2021ರ ಜನವರಿ 1ರಿಂದ ಫಾಸ್ಟ್ ಟ್ಯಾಗ್ ಕಡ್ಡಾಯ!

ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ 2020ರ ಸೆಪ್ಟಂಬರ್ 1ರಂದು ಜಿಎಸ್ ಆರ್ 541(ಇ) ಕರಡು ಅಧಿಸೂಚನೆ ಮೂಲಕ, 2017ರ ಡಿಸೆಂಬರ್ 1ಕ್ಕೂ ಮುನ್ನ ಮಾರಾಟ ಮಾಡಿರುವ ಹಳೆಯ ವಾಹನಗಳಿಗೆ ಫಾಸ್ಟ್ ಟ್ಯಾಗ್ ಕಡ್ಡಾಯಗೊಳಿಸುವ ಬಗ್ಗೆ ಸಂಬಂಧಿಸಿದವರಿಂದ ಸಲಹೆ ಮತ್ತು ಸೂಚನೆಗಳನ್ನು ಆಹ್ವಾನಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ನವದೆಹಲಿ: ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ 2020ರ ಸೆಪ್ಟಂಬರ್ 1ರಂದು ಜಿಎಸ್ ಆರ್ 541(ಇ) ಕರಡು ಅಧಿಸೂಚನೆ ಮೂಲಕ, 2017ರ ಡಿಸೆಂಬರ್ 1ಕ್ಕೂ ಮುನ್ನ ಮಾರಾಟ ಮಾಡಿರುವ ಹಳೆಯ ವಾಹನಗಳಿಗೆ ಫಾಸ್ಟ್ ಟ್ಯಾಗ್ ಕಡ್ಡಾಯಗೊಳಿಸುವ ಬಗ್ಗೆ ಸಂಬಂಧಿಸಿದವರಿಂದ ಸಲಹೆ ಮತ್ತು ಸೂಚನೆಗಳನ್ನು ಆಹ್ವಾನಿಸಿದೆ. ತಿದ್ದುಪಡಿ ಮಾಡಲ್ಪಟ್ಟಿರುವ ಸಿಎಂವಿಆರ್ 1989ರ ಕಾಯ್ದೆಯ ಅಂಶಗಳು 2021ರ ಜನವರಿ 1ರಿಂದ ಜಾರಿಗೊಳಿಸಲು ಉದ್ದೇಶಿಸಲಾಗಿದೆ.

ಅಲ್ಲದೆ, ತಿದ್ದುಪಡಿ ಮಾಡಲ್ಪಟ್ಟಿರುವ ನಮೂನೆ ಸಂಖ್ಯೆ 51(ವಿಮಾ ಪ್ರಮಾಣಪತ್ರ)ದಲ್ಲಿ ಮೂರನೇ ವ್ಯಕ್ತಿಗೆ ವಿಮೆ ಮಾಡಿಸಲು ಫಾಸ್ಟ್ ಟ್ಯಾಗ್ ಹೊಂದುವುದು ಕಡ್ಡಾಯಗೊಳಿಸಲು ಉದ್ದೇಶಿಸಲಾಗಿದೆ. ಆ ವೇಳೆ ಫಾಸ್ಟ್ ಟ್ಯಾಗ್ ಐಡಿಯನ್ನು ಗುರುತಿಸಲಾಗುವುದು. ಇದನ್ನು 2021ರ ಏಪ್ರಿಲ್ 1ರಿಂದ ಜಾರಿಗೊಳಿಸಲು ಉದ್ದೇಶಿಸಲಾಗಿದೆ.

ಕೇಂದ್ರೀಯ ಮೋಟಾರು ವಾಹನ ನಿಯಮ 1989ರ ಪ್ರಕಾರ, 2017ರಿಂದೀಚೆಗೆ ಯಾವುದೇ ಹೊಸ ನಾಲ್ಕು ಚಕ್ರದ ವಾಹನಗಳ ನೋಂದಣಿಗೆ ಫಾಸ್ಟ್ ಟ್ಯಾಗ್ ಕಡ್ಡಾಯಗೊಳಿಸಲಾಗಿದೆ ಮತ್ತು ಅದನ್ನು ವಾಹನ ಉತ್ಪಾದಕರು ಅಥವಾ ಡೀಲರ್ ಗಳು ಪೂರೈಸಬೇಕು. ಅಲ್ಲದೆ, ಸಾರಿಗೆ ವಾಹನಗಳ ಕ್ಷಮತಾ ಪತ್ರ (ಫಿಟ್ನೆಸ್ ಸರ್ಟಿಫಿಕೆಟ್)ಗಳ ನವೀಕರಣಕ್ಕೂ ಫಾಸ್ಟ್ ಟ್ಯಾಗ್ ಕಡ್ಡಾಯಗೊಳಿಸಲಾಗಿದೆ. ಜೊತೆಗೆ 2019ರ ಅಕ್ಟೋಬರ್ 1ರಿಂದೀಚೆಗೆ ರಾಷ್ಟ್ರೀಯ ಪರ್ಮಿಟ್ ಹೊಂದಿರುವ ವಾಹನಗಳಿಗೆ ಫಾಸ್ಟ್ ಟ್ಯಾಗ್ ಅಳವಡಿಕೆ ಕಡ್ಡಾಯ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಯಾವುದೇ ಥರ್ಡ್-ಪಾರ್ಟಿ ವಾಹನ ಇನ್ಯೂರೆನ್ಸ್ ಖರೀದಿಗೆ 2021ರ ಏಪ್ರಿಲ್ 1ರಿಂದ ಕಡ್ಡಾಯವಾಗಿ ಫಾಸ್ಟ್ ಟ್ಯಾಗ್ ಹೊಂದಿರಬೇಕಿದೆ. ಈ ಕುರಿತು ಅಭಿಪ್ರಾಯಗಳನ್ನು ಸಂಗ್ರಹಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com