ರಾಹುಲ್ ಗಾಂಧಿ ಪಾಕಿಸ್ತಾನದಲ್ಲಿ ಚುನಾವಣೆಗೆ ಸ್ಪರ್ಧಿಸಲು ಪ್ರಯತ್ನಿಸುತ್ತಿದ್ದಾರೆಯೇ? ಸಂಬೀತ್ ಪಾತ್ರ
ನವದೆಹಲಿ: ಕೋವಿಡ್-19 ನಿರ್ವಹಣೆ ವಿಚಾರದಲ್ಲಿ ಕೇಂದ್ರ ಸರ್ಕಾರವನ್ನು ಕಾಂಗ್ರೆಸ್ ಮುಖಂಡ ಶಶಿ ತರೂರ್, ಲಾಹೋರ್ ಸಾಹಿತ್ಯ ಉತ್ಸವದಲ್ಲಿ ಟೀಕಿಸಿದ ಬೆನ್ನಲ್ಲೇ, ರಾಹುಲ್ ಗಾಂಧಿಯನ್ನು ರಾಹುಲ್ ಲಾಹೋರಿ ಎಂದು ಬಿಜೆಪಿ ಮರು ನಾಮಕರಣ ಮಾಡಿದೆ.
ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ,ವಿಶೇಷವಾಗಿ ಪಾಕಿಸ್ತಾನದಲ್ಲಿ ಕಾಂಗ್ರೆಸ್ ನಾಯಕರು, ದೇಶವನ್ನು ಕೀಳಾಗಿ ಕಾಣುವ ರೀತಿ, ರಾಹುಲ್ ಗಾಂಧಿ ಪಾಕಿಸ್ತಾನದಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ ಎಂಬುದನ್ನು ತೋರುತ್ತದೆ ಎಂದು
ಬಿಜೆಪಿ ವಕ್ತಾರ ಸಂಬಿತ್ ಪತ್ರಾ ಹೇಳಿದ್ದಾರೆ..
ರಾಹುಲ್ ಗಾಂಧಿ ಪಾಕಿಸ್ತಾನದಿಂದ ಚುನಾವಣೆಗೆ ಸ್ಪರ್ಧಿಸಲು ಪ್ರಯತ್ನಿಸುತ್ತಿದ್ದೀರಾ? ದಯವಿಟ್ಟು ಪ್ರತಿಕ್ರಿಯಿಸಿ ಎಂದು ಸಂಬೀತ್ ಪಾತ್ರ ಕೇಳಿದ್ದಾರೆ.ಬಿಜೆಪಿಯವರು ರಾಹುಲ್ ಗಾಂಧಿಯನ್ನು ರಾಹುಲ್ ಲಾಹೋರಿ ಎಂದು ಕರೆಯಲು ಆರಂಭಿಸುತ್ತೇವೆ. ರಾಹುಲ್ ಗಾಂಧಿಯನ್ನು ನಾನು ಕೂಡಾ ರಾಹುಲ್ ಲಾಹೋರಿ ಎಂದು ಸಂಬೋಧಿಸುತ್ತೇನೆ.ತರೂರ್ ಈಗಾಗಲೇ ಪಾಕಿಸ್ತಾನದಲ್ಲಿ ಚೊಚ್ಚಲ ರ್ಯಾಲಿಯನ್ನು ಮಾಡಿದ್ದಾರೆ ಎಂದು ಬಿಜೆಪಿ ಮುಖಂಡ ಹೇಳಿದರು.
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಶೀಘ್ರದಲ್ಲಿಯೇ ಪಾಕಿಸ್ತಾನ ರಾಷ್ಟ್ರೀಯ ಕಾಂಗ್ರೆಸ್ ಆಗಲಿದೆ ಎಂದು ಹೇಳಿದ ಪಾತ್ರ, ಜಿನ್ನಾ ಬೆಂಬಲಿಗರಿಗೆ ಅವರು ಟಿಕೆಟ್ ನೀಡುತ್ತಾರೆ. ಅದರ ಅಗತ್ಯವೇಕೆ? ಲಾಹೋರ್ ನಲ್ಲಿ ಭಾರತದ ಬಗ್ಗೆ ಏಕೆ ಅಳುತ್ತೀರಾ, ರಾಹುಲ್ ಗಾಂಧಿ ಭಾರತವನ್ನು ದ್ವೇಷಿಸುವುದರಲ್ಲಿ ಯಾವುದೇ ಅನುಮಾನವಿಲ್ಲಾ, ಸಂಪೂರ್ಣ ಜವಾಬ್ದಾರಿಯೊಂದಿಗೆ ಇದನ್ನು ಹೇಳುತ್ತಿರುವುದಾಗಿ ಮಾಧ್ಯಮಗಳಿಗೆ ಸಂಬೀತ್ ಪಾತ್ರ ತಿಳಿಸಿದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ