ತೇಜಸ್ವಿ ಒಳ್ಳೆ ಹುಡುಗ, ಆದರೆ ಆಡಳಿತದ ಅನುಭವವಿಲ್ಲ: ಅಚ್ಚರಿ ಮೂಡಿಸಿದ ಉಮಾಭಾರತಿ ಹೇಳಿಕೆ

ತೇಜಸ್ವಿ ಒಳ್ಳೆ ಹುಡುಗ, ಆದರೆ ಆಡಳಿತದ ಅನುಭವವಿಲ್ಲ: ಅಚ್ಚರಿ ಮೂಡಿಸಿದ ಉಮಾಭಾರತಿ ಹೇಳಿಕೆ

ಬಿಹಾರ ವಿಧಾನಸಭಾ ಚುನಾವಣೆ ಫಲಿತಾಂಶದ ಬೆನ್ನಲ್ಲೇ ರಾಷ್ಟ್ರೀಯ ಜನತಾ ದಳ ಮುಖ್ಯಸ್ಥ ತೇಜಸ್ವಿ ಯಾದವ್ ತುಂಬಾ ಒಳ್ಳೆಯ ಹುಡುಗ ಎನ್ನುವ ಮೂಲಕ ಬಿಜೆಪಿ ಹಿರಿಯ ನಾಯಕಿ ಉಮಾ ಭಾರತಿ ಹಾಡಿ ಹೊಗಳಿದ್ದಾರೆ.

ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣೆ ಫಲಿತಾಂಶದ ಬೆನ್ನಲ್ಲೇ ರಾಷ್ಟ್ರೀಯ ಜನತಾ ದಳ ಮುಖ್ಯಸ್ಥ ತೇಜಸ್ವಿ ಯಾದವ್ ತುಂಬಾ ಒಳ್ಳೆಯ ಹುಡುಗ ಎನ್ನುವ ಮೂಲಕ ಬಿಜೆಪಿ ಹಿರಿಯ ನಾಯಕಿ ಉಮಾ ಭಾರತಿ ಹಾಡಿ ಹೊಗಳಿದ್ದಾರೆ.

ತೇಜಸ್ವಿ ಯಾದವ್ ಒಳ್ಳೆಯ ಹುಡುಗನೇ. ಆದರೇ ಈಗಿನ ಪರಿಸ್ಥಿತಿಯಲ್ಲಿ ಆತನಿಗೆ ಆಡಳಿತದ ಅನುಭವ ಸಾಲುವುದಿಲ್ಲ. ಒಂದು ವೇಳೆ ತೇಜಸ್ವಿ ಮುಖ್ಯಮಂತ್ರಿಯಾಗಿದ್ದರೆ, ಅವರ ತಂದೆ ಲಾಲು ಪ್ರಸಾದ್‌ ಹಿಂಬಾಗಿಲಿನಿಂದ ಆಡಳಿತ ನಡೆಸುತ್ತಿದ್ದರು. ಆಗ ಬಿಹಾರ ಮತ್ತೆ ಜಂಗಲ್‌ ರಾಜ್ಯ ಆಗುತ್ತಿತ್ತು ಎಂದು ಹೇಳಿದ್ದಾರೆ

ರಾಜ್ಯವನ್ನು ಸದ್ಯದ ಪರಿಸ್ಥಿತಿಯಲ್ಲಿ ನಿರ್ವಹಿಸುವ ಸಾಮರ್ಥ್ಯವಂತೂ ತೇಜಸ್ವಿ ಯಾದವ್ ಅವರಿಗೆ ಇರಲಿಲ್ಲ. ಲಾಲೂ ಪ್ರಸಾದ್ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿದಿದ್ದರೆ, ಬಿಹಾರವನ್ನು ಜಂಗಲ್ ರಾಜ್ ಮಾಡುತ್ತಿದ್ದರು. ಹಾಗಾಗಿ ಇನ್ನೂ ಕೆಲವು ಸಮಯಗಳ ಬಳಿಕ ತೇಜಸ್ವಿ ಯಾದವ್ ಕೂಡಾ ರಾಜ್ಯವನ್ನು ನಿಭಾಯಿಸುವ ಸಾಮರ್ಥ್ಯವನ್ನು ಸಂಪಾದಿಸಿಕೊಳ್ಳಬೇಕಿದೆ ಎಂದು ಉಮಾ ಭಾರತಿ ಸಲಹೆ ನೀಡಿದ್ದಾರೆ. 

Related Stories

No stories found.

Advertisement

X
Kannada Prabha
www.kannadaprabha.com