ನಿವಾರ್ ಚಂಡಮಾರುತ
ದೇಶ
ಮಧ್ಯರಾತ್ರಿ 2ಕ್ಕೆ ನಿವಾರ್ ಚಂಡಮಾರುತ ಲ್ಯಾಂಡ್ ಫಾಲ್: ತಮಿಳುನಾಡಿನಲ್ಲಿ ಲಕ್ಷಾಂತರ ಜನರ ಸ್ಥಳಾಂತರ
ನಿವಾರ್ ಚಂಡಮಾರುತ ಮಧ್ಯರಾತ್ರಿ 2 ಗಂಟೆ ವೇಳೆಗೆ ಸಮುದ್ರದಿಂದ ಭೂಪ್ರದೇಶಕ್ಕೆ ಅಪ್ಪಳಿಸಲಿದೆ.
ಚೆನ್ನೈ: ನಿವಾರ್ ಚಂಡಮಾರುತ ಮಧ್ಯರಾತ್ರಿ 2 ಗಂಟೆ ವೇಳೆಗೆ ಸಮುದ್ರದಿಂದ ಭೂಪ್ರದೇಶಕ್ಕೆ ಅಪ್ಪಳಿಸಲಿದೆ.
ಎನ್ ಡಿಆರ್ ಎಫ್ ನ ಡಿಜಿ ಎಸ್ಎನ್ ಪ್ರಧಾನ್ ಈ ಬಗ್ಗೆ ಮಾಹಿತಿ ನೀಡಿದ್ದು, ತಮಿಳುನಾಡಿನಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದ್ದು, ಪಾಂಡಿಚೆರಿಗಳಲ್ಲಿ 1,000 ಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ.
ಚಂಡಮಾರುತದ ಪರಿಸ್ಥಿತಿ ನಿಭಾಯಿಸುವುದಕ್ಕಾಗಿ ಎನ್ ಡಿಆರ್ ಎಫ್ ಈಗಾಗಲೇ ಹಲವು ತಂಡಗಳನ್ನು ನಿಯೋಜಿಸಲಾಗಿದ್ದು, ರಕ್ಷಣಾ ಕಾರ್ಯಾಚರಣೆ ಹಾಗೂ ಪರಿಹಾರ ಕಾರ್ಯಾಚರಣೆಗಳಲ್ಲಿ ಈ ತಂಡಗಳು ತೊಡಗಲಿವೆ ಎಂದು ಎನ್ ಡಿಆರ್ ಎಫ್ ನ ಡಿಜಿ ಪ್ರಧಾನ್ ಹೇಳಿದ್ದಾರೆ.
ಇದೇ ವೇಳೆ ಚಂಡಮಾರುತದ ಹಿನ್ನೆಲೆಯಲ್ಲಿ ತಮಿಳುನಾಡು ಬಿಜೆಪಿ ಕೊನೆಯ ಹಂತದ ವೇಲ್ ಯಾತ್ರೆಯನ್ನು ರದ್ದುಗೊಳಿಸಿದ್ದು, ಅಂತಿಮ ಹಂತದ ಕಾರ್ಯಕ್ರಮ ಡಿ.05 ರಂದು ತಿರುಚೆಂದೂರು ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ