ಚಾವಟಿಯಿಂದ ಏಟು ಹೊಡೆಸಿಕೊಂಡ ಮುಖ್ಯಮಂತ್ರಿ!

ರಾಜ್ಯದ ಮುಖ್ಯಮಂತ್ರಿಯೊಬ್ಬರಿಗೆ  ಚಾವಟಿಯಿಂದ ಹೊಡೆಯುವುದು ಎಂದರೆ  ಏನು.?!   ಮುಖ್ಯಮಂತ್ರಿಗಳಿಗೆ ವ್ಯಕ್ತಿಯೊಬ್ಬ ಚಾವಟಿಯಿಂದ  ಹೊಡೆಯುವುದನ್ನು ಜನರು ತಮ್ಮ ಕ್ಯಾಮರಾ, ಮೊಬೈಲ್ ಗಳಲ್ಲಿ ಚಿತ್ರೀಕರಿಸಿಕೊಳ್ಳುತ್ತಿದ್ದರು.
ಚಾವಟಿಯಿಂದ ಏಟು ಹೊಡೆಸಿಕೊಂಡ ಮುಖ್ಯಮಂತ್ರಿ!
ಚಾವಟಿಯಿಂದ ಏಟು ಹೊಡೆಸಿಕೊಂಡ ಮುಖ್ಯಮಂತ್ರಿ!

ರಾಯಪುರ್: ರಾಜ್ಯದ ಮುಖ್ಯಮಂತ್ರಿಯೊಬ್ಬರಿಗೆ ಚಾವಟಿಯಿಂದ ಹೊಡೆಯುವುದು ಎಂದರೆ  ಏನು.?! ಮುಖ್ಯಮಂತ್ರಿಗಳಿಗೆ ವ್ಯಕ್ತಿಯೊಬ್ಬ ಚಾವಟಿಯಿಂದ  ಹೊಡೆಯುವುದನ್ನು ಜನರು ತಮ್ಮ ಕ್ಯಾಮರಾ, ಮೊಬೈಲ್ ಗಳಲ್ಲಿ ಚಿತ್ರೀಕರಿಸಿಕೊಳ್ಳುತ್ತಿದ್ದರು.

ಚಾವಟಿಯಿಂದ ಹೊಡೆಸಿಕೊಂಡ ಮುಖ್ಯಮಂತ್ರಿ ಯಾರು ಅಂತಿರಾ? ಛತ್ತೀಸ್ ಗಢದ ಸಿಎಂ ಭುಪೇಶ್ ಬಘೇಲ್!

ಚಾವಟಿಯಿಂದ ಹೊಡೆಸಿಕೊಳ್ಳುವಂತಹದ್ದನ್ನು ಅವರೇನು ಮಾಡಿದರು ಎಂದು ಕೇಳಿದರೆ, ಅದು ಅಲ್ಲಿನ ಸಂಪ್ರದಾಯ, ಪದ್ಧತಿ ಎಂಬುದು ಉತ್ತರ. 

ಗೋವರ್ಧನ್ ಪೂಜಾದಲ್ಲಿ ಭಾಗಿಯಾದ ಭೂಪೇಶ್ ಬಘೇಲ್, ರೀತಿ ರಿವಾಜುಗಳ ಪ್ರಕಾರ ಪೂಜೆ ಸಲ್ಲಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಬಘೇಲ್, ಗೋವರ್ಧನ ಪೂಜೆಯಲ್ಲಿ ಭಾಗಿಯಾಗಿ ಪದ್ಧತಿಯ ಪ್ರಕಾರ ಪೂಜೆ ಮಾಡಲಾಯಿತು, ಎಲ್ಲರಿಗೂ ಒಳಿತಾಗಲಿ ಎಂದು ಪ್ರಾರ್ಥಿಸಿರುವುದಾಗಿ ತಿಳಿಸಿದ್ದಾರೆ. ಗೋವರ್ಧನ ಪೂಜೆ ವೇಳೆ ಚಾವಟಿಯಿಂದ ಹೊಡೆಸಿಕೊಳ್ಳುವುದು ಇಲ್ಲಿನ ಪದ್ಧತಿಯಾಗಿದ್ದು, ಬಘೇಲ್ ಹಲವು ಬಾರಿ ಈ ಪೂಜೆಯಲ್ಲಿ ಭಾಗಿಯಾಗಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com