ಕಾಶ್ಮೀರ: ಉಗ್ರರ ಎರಡು ಅಡಗುತಾಣ ಪತ್ತೆ ಮಾಡಿದ ಸೇನೆ, 5 ಎಕೆ ರೈಫಲ್‌, 21ಗ್ರೆನೇಡ್‌ ವಶಕ್ಕೆ

ಭಾರತೀಯ ಸೇನೆ ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾದ ರಾಂಪುರ್ ಸೆಕ್ಟರ್‌ನಲ್ಲಿರುವ ಗಡಿ ನಿಯಂತ್ರಣ ರೇಖೆಯ(ಎಲ್‌ಒಸಿ) ಬಳಿ ಇದ್ದ ಉಗ್ರರ ಎರಡು ಅಡಗುತಾಣಗಳನ್ನು ಪತ್ತೆ ಮಾಡಿ, ಸ್ಥಳದಲ್ಲಿದ್ದ ಎಕೆ ರೈಫಲ್ ಸೇರಿದಂತೆ ದೊಡ್ಡ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಮದ್ದು ಗುಂಡುಗಳನ್ನು ವಶಪಡಿಸಿಕೊಂಡಿವೆ 
ಭಾರತೀಯ ಸೇನೆ
ಭಾರತೀಯ ಸೇನೆ
Updated on: 

ಬಾರಾಮುಲ್ಲಾ: ಭಾರತೀಯ ಸೇನೆ ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾದ ರಾಂಪುರ್ ಸೆಕ್ಟರ್‌ನಲ್ಲಿರುವ ಗಡಿ ನಿಯಂತ್ರಣ ರೇಖೆಯ(ಎಲ್‌ಒಸಿ) ಬಳಿ ಇದ್ದ ಉಗ್ರರ ಎರಡು ಅಡಗುತಾಣಗಳನ್ನು ಪತ್ತೆ ಮಾಡಿ, ಸ್ಥಳದಲ್ಲಿದ್ದ ಎಕೆ ರೈಫಲ್ ಸೇರಿದಂತೆ ದೊಡ್ಡ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಮದ್ದು ಗುಂಡುಗಳನ್ನು ವಶಪಡಿಸಿಕೊಂಡಿವೆ 

ಉಗ್ರರು ಅಡಗಿರುವ ನಿರ್ದಿಷ್ಟ ಮಾಹಿತಿಯನ್ನಾಧರಿಸಿ ಸೇನೆ ಎಲ್ ಒಸಿಯ ರಾಂಪುರ್ ಸೆಕ್ಟರ್ ಬಳ ಬಳಿ ತೀವ್ರ ಶೋಧ ಕಾರ್ಯಾಚರಣೆ  ಆರಂಭಿಸಿತ್ತು. ಈ ವೇಳೆ ಎರಡು ಅಡಗುತಾಣಗಳು ಪತ್ತೆಯಾಗಿದ್ದು, ಐದು ಎಕೆ ಸರಣಿ ರೈಫಲ್‌ಗಳು, 6 ಪಿಸ್ತೂಲ್‌ಗಳು ಮತ್ತು 21 ಗ್ರೆನೇಡ್‌ಗಳು ಸೇರಿದಂತೆ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.

ರಾಂಪುರ್ ಸೆಕ್ಟರ್‌ನಲ್ಲಿನ ನಿಯಂತ್ರಣ ರೇಖೆಯಲ್ಲಿ ಸೋಮವಾರ ಅನುಮಾನಾಸ್ಪದ ವ್ಯಕ್ತಿಗಳ ಚಲನವಲನ ಪತ್ತೆಯಾದ ನಂತರ ಶೋಧ ಕಾರ್ಯಾಚರಣೆ ಆರಂಭಿಸಲಾಗಿದೆ.

ಭಾರತೀಯ ಭೂಪ್ರದೇಶವನ್ನು ದಾಟಿದ ಶಂಕಿತರ ಚಲನೆಯನ್ನು ನಿರಂತರ ಕಣ್ಗಾವಲಿನಲ್ಲಿ ಇರಿಸಲಾಗಿದೆ ಎಂದು ಸೇನೆ ತಿಳಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com