಎಂಐಎಂ ಮುಸ್ಲಿಮರನ್ನು ಬೆಂಬಲಿಸುತ್ತದೆ. ಈ ಕಾರಣಕ್ಕಾಗಿ ಬಿಹಾರದಲ್ಲಿ ಎಐಎಂಐಎಂ ಉತ್ತಮ ಪ್ರದರ್ಶನ ನೀಡಿರುವುದು ಒಳ್ಳೆಯ ಲಕ್ಷಣವಲ್ಲ ಎಂದು ತಾರೀಕ್ ಅನ್ವರ್ ಆತಂಕ ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com