ಪಾಕಿಸ್ತಾನಕ್ಕೆ ರಾವಿ ನದಿ ನೀರು ಹರಿವು ಕಡಿಮೆ ಮಾಡಿ ಪಂಜಾಬ್, ಜಮ್ಮು-ಕಾಶ್ಮೀರಕ್ಕೆ ಹೆಚ್ಚಿಸುವ ನಿಯಮಗಳಿಗೆ ಕೇಂದ್ರ ಅಸ್ತು

ಪಾಕಿಸ್ತಾನಕ್ಕೆ ರಾವಿ ನದಿ ನೀರಿನ ಹರಿವನ್ನು ತೀವ್ರವಾಗಿ ಕಡಿಮೆ ಮಾಡುವ ನಿಯಮಗಳಿಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. 
ಪಾಕಿಸ್ತಾನಕ್ಕೆ ರಾವಿ ನದಿ ನೀರು ಹರಿವು ಕಡಿಮೆ, ಪಂಜಾಬ್, ಜಮ್ಮು-ಕಾಶ್ಮೀರಕ್ಕೆ ಹೆಚ್ಚಿಸುವ ನಿಯಮಗಳಿಗೆ ಕೇಂದ್ರ ಅಸ್ತು
ಪಾಕಿಸ್ತಾನಕ್ಕೆ ರಾವಿ ನದಿ ನೀರು ಹರಿವು ಕಡಿಮೆ, ಪಂಜಾಬ್, ಜಮ್ಮು-ಕಾಶ್ಮೀರಕ್ಕೆ ಹೆಚ್ಚಿಸುವ ನಿಯಮಗಳಿಗೆ ಕೇಂದ್ರ ಅಸ್ತು

ನವದೆಹಲಿ: ಪಾಕಿಸ್ತಾನಕ್ಕೆ ರಾವಿ ನದಿ ನೀರಿನ ಹರಿವನ್ನು ತೀವ್ರವಾಗಿ ಕಡಿಮೆ ಮಾಡುವ ನಿಯಮಗಳಿಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. 

ಕೇಂದ್ರ ಹಸಿರು ತಜ್ಞರ ಸಮಿತಿ ಪಂಜಾಬ್ ನಲ್ಲಿ ಶಾಪುರ್ಕಂಡಿ ಅಣೆಕಟ್ಟು ನಿರ್ಮಾಣ ಯೋಜನೆಗೆ ಸಂಬಂಧಿಸಿದಂತೆ ಪರಿಹಾರಾರ್ಥವಾಗಿ ಅರಣ್ಯ ಬೆಳೆಸುವ ನಿಯಮಗಳನ್ನು ಪಾಲನೆ ಮಾಡದೇ ಇರುವುದಕ್ಕೆ ನಿರ್ಧರಿಸಿದೆ. 

ಅಧಿಕಾರಿಗಳ ಪ್ರಕಾರವಾಗಿ ಈ ನಡೆಯಿಂದ ಪಾಕಿಸ್ತಾನಕ್ಕೆ ಹರಿಯುವ ರಾವಿ ನದಿ ನೀರು ತೀವ್ರವಾಗಿ ಕಡಿಮೆಯಾಗಲಿದ್ದು, ಜಮ್ಮು-ಕಾಶ್ಮೀರ ಪಂಜಾಬ್ ಗಳಲ್ಲಿ ನೀರಾವರಿ ಉದ್ದೇಶಗಳಿಗೆ ಮಹತ್ವವಿರುವ ಜಲ ಸಂಪನ್ಮೂಲಗಳಿಗೆ ಬಳಕೆ ಮಾಡಿಕೊಳ್ಳಬಹುದಾಗಿದೆ ಎಂದು ಹೇಳಿದ್ದಾರೆ. 

ಇದು ರಾಷ್ಟ್ರೀಯ ಯೋಜನೆಯಾಗಿದ್ದು, ಅದರ ಮಹತ್ವವನ್ನು ಪರಿಗಣಿಸಿ ಅರಣ್ಯ ಸಲಹಾ ಸಮಿತಿ 5 ಹೆಕ್ಟೇರ್ ಗಳಿಗಿಂತ ಕಡಿಮೆ ವ್ಯಾಪ್ತಿಯಲ್ಲಿ ಪರಿಹಾರಾರ್ಥವಾಗಿ ಅರಣ್ಯ ಬೆಳೆಸುವ ಪ್ರದೇಶಗಳನ್ನು ಗುರುತಿಸುವ ವಿಷಯದಲ್ಲಿ ರಾಜ್ಯಗಳ ವಾದವನ್ನು ಒಪ್ಪಿಕೊಳ್ಳಲು ತೀರ್ಮಾನಿಸಿದೆ ಎಂದು ಹೇಳಿದೆ. 

5 ಹೆಕ್ಟೇರ್ ಗಳಿಗಿಂತ ಕಡಿಮೆ ಇರುವ ಅರಣ್ಯೇತರ ಪ್ರದೇಶವನ್ನು, ಪರಿಹಾರಾರ್ಥ ಅರಣ್ಯ ಪ್ರದೇಶವನ್ನಾಗಿ ಬೆಳೆಸಲು ನಿಯಮಗಳನ್ನು ಸಡಿಲಗೊಳಿಸಲಾಗುತ್ತದೆ ಎಂದು ಸಮಿತಿ ತಿಳಿಸಿದೆ. 

1960 ರಲ್ಲಿ ನಡೆದ ಇಂಡಸ್ ವಾಟರ್ ಟ್ರೀಟಿಯ ಪ್ರಕಾರ  ಪಶ್ಚಿಮದ ನದಿಗಳಾದ ಇಂಡಸ್, ಝೀಲಮ್, ಚೆನಾಬ್ ನದಿ ನೀರನ್ನು ಪಾಕಿಸ್ತಾನಕ್ಕೆ ಹರಿಸಲಾಗುತ್ತಿದೆ. ಪೂರ್ವದಲ್ಲಿರುವ ರಾವಿ, ಬಿಯಾಸ್, ಸಟ್ಲಜ್ ನದಿ ನೀರನ್ನು ಭಾರತ ಬಳಕೆ ಮಾಡಿಕೊಳ್ಳುತ್ತಿದೆ. ಆದರೆ ತನ್ನ ಪಾಲಿನ ನೀರನ್ನು ಸಂಪೂರ್ಣವಾಗಿ ಬಳಕೆ ಮಾಡಿಕೊಳ್ಳುವುದಕ್ಕೆ ಭಾರತಕ್ಕೆ ಆಗುತ್ತಿಲ್ಲ. ಭಾರತದ ಪಾಲಿನ ನೀರೂ ಸಹ ಪಾಕಿಸ್ತಾನಕ್ಕೆ ಹರಿಯುತ್ತಿದ್ದು, ಇದನ್ನು ನಿಲ್ಲಿಸಬೇಕೆಂಬ ಒತ್ತಾಯ ದೀರ್ಘಾವಧಿಯಿಂದ ಇತ್ತು.

2,700 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಅಣೆಕಟ್ಟು ಯೋಜನೆಯಿಂದ 206 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆಯಾಗಲಿದ್ದು, ಪಂಜಾಬ್ ನಲ್ಲಿ 5,000 ಹೆಕ್ಟೆರ್ ನೀರಾವರಿಗೆ ಉಪಯೋಗವಾಗಲಿದೆ. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com