ಇಂದು ಬೆಳಗ್ಗೆ ಛತ್ ಪೂಜೆಯ ದೃಶ್ಯ
ಇಂದು ಬೆಳಗ್ಗೆ ಛತ್ ಪೂಜೆಯ ದೃಶ್ಯ

ಸೂರ್ಯ ದೇವನಿಗೆ ಪ್ರಾರ್ಥನೆ ಸಲ್ಲಿಸುವ ಮೂಲಕ ಉತ್ತರ ಭಾರತೀಯರ ಛತ್ ಪೂಜೆ ಇಂದು ಮುಕ್ತಾಯ 

ಛತ್ ಪೂಜೆಯ ಕೊನೆಯ ದಿನವಾದ ಶನಿವಾರ ಭಕ್ತರು ಮುಂಜಾನೆಯೇ ಎದ್ದು ಸ್ನಾನ ಮಾಡಿ ಸೂರ್ಯ ದೇವನಿಗೆ ಪ್ರಾರ್ಥನೆ, ಪೂಜೆ ಸಲ್ಲಿಸಿದ್ದಾರೆ.

ನವದೆಹಲಿ: ಛತ್ ಪೂಜೆಯ ಕೊನೆಯ ದಿನವಾದ ಶನಿವಾರ ಭಕ್ತರು ಮುಂಜಾನೆಯೇ ಎದ್ದು ಸ್ನಾನ ಮಾಡಿ ಸೂರ್ಯ ದೇವನಿಗೆ ಪ್ರಾರ್ಥನೆ, ಪೂಜೆ ಸಲ್ಲಿಸಿದ್ದಾರೆ.

ಉತ್ತರ ಭಾರತದಲ್ಲಿ ಜನಪ್ರಿಯವಾಗಿರುವ ನಾಲ್ಕು ದಿನಗಳ ಛತ್ ಪೂಜೆಯ ಸಮದಲ್ಲಿ ಈ ಬಾರಿ ಕೋವಿಡ್-19 ಹಿನ್ನೆಲೆಯಲ್ಲಿ ಹಲವರು ತಮ್ಮ ಮನೆಗಳಲ್ಲಿಯೇ ಸರಳವಾಗಿ ಪೂಜೆ ಸಲ್ಲಿಸಿದ್ದಾರೆ.

ಆದರೂ ಇಂದು ಬೆಳಗ್ಗೆ ವಾರಣಾಸಿಯ ಗಂಗಾ ನದಿ ತೀರ, ಲಕ್ನೊದ ಗೊಮ್ಟಿ ನದಿ ದಂಡೆ, ಜಾರ್ಖಂಡ್ ನಲ್ಲಿ, ಗೋರಖ್ ಪುರದಲ್ಲಿ, ನೊಯ್ಡಾ, ಪ್ರಯಾಗರಾಜ್, ಪಾಟ್ನಾದ ಕಾಲೇಜ್ ಘಾಟ್ ನಲ್ಲಿ, ಭುವನೇಶ್ವರ, ಮುಂಬೈ, ದೆಹಲಿಗಳಲ್ಲಿ ಆಚರಿಸಿದ್ದಾರೆ. 

ಕೋವಿಡ್-19 ನಿಯಮಗಳ ಹೊರತಾಗಿಯೂ ನದಿ ತೀರಗಳಲ್ಲಿ ಅಪಾರ ಜನರು ಸೇರಿದ್ದು ಕಂಡುಬಂತು. 

ಇಂದು ಛತ್ ಪೂಜೆಯ ಕೊನೆಯ ದಿನವಾಗಿದ್ದು ಭಕ್ತರು ಬೆಳ್ಳಂಬೆಳಗ್ಗೆ ಸ್ನಾನ ಮಾಡಿ ನದಿ ತೀರಕ್ಕೆ ಬಂದು ಸೂರ್ಯನನ್ನು ನೋಡಿ ಪೂಜೆ ಸಲ್ಲಿಸಿ ಉಪವಾಸ ತೊರೆಯುತ್ತಾರೆ.

ಹಿಂದೂ ಪದ್ಧತಿ ಪ್ರಕಾರ, ಬಿಹಾರ, ಜಾರ್ಖಂಡ, ಉತ್ತರ ಪ್ರದೇಶ ಮೊದಲಾದ ರಾಜ್ಯಗಳಲ್ಲಿ ಜನರು ಸೂರ್ಯದೇವ ಮತ್ತು ಆತನ ಪತ್ನಿ ಉಷಾದೇವಿಯನ್ನು ಆರಾಧಿಸುವ ಹಬ್ಬ ಛತ್ ಪೂಜೆಯಾಗಿದೆ.

Related Stories

No stories found.

Advertisement

X
Kannada Prabha
www.kannadaprabha.com