ಲವ್ ಜಿಹಾದ್ ವಿವಾದದ ನಡುವೆಯೇ ಅಂತರ್ಧರ್ಮೀಯ ವಿವಾಹಕ್ಕೆ ಪ್ರೋತ್ಸಾಹ ಉತ್ತರಾಖಂಡ್ ಸರ್ಕಾರದಿಂದ 50,000 ರೂಪಾಯಿ!
ಲವ್ ಜಿಹಾದ್ ವಿವಾದದ ನಡುವೆಯೇ ಅಂತರ್ಧರ್ಮೀಯ ವಿವಾಹಕ್ಕೆ ಪ್ರೋತ್ಸಾಹ ಉತ್ತರಾಖಂಡ್ ಸರ್ಕಾರದಿಂದ 50,000 ರೂಪಾಯಿ!

ಲವ್ ಜಿಹಾದ್ ವಿವಾದದ ನಡುವೆಯೇ ಅಂತರ್ಧರ್ಮೀಯ ವಿವಾಹಕ್ಕೆ ಪ್ರೋತ್ಸಾಹ ಉತ್ತರಾಖಂಡ್ ಸರ್ಕಾರದಿಂದ 50,000 ರೂಪಾಯಿ! 

ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಲವ್ ಜಿಹಾದ್ ವಿರುದ್ಧದ ಕಾನೂನು ಜಾರಿಗೊಳಿಸುವ ಬಗ್ಗೆ ಚರ್ಚೆ ನಡೆಯುತ್ತಿರುವಾಗಲೇ, ಉತ್ತರಾಖಂಡ್ ಸರ್ಕಾರ ಅಂತರ್ಧರ್ಮೀಯ ವಿವಾಹವನ್ನು ಪ್ರೋತ್ಸಾಹಿಸಲು 50,000 ರೂಪಾಯಿ ನೀಡಲು ಮುಂದಾಗಿದೆ. 

ಡೆಹ್ರಾಡೂನ್: ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಲವ್ ಜಿಹಾದ್ ವಿರುದ್ಧದ ಕಾನೂನು ಜಾರಿಗೊಳಿಸುವ ಬಗ್ಗೆ ಚರ್ಚೆ ನಡೆಯುತ್ತಿರುವಾಗಲೇ, ಉತ್ತರಾಖಂಡ್ ಸರ್ಕಾರ ಅಂತರ್ಧರ್ಮೀಯ ವಿವಾಹವನ್ನು ಪ್ರೋತ್ಸಾಹಿಸಲು 50,000 ರೂಪಾಯಿ ನೀಡಲು ಮುಂದಾಗಿದೆ. 

ಕಾನೂನಾತ್ಮಕವಾಗಿ­ ಮಾಡಿಕೊಳ್ಳುವ ಅಂತರ್ಧರ್ಮೀಯ ವಿವಾಹಗಳಿಗೆ ಪ್ರೋತ್ಸಾಹ ನೀಡಲು ಚಿಂತನೆ ನಡೆಸಲಾಗುತ್ತಿದೆ ಎಂದು ಸಮಾಜ ಕಲ್ಯಾಣ ಇಲಾಖೆ ತಿಳಿಸಿದೆ. 

ಅಂತರ್ಜಾತಿಯ ವಿವಾಹದಲ್ಲಿ ಈ ಸೌಲಭ್ಯಗಳನ್ನು ಪಡೆದುಕೊಳ್ಳುವುದಕ್ಕೆ ದಂಪತಿಯ ಪೈಕಿ ಒಬ್ಬರು ಸಂವಿಧಾನದ ಆರ್ಟಿಕಲ್ 341 ನಲ್ಲಿ ಉಲ್ಲೇಖಿಸಿರುವ ಪ್ರಕಾರ ಪರಿಶಿಷ್ಟ ಜಾತಿಗೆ ಸೇರಿದವರಾಗಿರಬೇಕಾಗಿದೆ.

ಅಂತರ್ಜಾತಿ ಹಾಗೂ ಅಂತರ್ಧರ್ಮೀಯ ವಿವಾಹವನ್ನು ಪ್ರೋತ್ಸಾಹಿಸುವುದು ರಾಷ್ಟ್ರೀಯ ಏಕತೆಯನ್ನು ಗಟ್ಟಿಗೊಳಿಸುತ್ತದೆ ಎಂದು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ದೀಪಂಕರ್ ಘಿಲ್ಡಿಯಾಲ್ ಹೇಳಿದ್ದಾರೆ. ವಿವಾಹವಾದ ದಂಪತಿ ಒಂದು ವರ್ಷದ ಒಳಗಾಗಿ ಈ ಸೌಲಭ್ಯಗಳನ್ನು ಪಡೆಯಬಹುದಾಗಿದೆ.

Related Stories

No stories found.

Advertisement

X
Kannada Prabha
www.kannadaprabha.com