ಆಂಧ್ರ ಪ್ರದೇಶ: ಬಾವಿಗೆ ಹಾರಿ 70 ವರ್ಷದ ಮಹಿಳೆಯನ್ನು ರಕ್ಷಿಸಿದ ಪೊಲೀಸ್

ಆಂಧ್ರ ಪ್ರದೇಶದ ಕೃಷ್ಣ ಜಿಲ್ಲೆಯ ಗುಡೂರ್ ಗ್ರಾಮದಲ್ಲಿ ಬುಧವಾರ ತಡರಾತ್ರಿ ಧೈರ್ಯಶಾಲಿ ಪೊಲೀಸ್ ಪೇದೆಯೊಬ್ಬರು ಬಾವಿಗೆ ಹಾರಿ 70 ವರ್ಷದ ವೃದ್ಧ ಮಹಿಳೆಯ ಜೀವ ಉಳಿಸಿದ್ದಾರೆ.
ಮಹಿಳೆ ರಕ್ಷಿಸುತ್ತಿರುವ ಪೊಲೀಸ್
ಮಹಿಳೆ ರಕ್ಷಿಸುತ್ತಿರುವ ಪೊಲೀಸ್
Updated on

ವಿಜಯವಾಡ: ಆಂಧ್ರ ಪ್ರದೇಶದ ಕೃಷ್ಣ ಜಿಲ್ಲೆಯ ಗುಡೂರ್ ಗ್ರಾಮದಲ್ಲಿ ಬುಧವಾರ ತಡರಾತ್ರಿ ಧೈರ್ಯಶಾಲಿ ಪೊಲೀಸ್ ಪೇದೆಯೊಬ್ಬರು ಬಾವಿಗೆ ಹಾರಿ 70 ವರ್ಷದ ವೃದ್ಧ ಮಹಿಳೆಯ ಜೀವ ಉಳಿಸಿದ್ದಾರೆ.

ರಾತ್ರಿ 11.50 ರ ಸುಮಾರಿಗೆ ಪೇದೆಗಳಾದ ಎ ಶಿವ ಕುಮಾರ್ ಮತ್ತು ಶ್ಯಾಮ್ ಎಂದಿನಂತೆ ಬೀಟ್ ನಲ್ಲಿದ್ದರು. ಈ ವೇಳೆ 70 ವರ್ಷದ ಮಹಿಳೆ ಬಾವಿಗೆ ಬಿದ್ದಿರುವುದಾಗಿ ಸಹಾಯವಾಣಿ 100 ರ ಮೂಲಕ ಮಾಹಿತಿ ಬಂದಿದೆ. ಕೂಡಲೇ ಸ್ಥಳಕ್ಕೆ ತೆರಳಿದ ಪೊಲೀಸರು, ಬಾವಿಗೆ ಹಾರಿ ಮಹಿಳೆಯನ್ನು ರಕ್ಷಿಸಿದ್ದಾರೆ.

ಬೀಟ್ ನಲ್ಲಿದ್ದ ಈ ಇಬ್ಬರು ಪೊಲೀಸರು ಒಂದು ಕಿಲೋಮೀಟರ್ ದೂರದಲ್ಲಿದ್ದ ಮಹಿಳೆಯ ಮನೆ ಬಳಿ ತೆರಳಿದ್ದಾರೆ. ಮನೆ ಬಳಿ ಇದ್ದ ಬಾವಿಯಲ್ಲೇ ಮಹಿಳೆ ಬಿದ್ದಿದ್ದರು. ಕತ್ತಲು ಮತ್ತು ಬಾವಿ ಆಳವನ್ನು ಕಂಡು ಸ್ಥಳೀಯರು ಯಾರೂ ಮಹಿಳೆಯ ರಕ್ಷಣೆಗೆ ಬಂದಿಲ್ಲ. ಬಾವಿಯ ಸುತ್ತ ಯಾವುದೇ ಏಣಿ ಅಥವಾ ಹಗ್ಗವಿಲ್ಲದಿದ್ದರೂ ಪೇದೆ ಶಿವ ಕುಮಾರ್ ಅವರು ಧೈರ್ಯಮಾಡಿ ಬಾವಿಗೆ ಹಾರಿ, ಮುಳುಗುತ್ತಿದ್ದ ಮಹಿಳೆ ಬಿ ಸಾವಿತ್ರಿ ಅವರನ್ನು ರಕ್ಷಿಸಿದ್ದಾರೆ.

“ಆ ಕ್ಷಣದಲ್ಲಿ ನನ್ನ ಏಕೈಕ ಆಲೋಚನೆ ಮಹಿಳೆಯನ್ನು ಉಳಿಸುವುದಾಗಿತ್ತು ಮತ್ತು ಮಹಿಳೆ ಮುಳುಗದಂತೆ ನೋಡಿಕೊಳ್ಳಲು ನಾನು ಆಕೆಯನ್ನು ನನ್ನ ತೊಡೆಯ ಮೇಲೆ ಕೂರಿಸಿಕೊಂಡೆ”ಎಂದು ಶಿವ ಕುಮಾರ್ ಅವರು ಗುರುವಾರ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ.

ಶಿವ ಕುಮಾರ್ ಧೈರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com