ವೆಬ್ ಸಿರೀಸ್ ನಲ್ಲಿ ಆಕ್ಷೇಪಾರ್ಹ ಅಂಶ: ಏಕ್ತಾ ಕಪೂರ್ ವಿರುದ್ಧ ಎಫ್ಐಆರ್ ರದ್ದುಗೊಳಿಸಲು ಮಧ್ಯ ಪ್ರದೇಶ ಹೈಕೋರ್ಟ್ ನಕಾರ

' XXX ಸೀಸನ್ 2'  ವೆಬ್ ಸಿರೀಸ್ ನಲ್ಲಿನ ಆಕ್ಷೇಪಾರ್ಹ ಅಂಶಗಳಿಗಾಗಿ ತನ್ನ ವಿರುದ್ಧ ದಾಖಲಾದ ಪ್ರಕರಣವನ್ನು ರದ್ದುಗೊಳಿಸಬೇಕೆಂದು ಕೋರಿ ಟಿವಿ ನಿರ್ಮಾಪಕಿ ಏಕ್ತಾ ಕಪೂರ್ ಸಲ್ಲಿಸಿದ್ದ ಅರ್ಜಿಯನ್ನು ಮಧ್ಯಪ್ರದೇಶ ಹೈಕೋರ್ಟ್ ಪೀಠ ವಜಾಗೊಳಿಸಿದೆ.
ಏಕ್ತಾ ಕಪೂರ್
ಏಕ್ತಾ ಕಪೂರ್
Updated on

ಇಂದೋರ್:  'XXX ಸೀಸನ್ 2' ವೆಬ್ ಸಿರೀಸ್ ನಲ್ಲಿನ ಆಕ್ಷೇಪಾರ್ಹ ಅಂಶಗಳಿಗಾಗಿ ತನ್ನ ವಿರುದ್ಧ ದಾಖಲಾದ ಪ್ರಕರಣವನ್ನು ರದ್ದುಗೊಳಿಸಬೇಕೆಂದು ಕೋರಿ ಟಿವಿ ನಿರ್ಮಾಪಕಿ ಏಕ್ತಾ ಕಪೂರ್ ಸಲ್ಲಿಸಿದ್ದ ಅರ್ಜಿಯನ್ನು ಮಧ್ಯಪ್ರದೇಶ ಹೈಕೋರ್ಟ್ ಪೀಠ ವಜಾಗೊಳಿಸಿದೆ.

ಆದಾಗ್ಯೂ, ಇಂದೋರ್ ನ್ಯಾಯಪೀಠ ಬುಧವಾರ ನೀಡಿದ 65 ಪುಟಗಳ ತೀರ್ಪಿನಲ್ಲಿ, ಪ್ರತಿವಾದಿಯು ಧಾರ್ಮಿಕ ಭಾವನೆಗಳಿಗೆ ನೋವುಂಟುಮಾಡುವ ಐಪಿಸಿ ವಿಭಾಗದ ನಿಬಂಧನೆಯ ಉಲ್ಲಂಘನೆ  ಕಂಡುಬಂದಿಲ್ಲ. 

ಒಟಿಟಿ ಫ್ಲಾಟ್ ಫಾರ್ಮ್ ಎಎಲ್ ಟಿ ಬಾಲಾಜಿಯಲ್ಲಿ ಪ್ರಸಾರವಾದ ವೆಬ್ ಸಿರೀಸ್ ನಲ್ಲಿ ಅಶ್ಲೀಲತೆ ಇರುವುದಲ್ಲದೇ,  ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡುವ ಅಂಶಗಳಿವೆ ಎಂದು ಆರೋಪಿಸಿ ಐದು ತಿಂಗಳ ಹಿಂದೆ ಟಿವಿ ನಿರ್ಮಾಪಕಿ- ನಿರ್ದೇಶಕಿ ಏಕ್ತಾ ಕಪೂರ್ ವಿರುದ್ಧ ಎಫ್ ಐಆರ್ ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆ,  ಐಪಿಸಿ ಸೆಕ್ಷನ್ ಗಳಡಿಯಲ್ಲಿ  ಕೇಸ್ ನ್ನು  ದಾಖಲಿಸಲಾಗಿತ್ತು. 

ಐಪಿಸಿ ಸೆಕ್ಷನ್ 294 ಮತ್ತು ಐಟಿ ಕಾಯ್ದೆ 67, 67-ಎ ಸೆಕ್ಷನ್ ಗಳ ಗೌರವಕ್ಕಾಗಿ ಎಫ್ ಐಆರ್ ರದ್ದುಗೊಳಿಸಲು ಸಿರ್ ಪಿಸಿಯ ಸೆಕ್ಷನ್ 482ನ್ನು ಬಳಸಿಕೊಳ್ಳಬಹುದೆಂದು ನ್ಯಾಯಾಧೀಶರಾದ ಶೈಲೇಂದ್ರ ಶುಕ್ಲಾ ನೇತೃತ್ವದ ಏಕ ಸದಸ್ಯ ಪೀಠ ಅಭಿಪ್ರಾಯಪಟ್ಟಿತ್ತು. ಆದಾಗ್ಯೂ, ಐಪಿಸಿ ಸೆಕ್ಷನ್ 298ರ  ನಿಬಂಧನೆಯ ಉಲ್ಲಂಘನೆ ಕಂಡುಬಂದಿಲ್ಲವಾದರಿಂದ ಎರಡು ಆರೋಪಗಳಿಂದ ನಿರ್ಮಾಪಕರನ್ನು ಮುಕ್ತಗೊಳಿಸಬಹುದೆಂದರು.

ಇಂದೋರ್ ನ ನಿವಾಸಿಗಳಾದ ವಾಲ್ಮಿಕ್ ಸಕಾರಗಾಯೆ ಮತ್ತು ನೀರಜ್ ಯಾಗ್ನಿಕ್ ಅನ್ನಪೂರ್ಣ ಪೊಲೀಸ್ ಠಾಣೆಯಲ್ಲಿ ಏಕ್ತಾ ಕಪೂರ್ ವಿರುದ್ಧ ಎಫ್ ಐಆರ್ ದಾಖಲಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com