ಲಂಡನ್ ನಲ್ಲಿ ರಹಸ್ಯ ವಿಚಾರಣೆಗಳಿಂದಾಗಿ ವಿಜಯ್ ಮಲ್ಯ ಹಸ್ತಾಂತರ ಪ್ರಕ್ರಿಯೆ ವಿಳಂಬ: ಸುಪ್ರೀಂ ಕೋರ್ಟ್ ಗೆ ಎಂಇಎ ಮಾಹಿತಿ

ಬ್ರಿಟನ್ ನ ಉನ್ನತ ನ್ಯಾಯಾಲಯದ ಆದೇಶದ ಹೊರತಾಗಿಯೂ ಸಹ ಸುಸ್ತಿದಾರ ವಿಜಯ್ ಮಲ್ಯ ಅವರ ಹಸ್ತಾಂತರ ಪ್ರಕ್ರಿಯೆ ಇನ್ನೂ ಜಾರಿಯಾಗಿಲ್ಲ ಎಂದು ಸುಪ್ರೀಂ ಕೋರ್ಟ್ ಗೆ ವಿದೇಶಾಂಗ ಸಚಿವಾಲಯ ಮಾಹಿತಿ ನೀಡಿದೆ.
ರಹಸ್ಯ ಪ್ರಕ್ರಿಯೆಗಳಿಂದ ಮಲ್ಯ ಹಸ್ತಾಂತರ ಪ್ರಕ್ರಿಯೆ ವಿಳಂಬ: ಸುಪ್ರೀಂ ಕೋರ್ಟ್ ಗೆ ಎಂಇಎ ಮಾಹಿತಿ
ರಹಸ್ಯ ಪ್ರಕ್ರಿಯೆಗಳಿಂದ ಮಲ್ಯ ಹಸ್ತಾಂತರ ಪ್ರಕ್ರಿಯೆ ವಿಳಂಬ: ಸುಪ್ರೀಂ ಕೋರ್ಟ್ ಗೆ ಎಂಇಎ ಮಾಹಿತಿ

ನವದೆಹಲಿ: ಬ್ರಿಟನ್ ನ ಉನ್ನತ ನ್ಯಾಯಾಲಯದ ಆದೇಶದ ಹೊರತಾಗಿಯೂ ಸಹ ಸುಸ್ತಿದಾರ ವಿಜಯ್ ಮಲ್ಯ ಅವರ ಹಸ್ತಾಂತರ ಪ್ರಕ್ರಿಯೆ ಇನ್ನೂ ಜಾರಿಯಾಗಿಲ್ಲ ಎಂದು ಸುಪ್ರೀಂ ಕೋರ್ಟ್ ಗೆ ವಿದೇಶಾಂಗ ಸಚಿವಾಲಯ ಮಾಹಿತಿ ನೀಡಿದೆ.

ಬ್ರಿಟನ್ ನಲ್ಲಿ ಮಲ್ಯ ಹಸ್ತಾಂತರ ಪ್ರಕ್ರಿಯೆ ಸಂಬಂಧ  ನಡೆಯುತ್ತಿರುವ "ರಹಸ್ಯ ಪ್ರಕ್ರಿಯೆ"ಗಳ ಬಗ್ಗೆ ತನಗೆ ಅರಿವಿಲ್ಲ, ಏಕೆಂದರೆ ಈ ಪ್ರಕರಣದಲ್ಲಿ ತಾನು ವಾದಿ ಅಥವಾ ಪ್ರತಿವಾದಿಯೂ ಅಲ್ಲ ಎಂದು ಸುಪ್ರೀಂ ಕೋರ್ಟ್ ಗೆ ಎಂಇಎ ತಿಳಿಸಿದೆ.

ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಸಚಿವಾಲಯದ ಪರ ಕೋರ್ಟ್ ಗೆ ಹಾಜರಾಗಿ ಈ ಮಾಹಿತಿ ನೀಡಿದ್ದಾರೆ. ತಾನು ಬ್ರಿಟನ್ ಕೋರ್ಟ್ ನಲ್ಲಿ ವಾದಿ-ಪ್ರತಿವಾದಿಯೂ ಅಲ್ಲ ಆದ್ದರಿಂದ ಹಸ್ತಾಂತರ ಪ್ರಕ್ರಿಯೆಗಳ ಬಗ್ಗೆ ಸಂಪೂರ್ಣ ಮಾಹಿತಿಯೂ ಇಲ್ಲ ಎಂದು ಸಚಿವಾಲಯ ನೀಡಿರುವ ಮಾಹಿತಿಯನ್ನು ಕೋರ್ಟ್ ಗಮನಕ್ಕೆ ತಂದಿದ್ದಾರೆ.

ಮಲ್ಯಾ ಹಸ್ತಾಂತರ ಪ್ರಕ್ರಿಯೆಯನ್ನು ತಡೆಯುತ್ತಿರುವುದು ಏನು? ಎಂದು ಸುಪ್ರೀಂ ಕೋರ್ಟ್ ನ ಯು.ಯು ಲಲಿತ್ ನೇತೃತ್ವದ ಪೀಠ ಪ್ರಶ್ನಿಸಿತ್ತು. ಈ ಹಿನ್ನೆಲೆಯಲ್ಲಿ ಕೋರ್ಟ್ ಗೆ ಎಂಇಎ ಸ್ಪಷ್ಟನೆ ನೀಡಿದೆ. 

ಇದೇ ವೇಳೆ ಮಲ್ಯ ವಿರುದ್ಧ ಇರುವ ನ್ಯಾಯಾಂಗ ನಿಂದನೆ ಪ್ರಕರಣವಿದ್ದು, ನ್ಯಾಯಾಲಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲ್ಯ ಪರ ವಕೀಲರು ಯಾವಾಗ ಹಾಜರಾಗುತ್ತಾರೆ, ಯಾವಾಗ ಮಲ್ಯ ಹಸ್ತಾಂತರ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ ಎಂಬ ಬಗ್ಗೆ ಮಾಹಿತಿ ನೀಡಲು ಸಾಧ್ಯವಾಗುತ್ತಿಲ್ಲ ಎಂಬುದನ್ನೂ ನ್ಯಾಯಾಲಯ ಗಮನಿಸಿದೆ. 

ಪ್ರಕರಣದ ವಿಚಾರಣೆಯನ್ನು ನ.2 ಕ್ಕೆ ನ್ಯಾಯಾಲಯ ಮುಂದೂಡಿದೆ. ಕರ್ನಾಟಕ ಹೈ-ಕೋರ್ಟ್ ಆದೇಶದ ಹೊರತಾಗಿಯೂ ವಿಜಯ್ ಮಲ್ಯ ತನ್ನ ಮಕ್ಕಳಿಗೆ 40 ಮಿಲಿಯನ್ ಅಮೆರಿಕನ್ ಡಾಲರ್ ನಷ್ಟು ಮೊತ್ತವನ್ನು ವರ್ಗಾವಣೆ ಮಾಡಿದ್ದರು. ಈ ಸಂಬಂಧ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಆತನನ್ನು ತಪ್ಪಿತಸ್ಥ ಎಂದು ಘೋಷಿಸಿತ್ತು. ಈ ಆದೇಶವನ್ನು ಮರುಪರಿಶೀಲಿಸಬೇಕೆಂಬ ಮಲ್ಯ ಅವರ ಅರ್ಜಿಯನ್ನೂ ಕೋರ್ಟ್ 2017 ರ ಮೇ ತಿಂಗಳಲ್ಲಿ ವಜಾಗೊಳಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com