ಏಳು ತಿಂಗಳ ನಂತರ ಇಂದಿನಿಂದ ಭಕ್ತರಿಗೆ ಶಿರಡಿ ಸಾಯಿಬಾಬಾ ದರ್ಶನ: ಕೋವಿಡ್ ನಿಯಮಗಳು ಅನ್ವಯ

ಕೋವಿಡ್ -19 ಸಾಂಕ್ರಾಮಿಕ ರೋಗದ ಕಾರಣ ಏಳು ತಿಂಗಳಿನಿಂದ ಭಕ್ತರಿಗೆ ಮುಚ್ಚಲ್ಪಟ್ಟಿದ್ದ ಶಿರಡಿ ಶ್ರೀ ಸಾಯಿಬಾಬಾ ಮಂದಿರ ಇಂದಿನಿಂದ ಮತ್ತೆ ತೆರೆಯಲಿದೆ. ಆದರೆ ಕೋವಿಡ್ ನಿಯಮಾವಳಿ ಪಾಲನೆ ಕಡ್ದಾಯವಾಗಿರಲಿದೆ.
ಶಿರಡಿ ಶ್ರೀ ಸಾಯಿಬಾಬಾ
ಶಿರಡಿ ಶ್ರೀ ಸಾಯಿಬಾಬಾ
Updated on

ಶಿರಡಿ: ಕೋವಿಡ್ -19 ಸಾಂಕ್ರಾಮಿಕ ರೋಗದ ಕಾರಣ ಏಳು ತಿಂಗಳಿನಿಂದ ಭಕ್ತರಿಗೆ ಮುಚ್ಚಲ್ಪಟ್ಟಿದ್ದ ಶಿರಡಿ ಶ್ರೀ ಸಾಯಿಬಾಬಾ ಮಂದಿರ ಇಂದಿನಿಂದ ಮತ್ತೆ ತೆರೆಯಲಿದೆ. ಆದರೆ ಕೋವಿಡ್ ನಿಯಮಾವಳಿ ಪಾಲನೆ ಕಡ್ದಾಯವಾಗಿರಲಿದೆ.

ನಿರ್ದಿಷ್ಟ ಸಮಯದ ಸ್ಲಾಟ್‌ಗಾಗಿ ಆನ್‌ಲೈನ್‌ನಲ್ಲಿ ಬುಕಿಂಗ್ ಮಾಡಿದ ನಂತರವೇ ಭಕ್ತರು, ಸಂದರ್ಶಕರು ದರ್ಶನಕ್ಕೆ ಆಗಮಿಸಬಹುದಾಗಿದೆ. 

"ಇಷ್ಟು ತಿಂಗಳುಗಳ ನಂತರ ಸರ್ಕಾರ ದೇವಾಲಯಗಳನ್ನು ತೆರೆಯಲು ನಮಗೆ ಅನುಮತಿ ನೀಡಿದೆ. ಇದಕ್ಕಾಗಿ ನಮಗೆ ಸಂತೋಷವಾಗಿದೆ.ದೇವಾಲಯಕ್ಕೆ ಭೇಟಿಗೆ ಬಯಸುವ ಭಕ್ತರು` ದರ್ಶನ'ಕ್ಕಾಗಿ ನಿಗದಿತ ಸಮಯದ ಸ್ಲಾಟ್ ಪಡೆಯಲು ಆನ್‌ಲೈನ್ ಬುಕಿಂಗ್ ಮಾಡಬೇಕಾಗುತ್ತದೆ. ಇದರ ಜೊತೆಗೆ ಗೇಟ್‌ನಲ್ಲಿಕೋವಿಡ್ ನೆಗೆಟಿವ್ ಆರ್‌ಟಿ-ಪಿಸಿಆರ್ ರಿಸಲ್ಟ್  ಇರುವ ಪತ್ರ ತೋರಿಸಬೇಕಾಗುವುದು. 65 ವರ್ಷ ಮೇಲ್ಪಟ್ಟವರಿಗೆ, ಎಂಟರಿಂದ ಹತ್ತು ವರ್ಷದ ಮಕ್ಕಳಿಗೆ ಅವಕಾಶ ನೀಡಲಾಗುವುದಿಲ್ಲ "ಎಂದು ದೇವಾಲಯ ನಿರ್ವಹಣೆಯ ಪ್ರತಿನಿಧಿಯೊಬ್ಬರು ತಿಳಿಸಿದ್ದಾರೆ.

ವರದಿಯಂತೆ ಸೋಮವಾರ ಕಾಕಡ್ ಆರತಿ ನಂತರ ಸಾಯಿಬಾ ದರ್ಶನ ಭಕ್ತರಿಗೆ ಲಭಿಸಲಿದೆ. ದಿನಕ್ಕೆ 6,000, ಗಂಟೆಗೆ  900 ಭಕ್ತರಿಗೆ ಮಾತ್ರ ಅವಕಾಶ ಕಲ್ಪಿಸಲಾಗುತ್ತದೆ. 

ಅಗತ್ಯ ಸಾಮಾಜಿಕ ಅಂತರದ ಜತೆಗೆ ಫೇಸ್ ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. ಮುಖ್ಯ ದೇವಾಲಯ ಪ್ರವೇಶಕ್ಕೆ ಮುನ್ನ ಭಕ್ತರು ತಮ್ಮ ಕಾಲುಗಳನ್ನು ತೊಳೆದುಕೊಳ್ಳುವುದು ಸಹ ಕಡ್ದಾಯವಾಗಿದೆ. 

ನವೆಂಬರ್ 16 ರ ಸೋಮವಾರದಿಂದ ಮಹಾರಾಷ್ಟ್ರದಲ್ಲಿ ಎಲ್ಲಾ ಧಾರ್ಮಿಕ ಕೇಂದ್ರಗಳು ಮತ್ತು ಪೂಜಾ ಸ್ಥಳಗಳನ್ನುತೆರೆಯಲು ಅಲ್ಲಿನ ರಾಜ್ಯ ಸರ್ಕಾರ ಶನಿವಾರ ನಿರ್ಧರಿಸಿದೆ. ಮಾರ್ಚ್‌ನಲ್ಲಿ ಲಾಕ್‌ಡೌನ್ ಘೋಷಿಸಿದಾಗಿನಿಂದ ರಾಜ್ಯದ ಧಾರ್ಮಿಕ ಸ್ಥಳಗಳು ಮುಚ್ಚಲ್ಪಟ್ಟಿವೆ. ದೇವಾಲಯಗಳನ್ನು ಪುನಃ ತೆರೆಯುವಂತೆ ವಿರೋಧ ಪಕ್ಷಗಳು ಮತ್ತು ಕೆಲವು ಧಾರ್ಮಿಕ ಗುಂಪುಗಳು ಒತ್ತಾಯಿಸಿದರೂ, ಮಹಾರಾಷ್ಟ್ರ ಸರ್ಕಾರವು ರಾಜ್ಯದಲ್ಲಿ ಕೊರೋನಾ ಪ್ರಕರಣಗಳು ಕಡಿಮೆಯಾಗುವುದಕ್ಕಾಗಿ ಕಾಯುತ್ತಿತ್ತು.

"ಭಯಾನಕ ಕೊರೋನಾವೈರಸ್ ಇನ್ನೂ ನಮ್ಮ ನಡುವೆ ಇದೆ ಎಂಬುದನ್ನು ನಾವು ಮರೆಯಲು ಸಾಧ್ಯವಿಲ್ಲ. ಈಗ ನಿಧಾನವಾಗಿ ಕಡಿಮೆಯಾಗುತ್ತಿದ್ದರೂ ನಾವು ಸಂಪೂರ್ಣ ಖುಷಿಪಡಲು ಸಾಧ್ಯವಿಲ್ಲ. . ನಾಗರಿಕರು ಶಿಸ್ತನ್ನು ಅನುಸರಿಸಬೇಕಾಗಿದೆ. ಹೋಳಿ, ಗಣೇಶ ಚತುರ್ಥಿ ಆಚರಿಸುವಾಗ ಶಿಸ್ತು ಮತ್ತು ಸಂಯಮವನ್ನು ಅನುಸರಿಸಿದಂತೆಯೇ ನವರಾತ್ರಿ ಮತ್ತು ಫಂಡರಾಪುರ ವಾರಿ (ವಾರ್ಷಿಕ ತೀರ್ಥಯಾತ್ರೆ) ಮತ್ತಿತರೆ ಹಬ್ಬ, ಆಚರಣೆಯಲ್ಲೂ ಸುರಕ್ಷತಾ ಕ್ರಮ ಅನುಸರಣೆ ಕಡ್ಡಾಯ. " ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೇಳಿದರು.

ಪೂಜೆಗೆ ಎಸ್‌ಒಪಿಗಳನ್ನು ಕೆಲವೇ ದಿನಗಳಲ್ಲಿ ಬಿಡುಗಡೆ ಮಾಡಲಾಗುವುದು, ಆದರೆ ಮಾಸ್ಕ್ ಧರಿಸುವುದು ಮತ್ತು ಇತರ ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸುವುದುಅತ್ಯಗತ್ಯವಾಗಿರುತ್ತದೆ ಎಂದು ಸಿಎಂ ಹೇಳಿದರು. ಕಾರ್ಯವಿಧಾನಗಳನ್ನು ಅನುಸರಿಸದ ಜನರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿಯೂ ಅವರು ಎಚ್ಚರಿಸಿದರು.

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಪ್ರಕಾರ, ಮಹಾರಾಷ್ಟ್ರದಲ್ಲಿ ಪ್ರಸ್ತುತ 86,470 ಸಕ್ರಿಯ ಪ್ರಕರಣಗಳಿವೆ. ಈವರೆಗೆ ರಾಜ್ಯದಲ್ಲಿ 16,12,314 ಚೇತರಿಕೆ ಹಾಗೂ 45,914 ಸಾವುಗಳು ವರದಿಯಾಗಿವೆ.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com