ಆನಂದಿಬೆನ್ ಪಟೇಲ್
ದೇಶ
ಬಲವಂತದ ಧಾರ್ಮಿಕ ಮತಾಂತರ ನಿಷೇಧ ಸುಗ್ರೀವಾಜ್ಞೆಗೆ ಉತ್ತರ ಪ್ರದೇಶ ರಾಜ್ಯಪಾಲರ ಅಂಕಿತ
ಉತ್ತರ ಪ್ರದೇಶದ ರಾಜ್ಯಪಾಲೆ ಆನಂದಿಬೆನ್ ಪಟೇಲ್ ಬಲವಂತದ ಅಥವಾ ಅಪ್ರಾಮಾಣಿಕ ಧಾರ್ನಿಕ ಮತಾಂತರಕ್ಕೆ ನಿಷೇಧ ಹೇರುವ "ಯುಪಿ ಕಾನೂನುಬಾಹಿರ ಧಾರ್ನಿಕ ಮತಾಂತರದ ನಿಷೇಧ ಕಾಯ್ದೆ 2020"ಸುಗ್ರೀವಾಜ್ಞೆಗೆ ಅಂಕಿತ ಹಾಕಿದ್ದಾರೆ.
ಲಖನೌ: ಉತ್ತರ ಪ್ರದೇಶದ ರಾಜ್ಯಪಾಲೆ ಆನಂದಿಬೆನ್ ಪಟೇಲ್ ಬಲವಂತದ ಅಥವಾ ಅಪ್ರಾಮಾಣಿಕ ಧಾರ್ನಿಕ ಮತಾಂತರಕ್ಕೆ ನಿಷೇಧ ಹೇರುವ "ಯುಪಿ ಕಾನೂನುಬಾಹಿರ ಧಾರ್ನಿಕ ಮತಾಂತರದ ನಿಷೇಧ 2020"ಸುಗ್ರೀವಾಜ್ಞೆಗೆ ಅಂಕಿತ ಹಾಕಿದ್ದಾರೆ.
ಈ ಮೂಲಕ ಉತ್ತರ ಪ್ರದೇಶದಲ್ಲಿ ಇನ್ನು ಮುಂದೆ "ಲವ್ ಜಿಹಾದ್" ಸೇರಿದಂತೆ ಬಲವಂತದ ಮತಾಂತರವು ಕಾನೂನುಬಾಹಿರ, ಶಿಕ್ಷಾರ್ಹ ಅಪರಾಧ ಎನಿಸಲಿದೆ.
ವಿವಾಹಕ್ಕಾಗಿ ಬಲವಂತದ ಧಾರ್ಮಿಕ ಮತಾಂತರವನ್ನು ತಡೆಯುವ ನಿಟ್ಟಿನಲ್ಲಿ ಕಠಿಣ ಕಾನೂನು ರೂಪಿಸುಲು ಉತ್ತರ ಪ್ರದೇಶ ಸರ್ಕಾರ ಸುಗ್ರೀವಾಜ್ಞೆ ಜಾರಿಗೊಳಿಸಲು ಮಂಗಳವಾರ ಒಪ್ಪಿಗೆ ಸೂಚಿಸಿತ್ತು.


