ಕೊಚ್ಚಿ: ಭಾರತೀಯ ನೌಕಪಡೆಯ ಅತ್ಯಾಧುನಿಕ ಡಾರ್ನಿಯರ್ ವಿಮಾನದಲ್ಲಿ ಹಾರಾಟ ನಡೆಸಲು ಮೊದಲ ಬ್ಯಾಚಿನ ಮಹಿಳಾ ಪೈಲಟ್ ಗಳು ಸಜ್ಜಾಗಿದ್ದಾರೆ.
ಡಾರ್ನಿಯರ್ ವಿಮಾನದಲ್ಲಿನ ಎಲ್ಲಾ ಕಾರ್ಯಾಚರಣೆಗಳಿಗೆ ಈ ಮಹಿಳಾ ಪೈಲಟ್ ಗಳನ್ನು ಪಡೆಯಲು ಭಾರತೀಯ ನೌಕಪಡೆ ತಯಾರಿ ನಡೆಸಿದೆ.
ನವೆದೆಹಲಿಯ ಮಾಳವಿಯಾ ನಗರದ ಲೆಫಿನೆಂಟ್ ದಿವ್ಯಾ ಶರ್ಮಾ, ಉತ್ತರ ಪ್ರದೇಶ ತಿಹಾರಿನ ಲೆಫ್ಟಿನೆಂಟ್ ಶುಭಂಗಿ ಸ್ವರೂಪ್ ಮತ್ತು ಬಿಹಾರದ ಮುಝಾಪರ್ ಪುರದ ಲೆಫ್ಟಿನೆಂಟ್ ಶಿವಾಂಗಿ ಡಾರ್ನಿಯರ್ ಹಾರಾಟ ತರಬೇತಿ ಕೋರ್ಸನ್ನು ಪೂರ್ಣಗೊಳಿಸಿದ್ದಾರೆ.
ಗುರುವಾರ ಕೊಚ್ಚಿಯಲ್ಲಿನ ನೌಕಾ ವಾಯು ನಿಲ್ದಾಣ ಐಎನ್ ಎಸ್ ಗರುಡಾದಲ್ಲಿ ನಡೆದ ನಿರ್ಗಮಿತ ಪಥಸಂಚಲನ ಕಾರ್ಯಕ್ರಮದಲ್ಲಿ ಸಂಪೂರ್ಣ ಕಾರ್ಯಾಚರಣೆಯ ಕಡಲ ವಿಚಕ್ಷಣ ಪೈಲಟ್‌ಗಳು ಎಂಬ ಪದವಿ ಪಡೆದರು. ಡಾರ್ನಿಯರ್ ವಿಮಾನದಲ್ಲಿ ಹಾರಾಟ ಪಡೆಯಲು ಅರ್ಹತೆ ಪಡೆದ ಆರು ಮಂದಿಯಲ್ಲಿ ಇವರು ಸೇರಿದ್ದಾರೆ.
ದಕ್ಷಿಣ ವಲಯ ನೌಕ ಕಮಾಂಡ್ ಚೀಫ್ ಸ್ಟಾಪ್ ಆಫೀಸರ್ ರೀರ್ ಅಡ್ಮಿರಲ್ ಅಂಟೋಣಿ ಜಾರ್ಜ್, ಪೈಲಟ್ ಗಳಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಹೊಸ ಬ್ಯಾಚ್ ಅಧಿಕಾರಿಗಳು ಆರಂಭದಲ್ಲಿ ಭಾರತೀಯ ವಾಯುಪಡೆ ಮತ್ತು ನೌಕಪಡೆಯೊಂದಿಗೆ ಮೂಲ ಹಾರಾಟ ತರಬೇತಿಯನ್ನು ಪಡೆದುಕೊಂಡಿದ್ದಾರೆ.
ಈ ಮೂವರು ಮಹಿಳಾ ಪೈಲಟ್ ಗಳ ಪೈಕಿಯಲ್ಲಿ ಲೆಫ್ಟಿನೆಂಟ್ ಶಿವಾಂಗಿ ನೌಕಪಡೆ ಪೈಲಟ್ ಆಗಿ ಡಿಸೆಂಬರ್ 2, 2019ರಂದು ಮೊದಲ ಬಾರಿಗೆ ಅರ್ಹತೆ ಪಡೆದುಕೊಂಡಿದ್ದರು.
Advertisement