![ಚಂದ್ರ ಶೇಖರ್ ಆಜಾದ್](http://media.assettype.com/kannadaprabha%2Fimport%2F2020%2F10%2F26%2Foriginal%2Fazad-new.jpg?w=480&auto=format%2Ccompress&fit=max)
ಬುಲಂದ್ ಶಹರ್: ಉತ್ತರ ಪ್ರದೇಶದ ಬುಲಂದ್ ಶಹರ್ ನಲ್ಲಿ ನನ್ನ ಬೆಂಗಾವಲು ಪಡೆಯ ಮೇಲೆ ಗುಂಡಿನ ದಾಳಿ ನಡೆಸಲಾಗಿದೆ ಎಂದು ಆಜಾದ್ ಸಮಾಜ್ ಪಕ್ಷದ ಮುಖಂಡ ಚಂದ್ರಶೇಖರ್ ಆರೋಪಿಸಿದ್ದಾರೆ.
ಆದರೆ ಈ ಸಂಬಂಧ ಪೊಲೀಸರು ಇನ್ನೂ ಕೇಸ್ ದಾಖಲಿಸಿಲ್ಲ, ಪ್ರಕರಣ ಸ್ಪಷ್ಟವಾಗದ ಕಾರಣ ಇನ್ನೂ ಕೇಸ್ ದಾಖಲಾಗಿಲ್ಲ.
ವಿಧಾನಸಭೆ ಉಪ ಚುನಾವಣೆಗಾಗಿ ನಡೆಸುತ್ತಿದ್ದ ರ್ಯಾಲಿಯಲ್ಲಿ ಈ ಘಟನೆ ನಡೆದಿದೆ ಎಂದು ಆಜಾದ್ ತಮ್ಮ ಟ್ವಿಟ್ಟರ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ತಮ್ಮ ಪಕ್ಷದ ಅಭ್ಯರ್ಥಿಯನ್ನು ಕಣಕ್ಕಿಳಿಸಿರುವುದರಿಂದ ವಿರೋಧ ಪಕ್ಷಗಳಿಗೆ ನಡುಕ ಉಂಟಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.
ಹೇಡಿಗಳ ರೀತಿ ನನ್ನ ಬೆಂಗಾವಲು ಪಡೆ ಮೇಲೆ ಗುಂಡು ಹಾರಿಸಿದ್ದಾರೆ, ಆತಂಕದಿಂದಾಗಿ ಇಂದಿನ ರ್ಯಾಲಿಯನ್ನು ಅರ್ಧಕ್ಕೆ ನಿಲ್ಲಿಸಲಾಯಿತು ಎಂದು ಟ್ವೀಟ್ ನಲ್ಲಿ ಆಜಾದ್ ಮಾಹಿತಿ ನೀಡಿದ್ದಾರೆ. ಶಾಂತಿಯುತ ವಾತಾವರಣವನ್ನು ಹಾಳು ಮಾಡಲು ವಿರೋಧಿಗಳ ಕುತಂತ್ರ ಇದು ಎಂದು ಟ್ವೀಟ್ ಮಾಡಿದ್ದಾರೆ.
ಘಟನೆ ಬಗ್ಗೆ ನಮಗೆ ಇನ್ನೂ ಸ್ಪಷ್ಟನೆ ಸಿಕ್ಕಿಲ್ಲ, ನ್ಯೂಸ್ ಚಾನೆಲ್ ಒಂದು ಗುಂಡಿನ ದಾಳಿ ಆರೋಪ ಮಾಡಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಸಂತೋಷ್ ಕುಮಾರ್ ಸಿಂಗ್ ತಿಳಿಸಿದ್ದಾರೆ.
Advertisement