ಹವಾಮಾನ ಬದಲಾವಣೆ: ಪ್ಯಾರಿಸ್ ಒಪ್ಪಂದದ ಗುರಿಯನ್ನೂ ಮೀರಿ ಭಾರತ ಸಾಧಿಸುತ್ತಿದೆ- ಪ್ರಧಾನಿ ನರೇಂದ್ರ ಮೋದಿ

ಪ್ರಧಾನಿ ನರೇಂದ್ರ ಮೋದಿ ವರ್ಚ್ಯುಯಲ್ ಜಿ-20 ಶೃಂಗಸಭೆಯ ಹವಾಮಾನ ಬದಲಾವಣೆ ವಿಷಯವಾಗಿ ಮಾತನಾಡಿದ್ದು, ಪ್ಯಾರಿಸ್ ಒಪ್ಪಂದದ ಗುರಿಯನ್ನು ಭಾರತ ಈಗಾಗಲೇ ಸಾಧಿಸಿದೆ ಎಂದು ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ವರ್ಚ್ಯುಯಲ್ ಜಿ-20 ಶೃಂಗಸಭೆಯ ಹವಾಮಾನ ಬದಲಾವಣೆ ವಿಷಯವಾಗಿ ಮಾತನಾಡಿದ್ದು, ಪ್ಯಾರಿಸ್ ಒಪ್ಪಂದದ ಗುರಿಯನ್ನು ಭಾರತ ಈಗಾಗಲೇ ಸಾಧಿಸಿದೆ ಎಂದು ಹೇಳಿದ್ದಾರೆ.

ವಾರ್ಷಿಕವಾಗಿ ಇಂಗಾಲದ ಡೈಆಕ್ಸೈಡ್ ಹೊರಸೂಸುವಿಕೆಯನ್ನು 38 ಮಿಲಿಯನ್ ಟನ್ ನ್ನಷ್ಟು ಕಡಿಮೆ ಮಾಡುವುದಕ್ಕಾಗಿ ಎಲ್ಇಡಿ ದೀಪಗಳನ್ನು ಬಳಕೆ ಮಾಡಲಾಗುತ್ತದೆ ಹಾಗೂ ಅಡುಗೆ ಮನೆಗಳನ್ನು ಹೊಗೆ ಮುಕ್ತಗೊಳಿಸುವುದಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.

ಹವಾಮಾನ ಬದಲಾವಣೆಗಾಗಿ ಏಕಾಂಗಿ ಹೋರಾಟ ಸಾಧ್ಯವಿಲ್ಲ,   ಸಮಗ್ರವಾಗಿ ಹೋರಾಡಬೇಕೆಂದು ಹೇಳಿರುವ ಪ್ರಧಾನಿ ನರೇಂದ್ರ ಮೋದಿ, ನಮ್ಮ ಸಾಂಸ್ಕೃತಿಕ ಸಾರದಿಂದ ಪ್ರೇರಿತಗೊಂಡು ನಮ್ಮ ಸರ್ಕಾರ ಕಡಿಮೆ ಇಂಗಾಲ ಹೊರಸೂಸುವ ಹವಾಮಾನ-ಸ್ಥಿತಿಸ್ಥಾಪಕ ಅಭಿವೃದ್ಧಿ ಅಭ್ಯಾಸಗಳನ್ನು ಪ್ರಾರಂಭಿಸಲಾಗಿದೆ ಎಂದು ಮೋದಿ ಹೇಳಿದ್ದಾರೆ.

ಭಾರತ ಸರ್ಕಾರ ಏಕ ಬಳಕೆ ಪ್ಲಾಸ್ಟಿಕ್ ಗಳನ್ನು ನಿಷೇಧಿಸಿದೆ ಎಂದು ಮೋದಿ ಹೇಳಿದ್ದು, ಅಂತಾರಾಷ್ಟ್ರೀಯ ಸೋಲಾರ್ ಅಲಾಯನ್ಸ್ ನ್ನು ಪ್ರಾರಂಭಿಸುವುದಕ್ಕೆ ಕರೆ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com