ಆರ್ ಬಿಐ ಇನ್ನೋವೇಶನ್ ಹಬ್‌ನ ಮೊದಲ ಅಧ್ಯಕ್ಷರಾಗಿ ಕ್ರಿಸ್‌ ಗೋಪಾಲಕೃಷ್ಣನ್‌ ನೇಮಕ

ಭಾರತೀಯ ರಿಸರ್ವ್‌ ಬ್ಯಾಂಕ್‌ನ(ಆರ್‌ಬಿಐ) ಇನ್ನೋವೇಶನ್ ಹಬ್‌ನ ಮೊದಲ ಅಧ್ಯಕ್ಷರಾಗಿ ಇನ್ಫೊಸಿಸ್‌ ಸಹ ಸಂಸ್ಥಾಪಕ, ಮಾಜಿ ಸಹ ಅಧ್ಯಕ್ಷ ಕ್ರಿಸ್‌ ಗೋಪಾಲಕೃಷ್ಣನ್‌ ಅವರನ್ನು ನೇಮಕ ಮಾಡಲಾಗಿದೆ.
ಆರ್ ಬಿಐ
ಆರ್ ಬಿಐ

ಮುಂಬೈ: ಭಾರತೀಯ ರಿಸರ್ವ್‌ ಬ್ಯಾಂಕ್‌ನ(ಆರ್‌ಬಿಐ) ಇನ್ನೋವೇಶನ್ ಹಬ್‌ನ ಮೊದಲ ಅಧ್ಯಕ್ಷರಾಗಿ ಇನ್ಫೊಸಿಸ್‌ ಸಹ ಸಂಸ್ಥಾಪಕ, ಮಾಜಿ ಸಹ ಅಧ್ಯಕ್ಷ ಕ್ರಿಸ್‌ ಗೋಪಾಲಕೃಷ್ಣನ್‌ ಅವರನ್ನು ನೇಮಕ ಮಾಡಲಾಗಿದೆ.

ಆರ್ ಬಿಐ ಕಳೆದ ಆಗಸ್ಟ್ ನಾವೀನ್ಯತಾ ಕೇಂದ್ರ(ಇನ್ನೋವೇಶನ್ ಹಬ್‌) ಆರಂಭಿಸುವುದಾಗಿ ಘೋಷಿಸಿತ್ತು. ತಂತ್ರಜ್ಞಾನವನ್ನು ಬಳಸಿಕೊಂಡು ಹಣಕಾಸು ವಲಯದಲ್ಲಿ ಹೊಸತನವನ್ನು ತರುವುದು ಈ ಕೇಂದ್ರದ ಉದ್ದೇಶವಾಗಿದೆ.

"ರಿಸರ್ವ್ ಬ್ಯಾಂಕ್, ಇನ್ಫೋಸಿಸ್ ಸಹ-ಸಂಸ್ಥಾಪಕ ಮತ್ತು ಮಾಜಿ ಸಹ-ಅಧ್ಯಕ್ಷರಾದ ಸೇನಾಪತಿ(ಕ್ರಿಸ್) ಗೋಪಾಲಕೃಷ್ಣನ್ ಅವರನ್ನು ಆರ್ ಬಿಐ ಇನ್ನೋವೇಶನ್ ಹಬ್‌ನ ಮೊದಲ ಅಧ್ಯಕ್ಷರಾಗಿ" ಎಂದು ಆರ್ ಬಿಐ ಮಂಗಳವಾರ ಪ್ರಕಟಣೆಯಲ್ಲಿ ತಿಳಿಸಿದೆ.

ಹಣಕಾಸು ಸೇವೆಗಳು ಮತ್ತು ಹಣಕಾಸು ಉತ್ಪನ್ನಗಳ ಬಳಕೆಯನ್ನು ಉತ್ತೇಜಿಸುವ ವ್ಯವಸ್ಥೆಯೊಂದನ್ನು ಸೃಷ್ಟಿಸುವುದು ನಾವೀನ್ಯತಾ ಕೇಂದ್ರ ಸ್ಥಾಪನೆಯ ಉದ್ದೇಶವಾಗಿದ್ದು, ಇದು ಆರ್ಥಿಕ ಒಳಗೊಳ್ಳುವಿಕೆಯನ್ನು ಪ್ರೋತ್ಸಾಹಿಸುವ ಕೆಲಸ ಕೂಡ ಮಾಡಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com