ಕೇಂದ್ರದ ಹೊಸ ಕೃಷಿ ಕಾಯ್ದೆ ತಡೆಗೆ ಮಸೂದೆ ಮಂಡಿಸಿದ ರಾಜಸ್ಥಾನ ಸರ್ಕಾರ

ಕೇಂದ್ರ ಸರ್ಕಾರ ಹೊಸದಾಗಿ ಜಾರಿಗೆ ತಂದಿರುವ ವಿವಾದಿತ ಕೃಷಿ ಕಾಯಿದೆಯನ್ನು ತಡೆಯಲು ರಾಜಸ್ಥಾನ ಸರ್ಕಾರ ಶನಿವಾರ ಮೂರು ಮಸೂದೆಗಳನ್ನು ಮಂಡಿಸಿದೆ.
ಸಿಎಂ ಅಶೋಕ್ ಗೆಹ್ಲೋಟ್
ಸಿಎಂ ಅಶೋಕ್ ಗೆಹ್ಲೋಟ್
Updated on

ಜೈಪುರ: ಕೇಂದ್ರ ಸರ್ಕಾರ ಹೊಸದಾಗಿ ಜಾರಿಗೆ ತಂದಿರುವ ವಿವಾದಿತ ಕೃಷಿ ಕಾಯಿದೆಯನ್ನು ತಡೆಯಲು ರಾಜಸ್ಥಾನ ಸರ್ಕಾರ ಶನಿವಾರ ಮೂರು ಮಸೂದೆಗಳನ್ನು ಮಂಡಿಸಿದೆ.

ರಾಜಸ್ಥಾನ ಸಂಸದೀಯ ವ್ಯವಹಾರಗಳ ಸಚಿವ ಶಾಂತಿ ಧಾರಿವಾಲ್ ಅವರು, ಅಗತ್ಯ ಸರಕುಗಳ(ವಿಶೇಷ ನಿಬಂಧನೆಗಳು ಮತ್ತು ರಾಜಸ್ಥಾನ ತಿದ್ದುಪಡಿ) ಮಸೂದೆ 2020, ರೈತರ(ಸಬಲೀಕರಣ ಮತ್ತು ಸಂರಕ್ಷಣೆ) ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಒಪ್ಪಂದ (ರಾಜಸ್ಥಾನ ತಿದ್ದುಪಡಿ) ಮಸೂದೆ 2020 ಮತ್ತು ರೈತರ ಉತ್ಪಾದನೆ ವ್ಯಾಪಾರ ಹಾಗೂ ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಮಸೂದೆ 2020 ಅನ್ನು ಇಂದು ವಿಧಾನಸಭೆಯಲ್ಲಿ ಮಂಡಿಸಿದರು.

ವಿಧಾನಸಭೆ ಅಧಿವೇಶನದ ಮೊದಲ ದಿನದಂದು ಧಾರಿವಾಲ್ ಅವರು ನೀತಿ ಸಂಹಿತೆ(ರಾಜಸ್ಥಾನ ತಿದ್ದುಪಡಿ) ಮಸೂದೆ 2020 ಅನ್ನು ಸಹ ಮಂಡಿಸಿದರು.

ಇದೇ ವೇಳೆ ಮಾಜಿ ಅಧ್ಯಕ್ಷ ಪ್ರಣಬ್ ಮುಖರ್ಜಿ ಮತ್ತು ಇತ್ತೀಚೆಗೆ ನಿಧನರಾದ ಇತರ ನಾಯಕರ ಸಂತಾಪ ಸೂಚಿಸಿದ ನಂತರ ವಿಧಾನಸಭೆ ಕಲಾಪವನ್ನು ಸ್ಪೀಕರ್ ಮುಂದೂಡಿದರು.

ಇತ್ತೀಚೆಗಷ್ಟೇ ಇದೇ ಅಮರಿಂದರ್ ಸಿಂಗ್ ನೇತೃತ್ವದ ಪಂಜಾಬ್ ಸರ್ಕಾರ ಸಹ ಕೇಂದ್ರದ ಕೃಷಿ ಕಾಯ್ದೆ ತಡೆಗೆ  ಅಧಿವೇಶನದಲ್ಲಿ ನಾಲ್ಕು ಮಸೂದೆಗಳನ್ನು ಮತ್ತು ನಿರ್ಣಯಗಳನ್ನು ಅಂಗೀಕರಿಸಿತ್ತು. ಈ ಬೆಳವಣಿಗೆಯ ನಡುವೆಯೇ ರಾಜಸ್ಥಾನ ಸರ್ಕಾರ ಕೂಡ ಕೃಷಿ ಕಾಯ್ದೆ ವಿರುದ್ಧ ಮಸೂದೆ ಮಂಡಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com