'ಚುನಾವಣೆ ಮುಗಿದಿದೆ': ವಾರಗಳ ವಿಳಂಬದ ನಂತರ ಅಧಿಕಾರ ಹಸ್ತಾಂತರ ಪ್ರಕ್ರಿಯೆ ಪ್ರಾರಂಭದ ಸುಳಿವು ನೀಡಿದ ಜೋ ಬೈಡನ್
ವಾಷಿಂಗ್ ಟನ್: ಅಮೆರಿಕ ಅಧ್ಯಕ್ಷೀಯ ಚುನಾವಣೋತ್ತರ ಪ್ರಹಸನಗಳಿಗೆ ತೆರೆ ಬೀಳುವ ಎಲ್ಲಾ ಲಕ್ಷಣಗಳೂ ಸ್ಪಷ್ಟವಾಗುತ್ತಿದ್ದು, ವಾರಗಳ ವಿಳಂಬದ ನಂತರ ಜೋ ಬೈಡನ್ ಗೆ ಅಧಿಕಾರ ಹಸ್ತಾಂತರ ಪ್ರಕ್ರಿಯೆ ಪ್ರಾರಂಭವಾಗಿದೆ.
ಜೋ ಬೈಡನ್ ಅವರ ಅಧಿಕಾರ ಹಸ್ತಾಂತರ ತಂಡ, ಅಧಿಕಾರ ಹಸ್ತಾಂತರಕ್ಕೆ ಸಿದ್ಧತೆ ನಡೆಸಲು ಫೆಡರಲ್ ಏಜೆನ್ಸಿಗಳೊಂದಿಗೆ ಮಾತುಕತೆ ನಡೆಸಿದೆ. ಸೋಮವಾರದಂದು ಪ್ರಕಟಗೊಂಡ ಘೋಷಣೆಯ ಬಳಿಕ ಜೋ ಬೈಡನ್ ತಮ್ಮ ತಂಡದ ಆಯ್ಕೆ ಹಾಗೂ ಸಂಪುಟ ಸಹೋದ್ಯೋಗಿಗಳ ಆಯ್ಕೆಯನ್ನು ತ್ವರಿತಗೊಳಿಸಿದ್ದಾರೆ.
ತಮ್ಮ ಅಧಿಕಾರವನ್ನು ಮತ್ತಷ್ಟು ಸ್ಪಷ್ಟಪಡಿಸುವ ನಿಟ್ಟಿನಲ್ಲಿ ಟ್ವೀಟ್ ಮಾಡಿರುವ ಜೋ ಬೈಡನ್, " ಚುನಾವಣೆ ಮುಕ್ತಾಯಗೊಂಡಿದೆ, ಒಬ್ಬರೊನ್ನೊಬ್ಬರು ಕೆಟ್ಟದಾಗಿ ಬಿಂಬಿಸುವುದನ್ನು ಬದಿಗಿರಿಸಬೇಕಾದ ಸಮಯ ಇದು ಎಂದು ಹೇಳಿದ್ದಾರೆ.
ಈ ವರೆಗೂ ಕಾನೂನಾತ್ಮಕ ಹೋರಾಟದ ವಿಚಾರವಾಗಿ ಮಾತನಾಡುತ್ತಿದ್ದ ಡೊನಾಲ್ಡ್ ಟ್ರಂಪ್ ಆಡಳಿತದ ತಂಡ ಈಗ ಅಧಿಕಾರ ಹಸ್ತಾಂತರ ಪ್ರಕ್ರಿಯೆ ಪ್ರಾರಂಭವಾಗುವುದಕ್ಕೆ ಗ್ರೀನ್ ಸಿಗ್ನಲ್ ನೀಡಿದೆ ಎಂದು ರಾಯ್ಟರ್ಸ್ ವರದಿ ಮೂಲಕ ತಿಳಿದುಬಂದಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ