ಹತ್ರಾಸ್ ಘಟನೆ ಬಗ್ಗೆ ಪ್ರಧಾನಿ ಮೋದಿ ಮೌನ ಮುರಿಯಬೇಕು- ಭೀಮ್ ಆರ್ಮಿ ಮುಖ್ಯಸ್ಥ ಒತ್ತಾಯ

ಉತ್ತರ ಪ್ರದೇಶದ ಹತ್ರಾಸ್ ನಲ್ಲಿ ನಡೆದಿರುವ ದಲಿತ ಯುವತಿ ಮೇಲಿನ ಸಾಮೂಹಿಕ ಅತ್ಯಾಚಾರ, ಹತ್ಯೆ ಪ್ರಕರಣ ಮತ್ತು ರಾತ್ರೋರಾತ್ರಿ ಮೃತದೇಹವನ್ನು ಪೊಲೀಸರು ಅಂತ್ಯಸಂಸ್ಕಾರ ಮಾಡಿರುವುದರ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮೌನ ಮುರಿಯಬೇಕು ಎಂದು ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಅಜಾದ್ ಒತ್ತಾಯಿಸಿದ್ದಾರೆ.
ಚಂದ್ರಶೇಖರ್ ಅಜಾದ್
ಚಂದ್ರಶೇಖರ್ ಅಜಾದ್

ನವದೆಹಲಿ: ಉತ್ತರ ಪ್ರದೇಶದ ಹತ್ರಾಸ್ ನಲ್ಲಿ ನಡೆದಿರುವ ದಲಿತ ಯುವತಿ ಮೇಲಿನ ಸಾಮೂಹಿಕ ಅತ್ಯಾಚಾರ, ಹತ್ಯೆ ಪ್ರಕರಣ ಮತ್ತು ರಾತ್ರೋರಾತ್ರಿ ಮೃತದೇಹವನ್ನು ಪೊಲೀಸರು ಅಂತ್ಯಸಂಸ್ಕಾರ ಮಾಡಿರುವುದರ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮೌನ ಮುರಿಯಬೇಕು ಎಂದು ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಅಜಾದ್ ಒತ್ತಾಯಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ಮೌನ ನಮ್ಮ ಹೆಣ್ಣುಮಕ್ಕಳಿಗೆ ಅಪಾಯವಾಗುತ್ತಿದೆ. ನಿಮ್ಮನ್ನು ಉತ್ತರ ಪ್ರದೇಶದಿಂದಲೇ ಆಯ್ಕೆ ಮಾಡಿ ಪಾರ್ಲಿಮೆಂಟ್ ಗೆ ಕಳುಹಿಸಲಾಗಿದೆ. ಹತ್ರಾಸ್ ನಲ್ಲಿ ಹೆಣ್ಣು ಮಗಳೊಬ್ಬರ ಮೇಲೆ ಬರ್ಬರ ರೀತಿಯಲ್ಲಿ ಹಲ್ಲೆ ನಡೆಸಲಾಗಿದೆ, ಆಕೆಯ ಮೇಲೆ ಅತ್ಯಾಚಾರ ನಡೆಸಿ, ಬೆನ್ನು ಮೂಳೆ ಮುರಿದು ಕೊಲೆ ಮಾಡಲಾಗಿದೆ. ಮೃತದೇಹವನ್ನು  ಕಸದಂತೆ ಅಂತ್ಯಸಂಸ್ಕಾರ ಮಾಡಲಾಗಿದೆ  ಎಂದು ಚಂದ್ರಶೇಖರ್ ಅಜಾದ್ ಹೇಳಿದ್ದಾರೆ.

ಸಂತ್ರಸ್ಥೆಯ ಅಥವಾ ಆಕೆಯ ಕುಟುಂಬದವರ ಗೋಳಾಟ ನಿಮ್ಮಗೆ ಕೇಳದಿದ್ದರೆ ಎಷ್ಟು ದಿನಗಳವರೆಗೂ ಮೌನವಾಗಿ ಇರುತ್ತೀರಾ ಪ್ರಧಾನಿ? ಉತ್ತರ ಕೊಡಿ, ಇಂದು ಸಂಜೆ ನಾವೆಲ್ಲಾ ನಿಮ್ಮ ಉತ್ತರಕ್ಕಾಗಿ ಒತ್ತಾಯಿಸುತ್ತೇವೆ. ನೀವು ಮಾತನಾಡಬೇಕು, ನ್ಯಾಯ ಕೊಡಿಸಬೇಕು ಎಂದು ಚಂದ್ರಶೇಖರ್ ಅಜಾದ್ ಒತ್ತಾಯಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com