ಪೂರ್ವ ಲಡಾಕ್ ಉದ್ವಿಗ್ನ ಸ್ಥಿತಿ: ನೇಪಾಳ ಗಡಿಯಲ್ಲಿ ವಿಶೇಷ ಭದ್ರತೆಯಿಂದ ಇರಲು ಕೇಂದ್ರ ಗೃಹ ಸಚಿವಾಲಯ ಸೂಚನೆ

ಗಡಿ ವಾಸ್ತವ ರೇಖೆ(ಎಲ್ ಎಸಿ)ಯುದ್ಧಕ್ಕೂ ಚೀನಾ ಸೇನೆಯ ನಿಲುಗಡೆಯಿಂದ ಉದ್ವಿಗ್ನ ಸ್ಥಿತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಗಡಿಭಾಗದಲ್ಲಿರುವ ಎಲ್ಲಾ ಅರೆ ಸೇನಾಪಡೆಯನ್ನು ವಿಶೇಷ ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ ಎಂದು ಕೇಂದ್ರ ಗೃಹ ಇಲಾಖೆ ತಿಳಿಸಿದೆ.
ಇಂಡೊ-ಟಿಬೆಟ್ ಪೊಲೀಸರು
ಇಂಡೊ-ಟಿಬೆಟ್ ಪೊಲೀಸರು

ನವದೆಹಲಿ: ಗಡಿ ವಾಸ್ತವ ರೇಖೆ(ಎಲ್ ಎಸಿ)ಯುದ್ಧಕ್ಕೂ ಚೀನಾ ಸೇನೆಯ ನಿಲುಗಡೆಯಿಂದ ಉದ್ವಿಗ್ನ ಸ್ಥಿತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಗಡಿಭಾಗದಲ್ಲಿರುವ ಎಲ್ಲಾ ಅರೆ ಸೇನಾಪಡೆಯನ್ನು ವಿಶೇಷ ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ ಎಂದು ಕೇಂದ್ರ ಗೃಹ ಇಲಾಖೆ ತಿಳಿಸಿದೆ.

ಭಾರತ-ನೇಪಾಳ ಗಡಿ ಭಾಗದಲ್ಲಿ, ಉತ್ತರಾಖಂಡ್ ಮತ್ತು ಸಿಕ್ಕಿಮ್ ನ ಮೂರು ದೇಶಗಳ ಗಡಿ ಪ್ರದೇಶ ಸಂಧಿಸುವ ಜಾಗದಲ್ಲಿ ಚೀನಾ ತನ್ನ ಪ್ರಭಾವ ಬಳಸಿಕೊಂಡು ಭಾರತದ ಗಡಿಯೊಳಗೆ ನುಗ್ಗಿ ತೊಂದರೆ ಉಂಟುಮಾಡಬಹುದು ಎಂಬ ಸಂಶಯದಿಂದ ಅರೆ ಸೇನಾಪಡೆಗೆ ವಿಶೇಷ ಮುನ್ನೆಚ್ಚರಿಕೆ ವಹಿಸುವಂತೆ ಗೃಹ ಸಚಿವಾಲಯ ಸೇನೆಗೆ ಸೂಚನೆ ನೀಡಿದೆ.

ಈ ಪ್ರದೇಶಗಳಲ್ಲಿ ಕೆಲ ಭಾಗಗಳಲ್ಲಿ ಭದ್ರತಾ ಪಡೆಯ ನಿಯೋಜನೆ ಸಂಖ್ಯೆಯನ್ನು ಹೆಚ್ಚಿಸಲಾಗಿದೆ. ಗಡಿ ಭಾಗಗಳಲ್ಲಿ ಚೀನಾ ಸೇನೆ ನುಗ್ಗಿ ತೊಂದರೆ ನೀಡಬಹುದಾದ ಪ್ರದೇಶಗಳ ಬಗ್ಗೆ ಗುಪ್ತಚರ ಇಲಾಖೆ ಕೂಡ ಸಶಸ್ತ್ರ ಸೀಮಾ ಬಲ(ಎಸ್ಎಸ್ ಬಿ) ಮತ್ತು ಇಂಡೊ-ಟಿಬೆಟ್ ಗಡಿ ಪೊಲೀಸ್(ಐಟಿಬಿಪಿ)ಯೊಂದಿಗೆ ಮಾಹಿತಿ ಹಂಚಿಕೊಂಡಿದೆ.

ಸಿಕ್ಕಿಮ್ ಮೂರು ಜಂಕ್ಷನ್ ಪ್ರದೇಶ ಅಂದರೆ ಇಲ್ಲಿ ಭಾರತ, ಚೀನಾ ಮತ್ತು ಟಿಬೆಟ್ ನ ಗಡಿಗಳು ಸಂಧಿಸುವ ಸ್ಥಳ ಬಹಳ ಮುಖ್ಯವಾದದ್ದಾಗಿದೆ. ಡೊಕ್ಲಮ್ ನ ದಕ್ಷಿಣ ಭಾಗದಲ್ಲಿ ಈ ಪ್ರದೇಶವಿದ್ದು ಇಲ್ಲಿಯೇ 2017ರಲ್ಲಿ ಭಾರತ ಮತ್ತು ಚೀನಾ ದೇಶಗಳ ಸೇನೆಗಳು ದೀರ್ಘ ಕಾಲ ಸಂಘರ್ಷ ನಡೆಸಿದ್ದವು.

ಲಡಾಕ್ ನ ಚುಶುಲ್ ಪ್ರದೇಶ ಅತ್ಯಂತ ಅಪಾಯಕಾರಿಯಾಗಿದ್ದು ಈ ಪ್ರದೇಶದಲ್ಲಿ ಯಾವುದೇ ಕ್ಷಣದಲ್ಲಿಯಾದರೂ ಚೀನಾ ದಾಳಿ ನಡೆಸುವ ಸಾಧ್ಯತೆಯಿದೆ. ಹೀಗಾಗಿ ವಿಶೇಷ ಮುನ್ನೆಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ. ಉತ್ತರಾಖಂಡ್ ನ ಕಾಲಪಾಣಿ ಪ್ರದೇಶದಲ್ಲಿ ಗಡಿ ಗಸ್ತು ತಂಡಕ್ಕೆ ವಿಶೇಷ ಎಚ್ಚರಿಕೆಯಿಂದ ಇರುವಂತೆ, ಭಾರತ-ಚೀನಾ ಗಡಿಯಲ್ಲಿ ಐಟಿಬಿಪಿಗೆ, ಎಸ್ ಎಸ್ ಬಿ ಪಡೆಗಳಿಗೆ ಭಾರತ-ನೇಪಾಳ ಮತ್ತು ಭೂತಾನ್ ಗಡಿಯಲ್ಲಿ ಎಚ್ಚರಿಕೆಯನ್ನು ಹೆಚ್ಚಿಸುವಂತೆ ಕೇಂದ್ರ ಗೃಹ ಇಲಾಖೆ ಸೂಚಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com