ಬಾಬ್ರಿ ಮಸೀದಿ ತೀರ್ಪು 'ನ್ಯಾಯಾಂಗದ ಅಣಕ': ಮಾಜಿ ಕಾನೂನು ಸಚಿವ ವೀರಪ್ಪ ಮೊಯ್ಲಿ

ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ಎಲ್ಲ ಆರೋಪಿಗಳನ್ನು ವಿಶೇಷ ಸಿಬಿಐ ನ್ಯಾಯಾಲಯವು ಖುಲಾಸೆಗೊಳಿಸುವುದು "ನ್ಯಾಯಾಂಗದ ಅಣಕ" ಎಂದು ಮಾಜಿ ಕಾನೂನು ಸಚಿವ ಎಂ.ವೀರಪ್ಪ ಮೊಯ್ಲಿ ಹೇಳಿದ್ದಾರೆ ಮತ್ತು ಈ ತೀರ್ಪು ನ್ಯಾಯಾಂಗದ "ಸೂಕ್ಷ್ಮತೆ" ಯನ್ನು ಪ್ರಶ್ನಿಸುತ್ತದೆ ಎಂದಿದ್ದಾರೆ.
ವೀರಪ್ಪ ಮೊಯ್ಲಿ
ವೀರಪ್ಪ ಮೊಯ್ಲಿ
Updated on

ನವದೆಹಲಿ: ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ಎಲ್ಲ ಆರೋಪಿಗಳನ್ನು ವಿಶೇಷ ಸಿಬಿಐ ನ್ಯಾಯಾಲಯವು ಖುಲಾಸೆಗೊಳಿಸುವುದು "ನ್ಯಾಯಾಂಗದ ಅಣಕ" ಎಂದು ಮಾಜಿ ಕಾನೂನು ಸಚಿವ ಎಂ.ವೀರಪ್ಪ ಮೊಯ್ಲಿ ಹೇಳಿದ್ದಾರೆ ಮತ್ತು ಈ ತೀರ್ಪು ನ್ಯಾಯಾಂಗದ "ಸೂಕ್ಷ್ಮತೆ" ಯನ್ನು ಪ್ರಶ್ನಿಸುತ್ತದೆ ಎಂದಿದ್ದಾರೆ.

ಮಸೀದಿ ನೆಲಸಮಗೊಳಿಸುವಿಕೆಯು "ಕಾನೂನಿನ ನಿಯಮದ ಉಲ್ಲಂಘನೆಯಾಗಿದೆ" ಎಂದು 2019 ರಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ಅಭಿಪ್ರಾಯಕ್ಕೆ ಈ ತೀರ್ಪು ಹೊಂದಿಕೆಯಾಗುವುದಿಲ್ಲ ಎಂದು ಕಾಂಗ್ರೆಸ್ ಹಿರಿಯ  ನಾಯಕ ಮೊಯ್ಲಿ ಹೇಳಿದ್ದಾರೆ.

ಬಾಬ್ರಿ ಮಸೀದಿ ನೆಲಸಮಗೊಳಿಸುವಿಕೆ  ಪ್ರಕರಣದಲ್ಲಿ ಬಿಜೆಪಿ ಹಿರಿಯ ನಾಯಕರಾದ ಎಲ್ ಕೆ ಅಡ್ವಾಣಿ ಮತ್ತು ಎಂಎಂ ಜೋಶಿ ಸೇರಿದಂತೆ ಎಲ್ಲ 32 ಆರೋಪಿಗಳನ್ನು ಲಖನೌದ ವಿಶೇಷ ಸಿಬಿಐ ನ್ಯಾಯಾಲಯ ಬುಧವಾರ ಖುಲಾಸೆಗೊಳಿಸಿದೆ.

ಕಾಂಗ್ರೆಸ್ ನ ಇನ್ನೋರ್ವ ಮುಖಂಡ, ಮಾಜಿ ವಿತ್ತ ಸಚಿವ ಪಿ. ಚಿದಂಬರಂ "ವಿಚಾರಣಾ ನ್ಯಾಯಾಲಯದ ತೀರ್ಪು ತರ್ಕ ಮತ್ತು ಸಾಮಾನ್ಯ ಜ್ಞಾನವಿಲ್ಲದ್ದಾಗಿದೆ, ಜೊತೆಗೆ ಸುಪ್ರೀಂ ಕೋರ್ಟಿನ ತೀರ್ಮಾನಗಳನ್ನು ನಿರಾಕರಿಸುತ್ತದೆ!" ಎಂದಿದ್ದಾರೆ. ಅಲ್ಲದೆ  ಜೆಸ್ಸಿಕಾಳನ್ನು ಯಾರೂ ಕೊಂದಿಲ್ಲ. 'ಮಸೀದಿಯನ್ನು ಯಾರೂ ನೆಲಸಮ ಮಾಡಲಿಲ್ಲ"ಚಿದಂಬರಂ ಟ್ವೀಟ್ ಮಾಡಿದ್ದಾರೆ.

ಬಾಬ್ರಿ ಮಸೀದಿ ಧ್ವಂಸ ಹಾಗೂ ಅದರ ಸ್ಥಳದಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ಇಟ್ಟಿಗೆಗಳು ಮತ್ತು ಇತರ ವಸ್ತುಗಳನ್ನು ಹೊತ್ತ ಸ್ವಯಂಸೇವಕರೊಂದಿಗೆ ಎರಡು ವರ್ಷಗಳ ರಥಯಾತ್ರೆಯನ್ನು ನಡೆಸಿದ್ದ ಕಾರಣ ಸಾಕ್ಷಾಧಾರಗಳು  ಬಹಳ ಸ್ಪಷ್ಟವಾಗಿವೆ. ಆದರೆ ಮಸೀದಿ ಉರುಳಿಸಿರುವುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ಹೇಳಿದ ನ್ಯಾಯಾಲಯದ ತೀರ್ಪು "ನ್ಯಾಯಾಂಗದ ಅಣಕ" ಎಂದು ಮೊಯ್ಲಿ ಹೇಳಿದರು.

"ರಥಯಾತ್ರೆ ಮತ್ತು ಅದರ ಪರಿಣಾಮವಾಗಿ ಬಾಬ್ರಿ  ಮಸೀದಿಯನ್ನು ನೆಲಸಮ ಮಾಡಿದ್ದನ್ನು ಇಡೀ ರಾಷ್ಟ್ರವೇ ಕಂಡಿತ್ತು.  ಇಡೀ ಜಗತ್ತು ಈ ಕೃತ್ಯಕ್ಕೆ ಸಾಕ್ಷಿಯಾಗಿದೆ. ನ್ಯಾಯಾಂಗ ಪ್ರಜ್ಞೆ ಮತ್ತು ಸಿಬಿಐನ ಸೂಕ್ಷ್ಮತೆ ಗೋಡೆಯ ಮೇಲೆ ಬರೆದ ಪುರಾವೆಗಳನ್ನು ಓದಲು ವಿಫಲವಾಗಿದೆ" ಅವರು ಹೇಳಿದರು  ವಿಧ್ವಂಸಕ ಕೃತ್ಯದಲ್ಲಿ ಪಾಲ್ಗೊಳ್ಳಲು "ಸಾಂಸ್ಥಿಕ ಪಿತೂರಿ" ಇತ್ತು, ಆದರೆ ನ್ಯಾಯಾಲಯವು ಪಿತೂರಿಗಾರರನ್ನು ಗುರುತಿಸಲು ಸಾಧ್ಯವಾಗಲಿಲ್ಲ ಎಂದು ಅವರು ಹೇಳಿದ್ದಾರೆ. "ನ್ಯಾಯಾಂಗಕ್ಕೆ ಕಣ್ಣು, ಕಿವಿ ಅಥವಾ ಪ್ರಜ್ಞೆ ಇಲ್ಲ ಎಂಬ ಅಂಶವನ್ನು ಇದು ತೋರಿಸುತ್ತದೆ. ಸತ್ಯ ಮತ್ತು ನ್ಯಾಯಕ್ಕೆ ದೇಶದಲ್ಲಿ ಯಾವುದೇ ಮೌಲ್ಯವಿಲ್ಲ ಎಂದು ತೀರ್ಪು ಸಾಬೀತುಪಡಿಸಿದೆ. ಈ ತೀರ್ಪು ನ್ಯಾಯಾಂಗದ ವಿಶ್ವಾಸಾರ್ಹತೆಗೆ ಕೆಟ್ಟ ಪ್ರತಿಬಿಂಬವಾಗಿದೆ" ಎಂದು ಅವರು ಆರೋಪಿಸಿದರು.

ಮೊಯ್ಲಿ ಮೇ 2009 ರಿಂದ ಮೇ 2011 ರವರೆಗೆ ಕಾನೂನು ಸಚಿವರಾಗಿದ್ದರು.
 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com