ಶಕ್ತಿ, ಸಾಮರ್ಥ್ಯ ಪ್ರದರ್ಶಿಸಿದ ಭಾರತೀಯ ಹಡಗುಗಳು: ಮಲಬಾರ್ ಬಂದರು ಕಸರತ್ತು ಮುಕ್ತಾಯ 

ನಾಲ್ಕು ದೇಶಗಳ ಮಲಬಾರ್ ಕಡಲ ಹಡಗು ಕಸರತ್ತಿನ 24ನೇ ಆವೃತ್ತಿ ಮುಕ್ತಾಯಗೊಂಡಿದ್ದು, ಭಾರತೀಯ ನೌಕಾಪಡೆಯ ಸಂಪತ್ತುಗಳನ್ನು ಹಿಂದೂ ಮಹಾಸಾಗರದ ತೀರದಲ್ಲಿ ನಿಯೋಜಿಸಲಾಗಿತ್ತು. 
ಮಲಬಾರ್ ಕಸರತ್ತು
ಮಲಬಾರ್ ಕಸರತ್ತು
Updated on

ನವದೆಹಲಿ: ನಾಲ್ಕು ದೇಶಗಳ ಮಲಬಾರ್ ಕಡಲ ಹಡಗು ಕಸರತ್ತಿನ 24ನೇ ಆವೃತ್ತಿ ಮುಕ್ತಾಯಗೊಂಡಿದ್ದು, ಭಾರತೀಯ ನೌಕಾಪಡೆಯ ಸಂಪತ್ತುಗಳನ್ನು ಹಿಂದೂ ಮಹಾಸಾಗರದ ತೀರದಲ್ಲಿ ನಿಯೋಜಿಸಲಾಗಿತ್ತು. 

ಭಾರತೀಯ ನೌಕಾಪಡೆಯ ಅಧಿಕಾರಿಗಳು ಹೇಳುವ ಪ್ರಕಾರ, ಮುಕ್ತ, ಸ್ವತಂತ್ರ ಮತ್ತು ಆಂತರಿಕ ಇಂಡೊ-ಫೆಸಿಫಿಕ್ ಹಾಗೂ ನಿಯಮಾಧಾರಿತ ಅಂತಾರಾಷ್ಟ್ರೀಯ ಆದೇಶಗಳ ಪಾಲನೆಯಲ್ಲಿ ಭಾಗವಹಿಸುವ ಬದ್ಧತೆಯನ್ನು ಈ ಕಸರತ್ತು ತೋರಿಸುತ್ತದೆ.

ಎರಡು ಯುದ್ಧವಿಮಾನ ಹೊತ್ತೊಯ್ಯುವ ಹಡಗುಗಳು, ಇತರ ಹಡಗುಗಳು, ಜಲಾಂತರ್ಗಾಮಿ ನೌಕೆ ಮತ್ತು ತೀವ್ರ ಮಟ್ಟದ ನೌಕಾ ಕಾರ್ಯಾಚರಣೆಗಳಲ್ಲಿ ಭಾಗಿಯಾಗುವ ವಿಮಾನಗಳ ಪ್ರದರ್ಶನ ನಡೆದವು. ವಿಕ್ರಮಾದಿತ್ಯದ ಮಿಗ್ 29ಕೆ ಯುದ್ಧ ವಿಮಾನ ಮತ್ತು ಎಫ್ /ಎ-18 ಯುದ್ಧ ವಿಮಾನಗಳು ಮತ್ತು ಇ2ಸಿ ಹಕೆಯೆ ಪ್ರದರ್ಶನದಲ್ಲಿ ಭಾಗಿಯಾಗಿದ್ದವು.

ಮಲಬಾರ್ ನೌಕಾ ಕಸರತ್ತು 2020 ಎರಡು ಹಂತಗಳಲ್ಲಿ ನಡೆಸಲಾಗಿದೆ. ಮೊದಲ ಹಂತದಲ್ಲಿ ಭಾರತ, ಅಮೆರಿಕ, ಆಸ್ಟ್ರೇಲಿಯಾ ಮತ್ತು ಜಪಾನ್ ಹಡಗುಗಳು ನವೆಂಬರ್ 3ರಿಂದ 6ರವರೆಗೆ ಬಂಗಾಳಕೊಲ್ಲಿ ತೀರದಲ್ಲಿ ವಿಶಾಖಪಟ್ನಂ ತೀರದಲ್ಲಿ ಕಸರತ್ತು ನಡೆಸಲಾಗಿತ್ತು. ಎರಡನೇ ಹಂತದ ಕಸರತ್ತು ನವೆಂಬರ್ 17ರಿಂದ 20ರವರೆಗೆ ಅರೇಬಿಯನ್ ಸಮುದ್ರ ತೀರದಲ್ಲಿ ಆಯೋಜಿಸಲಾಗಿತ್ತು. 

2ನೇ ಹಂತದಲ್ಲಿ, ನಾಲ್ಕು ನೌಕಾಪಡೆಗಳು ಭಾರತೀಯ ನೌಕಾಪಡೆಯ ವಿಕ್ರಮಾದಿತ್ಯ ಕ್ಯಾರಿಯರ್ ಬ್ಯಾಟಲ್ ಗ್ರೂಪ್ ಮತ್ತು ಯುಎಸ್ ನೌಕಾಪಡೆಯ ನಿಮಿಟ್ಜ್ ಕ್ಯಾರಿಯರ್ ಸ್ಟ್ರೈಕ್ ಗ್ರೂಪ್ ಅನ್ನು ಕೇಂದ್ರೀಕರಿಸಿದ ಜಂಟಿ ಕಾರ್ಯಾಚರಣೆಗಳಲ್ಲಿ ಭಾಗವಹಿಸಿದ್ದವು.ಭಾರತೀಯ ನೌಕಾಪಡೆಯ ಭಾಗವಹಿಸುವಿಕೆಯನ್ನು ವೆಸ್ಟರ್ನ್ ಫ್ಲೀಟ್‌ನ ಕಮಾಂಡಿಂಗ್ ಫ್ಲ್ಯಾಗ್ ಆಫೀಸರ್ ರಿಯರ್ ಅಡ್ಮಿರಲ್ ಕೃಷ್ಣ ಸ್ವಾಮಿನಾಥನ್ ನೇತೃತ್ವ ವಹಿಸಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com