ಅಯೋಧ್ಯೆಯ ರಾಮ ಮಂದಿರದ ಉದ್ದೇಶಿತ ವಿನ್ಯಾಸ
ದೇಶ
ಅಯೋಧ್ಯೆ ದೇವಾಲಯ ಟ್ರಸ್ಟ್ ಗೆ ಈ ವರೆಗೂ 100 ಕೋಟಿ ದೇಣಿಗೆ: ಅ.17 ಕ್ಕೆ ನಿರ್ಮಾಣ ಪ್ರಾರಂಭ
ಅಯೋಧ್ಯೆ ದೇವಾಲಯ ಟ್ರಸ್ಟ್ ಗೆ ಈ ವರೆಗೂ 100 ಕೋಟಿ ದೇಣಿಗೆ ಹರಿದುಬಂದಿದೆ.
ಅಯೋಧ್ಯೆ: ಅಯೋಧ್ಯೆ ದೇವಾಲಯ ಟ್ರಸ್ಟ್ ಗೆ ಈ ವರೆಗೂ 100 ಕೋಟಿ ದೇಣಿಗೆ ಹರಿದುಬಂದಿದೆ.
ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಈ ಬಗ್ಗೆ ಮಾಹಿತಿ ನೀಡಿದ್ದು ಅ.17 ರಿಂದ ಅಂದರೆ ನವರಾತ್ರಿಯ ಮೊದಲನೇ ದಿನದಿಂದ ಮಂದಿರ ನಿರ್ಮಾಣ ಕಾಮಗಾರಿ ಫೌಂಡೇಶನ್ ಪಿಲ್ಲರ್ ಗಳ ನಿರ್ಮಾಣದ ಮೂಲಕ ಪ್ರಾರಂಭವಾಗಲಿದೆ.
ಕೇಂದ್ರ ಸರ್ಕಾರ ರಾಮಜನ್ಮಭೂಮಿ ಟ್ರಸ್ಟ್ ನ್ನು ಆದಾಯ ತೆರಿಗೆ ಕಾಯ್ದೆಯ 80ಜಿ ಅಡಿಯಲ್ಲಿ ಗುರುತಿಸಿದೆ.ಈ ಸೆಕ್ಷನ್ ಅಡಿಯಲ್ಲಿ ದತ್ತಿ ಸಂಸ್ಥೆಗಳ ಪರಿಹಾರ ನಿಧಿಗಳಿಗೆ ನೀಡಿದ ದೇಣಿಗೆಗಳ ಮೇಲೆ ತೆರಿಗೆ ವಿನಾಯಿತಿಯನ್ನು ಪಡೆಯಬಹುದಾಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ