ಎಲ್‌ಎಸಿಯಲ್ಲಿ ಬಂಧಿಸಲ್ಪಟ್ಟ ಚೀನೀ ಸೈನಿಕನ ಬಳಿ ಸ್ಲೀಪಿಂಗ್ ಬ್ಯಾಗ್, ಸ್ಟೋರೇಜ್ ಡಿವೈಸ್, ಮೊಬೈಲ್ ಪತ್ತೆ

ಡೆಮ್‌ಚೋಕ್ ಪ್ರದೇಶದ ಬಳಿ ಭಾರತೀಯ ಸೈನ್ಯದಿಂದ ಬಂಧಿಸಲ್ಪಟ್ಟ ಚೀನಾದ ಸೈನಿಕನು ಸ್ಲೀಪಿಂಗ್ ಬ್ಯಾಗ್, ಸ್ಟೋರೇಜ್ ಡಿವೈಸ್ ಮತ್ತು ಮೊಬೈಲ್ ಫೋನ್ ಅನ್ನು ಹೊಂದಿರುವುದು ಕಂಡುಬಂದಿದೆ.
ಎಲ್‌ಎಸಿಯಲ್ಲಿ ಬಂಧಿಸಲ್ಪಟ್ಟ ಚೀನೀ ಸೈನಿಕನ ಬಳಿ ಸ್ಲೀಪಿಂಗ್ ಬ್ಯಾಗ್, ಸ್ಟೋರೇಜ್ ಡಿವೈಸ್, ಮೊಬೈಲ್ ಪತ್ತೆ

ನವದೆಹಲಿ: ಡೆಮ್‌ಚೋಕ್ ಪ್ರದೇಶದ ಬಳಿ ಭಾರತೀಯ ಸೈನ್ಯದಿಂದ ಬಂಧಿಸಲ್ಪಟ್ಟ ಚೀನಾದ ಸೈನಿಕನು ಸ್ಲೀಪಿಂಗ್ ಬ್ಯಾಗ್, ಸ್ಟೋರೇಜ್ ಡಿವೈಸ್ ಮತ್ತು ಮೊಬೈಲ್ ಫೋನ್ ಅನ್ನು ಹೊಂದಿರುವುದು ಕಂಡುಬಂದಿದೆ. ಕಾರ್ಪೋರಲ್ ವಾಂಗ್ ಯಾ ಲಾಂಗ್ ಎಂಬ ಸೈನಿಕನು ಪೂರ್ವ ಲಡಾಖ್‌ನ ಡೆಮ್‌ಚೋಕ್ ಪ್ರದೇಶದಲ್ಲಿನ ಭಾರತೀಯ ಭೂಪ್ರದೇಶಕ್ಕೆ ನೈಜ ನಿಯಂತ್ರಣ ರೇಖೆಯನ್ನು ದಾಟಿ ಬಂದು ಸೋಮವಾರ ಸೇನೆಯಿಂದ ಬಂಧಿಸಲ್ಪಟ್ಟಿದ್ದ.

"ಚೀನಾದ ಸೈನಿಕನು ನಮ್ಮ ಭದ್ರತಾ ಪಡೆಗಳಿಂದ ಬಂಧಿಸಲ್ಪಟ್ಟಾಗ ಅವನು ಸ್ಲೀಪಿಂಗ್ ಬ್ಯಾಗ್, ಖಾಲಿ ಡೇಟಾ ಸ್ಟೋರೇಜ್ ಡಿವೈಸ್, ಮೊಬೈಲ್ ಫೋನ್ ಜೊತೆಗೆ ತನ್ನ ಮಿಲಿಟರಿ ಗುರುತಿನ ಚೀಟಿಯನ್ನು ಹೊಂದಿದ್ದ," ಎಂದು ಸರ್ಕಾರಿ ಮೂಲಗಳು ಎಎನ್‌ಐಗೆ ತಿಳಿಸಿವೆ.

ಚುಶುಲ್ ಮೀಟಿಂಗ್ ಹಟ್ ನಲ್ಲಿನಡೆದ ಸುದೀರ್ಘ ಗಡಿ ಸಿಬ್ಬಂದಿ ಸಭೆಯಲ್ಲಿ ಸೈನಿಕನನ್ನು ಚೀನಾ ಸೇನೆಗೆ  ಹಸ್ತಾಂತರಿಸುವ ಮೊದಲು ಸ್ಥಾಪಿತ ನಿಯಮಾವಳಿಗಳ ಪ್ರಕಾರ ಸಂಬಂಧಪಟ್ಟ ಮಿಲಿಟರಿ ಅಧಿಕಾರಿಗಳು ಕೂಲಂಕಷವಾಗಿ ಪರಿಶೀಲಿಸಿದರು ಮತ್ತು ಪ್ರಶ್ನಿಸಿದರು ಎಂದು ಅವರು ಹೇಳಿದರು. ಈ ಘಟನೆಯ ಬಗ್ಗೆ ಹೇಳಿಕೆಯಲ್ಲಿ, ಸೇನೆಯ ಸೈನಿಕನಿಗೆ "ಅತ್ಯಂತ ಎತ್ತರದ ಮತ್ತು ಕಠಿಣ ಹವಾಮಾನ ಪರಿಸ್ಥಿತಿಗಳಿಂದ ಅವನನ್ನು ರಕ್ಷಿಸಲು ಆಮ್ಲಜನಕ, ಆಹಾರ ಮತ್ತು ಬೆಚ್ಚಗಿನ ಬಟ್ಟೆಗಳು ಸೇರಿದಂತೆ ವೈದ್ಯಕೀಯ ನೆರವು ನೀಡಲಾಗಿದೆ" ಎಂದಿದೆ. 

ನಾಪತ್ತೆಯಾದ ಸೈನಿಕ ಎಲ್ಲಿದ್ದಾನೆ ಎಂಬ ಬಗ್ಗೆ ಪಿಎಲ್‌ಎಯಿಂದ ಮನವಿ ಬಂದಿದ್ದು ಔಪಚಾರಿಕ ವಿಚಾರಣೆ ಪೂರ್ಣಗೊಂಡ ನಂತರ ಅವನನ್ನು "ಸ್ಥಾಪಿತ ಪ್ರೋಟೋಕಾಲ್ ಗಳ ಪ್ರಕಾರ" ಹಿಂದಕ್ಕೆ ಕಳಿಸಲಾಗಿದೆ.

ಏಪ್ರಿಲ್-ಮೇ ತಿಂಗಳಲ್ಲಿ ಚೀನಾದ ಸೈನ್ಯವು ಅನೇಕ ಪ್ರದೇಶಗಳನ್ನು ಅತಿಕ್ರಮಿಸಿದ ನಂತರ, ಭಾರತೀಯ ಸೇನೆಯು 60,000 ಸೈನಿಕರನ್ನು ನಿಯೋಜಿಸುವ ಮೂಲಕ ಹೆಚ್ಚು ಭರ್ದತೆಯನ್ನು ಕಾಯ್ದುಕೊಂಡಿದೆ. ಲಡಾಖ್‌ನ ಪಾಂಗೊಂಗ್ ಸರೋವರದ ದಕ್ಷಿಣದ ದಂಡೆಯ ಬಳಿಯ ಎಲ್‌ಎಸಿಯಲ್ಲಿ  ಅತಿಯಾದ ಎತ್ತರದ ಸ್ಥಳವನ್ನು ಹಿಡಿಯಲು ಸೇನೆಯು ಆಗಸ್ಟ್ 29-30ರಂದು ಬಲವಾದ ಕ್ರಮಗಳನ್ನು ಕೈಗೊಂಡಿತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com