ಕಾಂಗ್ರೆಸ್ ಪರ್ಯಾಯ ರಾಜಕೀಯ ಪಕ್ಷವಾಗಿ ಉಳಿದಿಲ್ಲ: ಬಿಹಾರ ಸೋಲಿನ ನಂತರ ಕೈ ಮುಖಂಡ ಕಪಿಲ್ ಸಿಬಲ್ ಪ್ರತಿಕ್ರಿಯೆ

"ಕಾಂಗ್ರೆಸ್ ಪಕ್ಷ ಉತ್ತಮ, ಪರಿಣಾಮಕಾರಿ ಪರ್ಯಾಯ ಪಕ್ಷವೇ ಆಗಿರಲಿಲ್ಲ.ದೇಶದ ಜನತೆ ಅತ್ಯಂತ ಹಳೆಯ ಪಕ್ಷವಾದ ಕಾಂಗ್ರೆಸ್ ಪಕ್ಷವನ್ನು ಒಂದು ಉತ್ತಮ ಪರ್ಯಾಯ ಎಂದು ಎಂದೂ ಭಾವಿಸಲಿಲ್ಲ" ಕಾಂಗ್ರೆಸ್ ಹಿರಿಯ ಮುಖಂಡ ಕಪಿಲ್ ಸಿಬಲ್ ಹೇಳಿದ್ದಾರೆ.
ಕಪಿಲ್ ಸಿಬಲ್
ಕಪಿಲ್ ಸಿಬಲ್
Updated on

ನವದೆಹಲಿ: "ಕಾಂಗ್ರೆಸ್ ಪಕ್ಷ ಉತ್ತಮ, ಪರಿಣಾಮಕಾರಿ ಪರ್ಯಾಯ ಪಕ್ಷವೇ ಆಗಿರಲಿಲ್ಲ.ದೇಶದ ಜನತೆ ಅತ್ಯಂತ ಹಳೆಯ ಪಕ್ಷವಾದ ಕಾಂಗ್ರೆಸ್ ಪಕ್ಷವನ್ನು ಒಂದು ಉತ್ತಮ ಪರ್ಯಾಯ ಎಂದು ಎಂದೂ ಭಾವಿಸಲಿಲ್ಲ" ಕಾಂಗ್ರೆಸ್ ಹಿರಿಯ ಮುಖಂಡ ಕಪಿಲ್ ಸಿಬಲ್ ಹೇಳಿದ್ದಾರೆ. ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) 2020 ರ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಸ್ಪಷ್ಟ ಬಹುಮತವನ್ನು ಗಳಿಸಿದ ಕೆಲ ದಿನಗಳ ನಂತರ ಸಿಬಲ್ ಈ ಮಾತುಗಳನ್ನಾಡಿದ್ದಾರೆ.

ಪತ್ರಿಕೆಯೊಂದರ ಸಂದರ್ಶನದಲ್ಲಿ ಕಪಿಲ್ ಸಿಬಲ್ “ಬಿಹಾರ ವಿಧಾನಸಭೆ ಹಾಗೂ ಇತರೆ ರಾಜ್ಯಗಳ ಉಪಚುನಾವಣೆಯಲ್ಲಿ ನಮ್ಮ ಇತ್ತೀಚಿನ ಸಾಧನೆ ಕುರಿತು ಕಾಂಗ್ರೆಸ್ ಹೈಕಮಾಂಡ್ ಅಭಿಪ್ರಾಯಗಳನ್ನು ನಾವು ಇನ್ನೂ ಕೇಳಬೇಕಾಗಿಲ್ಲ. ಬಹುಶಃ ಎಲ್ಲವೂ ಚೆನ್ನಾಗಿವೆ ಮತ್ತು ಅದು ಎಂದಿನಂತೆ ವ್ಯವಹಾರವಾಗಿರಬೇಕು ಎಂದು ಅವರು ಭಾವಿಸಿದ್ದಾರೆ.  ಆದರೆ ಆತ್ಮಾವಲೋಕನದ ಸಮಯ ಮುಗಿದಿದೆ. ಪಕ್ಷದ ಪುನರುಜ್ಜೀವನಕ್ಕಾಗಿ ಅನುಭವಿ ಮನಸ್ಸು, ಅನುಭವಿ ಕೈಗಳು ಹಾಗೂ ರಾಜಕೀಯದ ವಾಸ್ತವಾಂಶವನ್ನು ಅರಿತವರ ಅಗತ್ಯವಿದೆ.

"ಸಂವಹನ ಕ್ರಾಂತಿಯ ನಂತರದಲ್ಲಿ ದೇಶದಲ್ಲಿ ನಡೆಯುವ ಚುನಾವಣೆಗಳ ರೂಪುರೇಷೆ ಬದಲಾಗಿದೆ. ಚುನಾವಣೆಗಳು ಅಧ್ಯಕ್ಷೀಯ ಮಾದರಿಯಾಗಿ ಪರಿವರ್ತನೆಯಾಗಿದೆ. ಹಾಗಾಗಿ ಇಂದು ನಾವು ಕಾಂಗ್ರೆಸ್ ಕುಸಿಯುತ್ತಿದೆ ಎನ್ನುವುದನ್ನು ಒಪ್ಪಿಕೊಳ್ಳಲೇಬೇಕು" ಎಂದಿದ್ದಾರೆ.

"ಬಿಹಾರ ಹಾಗೂ ಉತ್ತರ ಪ್ರದೇಶ ದೇಶದ ಬಹುದೊಡ್ಡ ರಾಜ್ಯಗಳು. ಆದರೆ ಈ ಎರಡೂ ರಾಜ್ಯಗಳಲ್ಲಿ ಕಳೆದ ಹಲವಾರು ವರ್ಷಗಳಿಂದ ಕಾಂಗ್ರೆಸ್ ಪರ್ಯಾಯ ಪಕ್ಷವಾಗಿಯೇ ಇಲ್ಲ. "

"ಭಿನ್ನಾಭಿಪ್ರಾಯದ ಪತ್ರ" ದ ಬಗ್ಗೆ ಸಿಬಲ್ ಅವರನ್ನು ಪ್ರಶ್ನಿಸಿದಾಗ "ಯಾವುದೇ ಮಾತುಕತೆ ಇಲ್ಲದಿರುವಿಕೆ ಹಾಗೂ ನಾಯಕತ್ವದ ಕುರಿತ ಮಾತುಕತೆಗೆ ಯಾವ ಪ್ರಯತ್ನಗಳಾಗಿಲ್ಲವೆಂದೇ ತೋರುತ್ತಿದೆ.  ಅಲ್ಲದೆ ಈ ಕುರಿತು ಅಭಿಪ್ರಾಯ ವ್ಯಕ್ತಪಡಿಸಲು ಸೂಕ್ತ ವೇದಿಕೆ ಇಲ್ಲದಿರುವುದರಿಂದ ನನ್ನ ಅಭಿಪ್ರಾಯಗಳು, ಅವುಗಳನ್ನು ಸಾರ್ವಜನಿಕವಾಗಿ ವ್ಯಕ್ತಪಡಿಸಲಾಗದೆ ನಿರ್ಬಂಧಿತನಾಗಿದ್ದೇನೆ. ನಾನು ಕಾಂಗ್ರೆಸ್ಸಿಗನಾಗಿದ್ದೇನೆ ಮತ್ತು ಕಾಂಗ್ರೆಸ್ಸಿಗನಾಗಿ ಉಳಿಯುತ್ತೇನೆ. ರಾಷ್ಟ್ರವು ನಂಬಿರುವ ಎಲ್ಲಾ ಮೌಲ್ಯಗಳನ್ನು ಮಟ್ಟಹಾಕಿದ ಶಕ್ತಿಗೆ ಕಾಂಗ್ರೆಸ್ ಪರ್ಯಾಯವನ್ನು ಒದಗಿಸುತ್ತದೆ ಎಂದು ಆಶಿಸುತ್ತೇನೆ ಮತ್ತು ಪ್ರಾರ್ಥಿಸುತ್ತೇನೆ. ” ಎಂದರು.

“ಆರು ವರ್ಷಗಳಿಂದ ಕಾಂಗ್ರೆಸ್ ಆತ್ಮಾವಲೋಕನ ಮಾಡಿಕೊಂಡಿಲ್ಲ ಈಗ ಆತ್ಮಾವಲೋಕನ ಮಾಡಿಕೊಳ್ಳುತ್ತದೆ ಎನ್ನುವ ಭರವಸೆ ಏನು? ಕಾಂಗ್ರೆಸ್‌ನಲ್ಲಿ ಏನೇನು ಚೆನ್ನಾಗಿದೆ ಎನ್ನುವುದು ನನಗೆ ಅರಿವಿದೆ. ಸಾಂಸ್ಥಿಕವಾಗಿ ಏನೇನು ತಪ್ಪುಗಳಿದೆ ಎನ್ನುವುದು ನನಗೆ ಗೊತ್ತು. ನಮ್ಮಲ್ಲಿ ಎಲ್ಲ ಉತ್ತರಗಳಿವೆ ಎಂದು ನಾನು ಭಾವಿಸುತ್ತೇನೆ. ಕಾಂಗ್ರೆಸ್ ಪಕ್ಷವೇ ಎಲ್ಲ ಉತ್ತರಗಳನ್ನು ತಿಳಿದಿದೆ. ಆದರೆ ಅವರು ಆ ಉತ್ತರಗಳನ್ನು ಗುರುತಿಸಲು ಸಿದ್ಧರಿಲ್ಲ. ” ಸಿಬಲ್ ಹೇಳಿದ್ದಾರೆ.

ಇತ್ತೀಚೆಗೆ ಮುಕ್ತಾಯಗೊಂಡ 2020 ರ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ, ಕಾಂಗ್ರೆಸ್ ಸ್ಪರ್ಧಿಸಿದ 70 ಸ್ಥಾನಗಳಲ್ಲಿ ಕೇವಲ 19 ಸ್ಥಾನಗಳನ್ನು ಮಾತ್ರ ಗೆಲ್ಲುವಲ್ಲಿ ಯಶಸ್ವಿಯಾಯಿತು, ಈ ಹಿಂದೆ 2015 ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 41 ಸ್ಥಾನಗಳಲ್ಲಿ ಸ್ಪರ್ಧಿಸಿ 27 ಸ್ಥಾನ ಗೆದ್ದಿತ್ತು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com