ಯೋಗೇಶ್ ತ್ಯಾಗಿ
ಯೋಗೇಶ್ ತ್ಯಾಗಿ

ದೆಹಲಿ ವಿಶ್ವವಿದ್ಯಾಲಯದ ಉಪಕುಲಪತಿ ಯೋಗೇಶ್ ತ್ಯಾಗಿ ಅಮಾನತು

ಆಡಳಿತಾತ್ಮಕ ವಿಫಲತೆಯ  ಆರೋಪದ ನಡುವೆ ದೆಹಲಿ ವಿಶ್ವವಿದ್ಯಾಲಯದ ಉಪಕುಲಪತಿ ಯೋಗೇಶ್ ತ್ಯಾಗಿ ಅವರನ್ನು ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರ ಆದೇಶದ ಮೇರೆಗೆ ಅಮಾನತುಗೊಳಿಸಲಾಗಿದೆ
Published on

ನವದೆಹಲಿ: ಆಡಳಿತಾತ್ಮಕ ವಿಫಲತೆಯ  ಆರೋಪದ ನಡುವೆ ದೆಹಲಿ ವಿಶ್ವವಿದ್ಯಾಲಯದ ಉಪಕುಲಪತಿ ಯೋಗೇಶ್ ತ್ಯಾಗಿ ಅವರನ್ನು ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರ ಆದೇಶದ ಮೇರೆಗೆ ಅಮಾನತುಗೊಳಿಸಲಾಗಿದೆ

"ದೆಹಲಿ ವಿಶ್ವವಿದ್ಯಾಲಯದ ಉಪಕುಲಪತಿ ಯೋಗೇಶ್ ತ್ಯಾಗಿ ಅವರು ರಾಷ್ಟ್ರಪತಿಆದೇಶದ ಮೇರೆಗೆ ಅಮಾನತುಗೊಂಡಿದ್ದಾರೆ. ಈಗ ಅಮಾನತುಗೊಂಡಿರುವ ಡಿಯು ವಿಸಿ ಯೋಗೇಶ್ ತ್ಯಾಗಿ ಅವರು ವೈದ್ಯಕೀಯ ನೆಲೆಯಲ್ಲಿ ಅನುಪಸ್ಥಿತಿಯ ಅವಧಿಯಲ್ಲಿ ಹೊರಡಿಸಿದ ಆದೇಶಗಳನ್ನು ಶೂನ್ಯ ಮತ್ತು ಅನೂರ್ಜಿತವೆಂದು ಪರಿಗಣಿಸಲಾಗುತ್ತದೆ" ಎಂದು ಶಿಕ್ಷಣ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.

ಆಡಳಿತಾತ್ಮಕ ವೈಫಲ್ಯದ ಕಾರಣ ದೆಹಲಿ ವಿವಿಉಪಕುಲಪತಿ ಯೋಗೇಶ್ ತ್ಯಾಗಿ ವಿರುದ್ಧ ತನಿಖೆ ನಡೆಸಲು ಶಿಕ್ಷಣ ಸಚಿವಾಲಯದ ಶಿಫಾರಸುಗಳನ್ನು ದೆಹಲಿ ವಿಶ್ವವಿದ್ಯಾಲಯ ವಿಸಿಟರ್  ರಾಷ್ಟ್ರಪತಿ ಮಂಗಳವಾರ ಅಂಗೀಕರಿಸಿದ್ದರು.  "ಉಪಕುಲಪತಿಗಳು (ಶಾಸನಬದ್ಧ) ನಿಬಂಧನೆಗಳಿಗೆ ಅನುಗುಣವಾಗಿ ವಿಶ್ವವಿದ್ಯಾನಿಲಯವನ್ನು ನಿರ್ವಹಿಸುತ್ತಿಲ್ಲ ... ಇದು ದೆಹಲಿ ವಿಶ್ವವಿದ್ಯಾಲಯದ ತಪ್ಪು ಆಡಳಿತ ಮತ್ತು ಅಸಮರ್ಪಕ ಕಾರ್ಯಕ್ಕೆ ಕಾರಣವಾಗಿದೆ. ಇದು ವಿಶ್ವವಿದ್ಯಾಲಯದ ಸೂಕ್ತ ಶೈಕ್ಷಣಿಕ ಮತ್ತು ಆಡಳಿತಾತ್ಮಕ ವಾತಾವರಣಕ್ಕೆ ಅನುಕೂಲಕರವಲ್ಲ ಭಾರತದ ರಾಷ್ಟ್ರಪತಿಗಳು ವಿಶ್ವವಿದ್ಯಾನಿಲಯದ ವಿಸಿಟರ್ ದಾಖಲೆಯಲ್ಲಿ ಲಭ್ಯವಿರುವ ಸಂಗತಿಗಳು ಮತ್ತು ಅಂಶಗಳನ್ನು ಪರಿಗಣಿಸಿ, ಕರ್ತವ್ಯಗಳ ಅಪಮೌಲ್ಯ ಬದ್ಧತೆ ಯ ಕೊರತೆಯ ಆರೋಪಗಳ ಬಗ್ಗೆ ತನಿಖೆ ನಡೆಸಲು ಆದೇಶಿಸಿದ್ದಾರೆ. ರಾಷ್ಟ್ರಪತಿಗಳು  ನ್ಯಾಯಯುತ ವಿಚಾರಣೆಯನ್ನು ಖಚಿತಪಡಿಸಿಕೊಳ್ಳಲು ಯೋಗೇಶ್ ತ್ಯಾಗಿ ಅವರನ್ನು ಸಾಕ್ಷಿಗಳ ಮೇಲೆ ಪ್ರಭಾವ ಬೀರಬಹುದು / ಬಲವಂತಪಡಿಸಬಹುದು ಮತ್ತು ವಿಶ್ವವಿದ್ಯಾನಿಲಯದ ವಸ್ತು ದಾಖಲೆಗಳನ್ನು ಹಾಳುಮಾಡಬಹುದು ಎಂಬ ಕಾರಣಕ್ಕೆ ಮುಂದಿನ ಆದೇಶದವರೆಗೆ ತಕ್ಷಣದ ಪರಿಣಾಮ ಬೀರುವಂತೆ ಅಮಾನತುಗೊಳಿಸಿದ್ದಾರೆ." ಸಚಿವಾಲಯದ ಅಧಿಕಾರಿಯೊಬ್ಬರು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com