ಅಡುಗೆ ಅನಿಲ ಸಿಲಿಂಡರ್
ಅಡುಗೆ ಅನಿಲ ಸಿಲಿಂಡರ್

ಅಡುಗೆ ಅನಿಲ ಸಿಲಿಂಡರ್ ಸಬ್ಸಿಡಿ ಕಟ್, ಡಿಬಿಟಿ ವರ್ಗಾವಣೆಯಿಲ್ಲ 

ಜಾಗತಿಕವಾಗಿ ತೈಲ ಬೆಲೆಗಳ ಕುಸಿತ ಮತ್ತು ಎಲ್ಪಿ ಜಿ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಆಗಾಗ್ಗೆ ಏರಿಳಿತವಿರುವುದರಿಂದ  ದೇಶೀಯ ಅಡುಗೆ ಅನಿಲ ಸಬ್ಸಿಡಿಯನ್ನು  ಸರ್ಕಾರ ಸಂಪೂರ್ಣವಾಗಿ ತೆಗೆದುಹಾಕಿದೆ.
Published on

ನವದೆಹಲಿ: ಜಾಗತಿಕವಾಗಿ ತೈಲ ಬೆಲೆಗಳ ಕುಸಿತ ಮತ್ತು ಎಲ್ಪಿ ಜಿ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಆಗಾಗ್ಗೆ ಏರಿಳಿತವಿರುವುದರಿಂದ  ದೇಶೀಯ ಅಡುಗೆ ಅನಿಲ ಸಬ್ಸಿಡಿಯನ್ನು  ಸರ್ಕಾರ ಸಂಪೂರ್ಣವಾಗಿ ತೆಗೆದುಹಾಕಿದೆ.

ಇನ್ನು ಮುಂದೆ ನೇರ ಲಾಭ ವರ್ಗಾವಣೆ ಯೋಜನೆ (ಡಿಬಿಟಿ) ಅಡಿಯಲ್ಲಿ ಸಬ್ಸಿಡಿಯನ್ನು ಫಲಾನುಭವಿಗಳ ಖಾತೆಗೆ ವರ್ಗಾವಣೆ ಮಾಡಲಾಗುವುದಿಲ್ಲ  ಎನ್ನಲಾಗಿದೆ.

ವಾಸ್ತವವಾಗಿ, ಈ ಹಣಕಾಸಿನ ಆರಂಭದಿಂದ ಸಬ್ಸಿಡಿ ಮತ್ತು ಸಬ್ಸಿಡಿ ರಹಿತ ಅಡುಗೆ ಅನಿಲದ ನಡುವಿನ ಬೆಲೆಯ ಅಂತರವು
ಕಡಿಮೆಯಾಗುತ್ತಿರುವುದರಿಂದ,ಸರ್ಕಾರ ಕಳೆದ ನಾಲ್ಕು ತಿಂಗಳುಗಳಿಂದ  ಯಾವುದೇ ಫಲಾನುಭವಿಗಳ ಖಾತೆಗಳಿಗೆ ಯಾವುದೇ 
ನಗದು ವರ್ಗಾವಣೆ ಮಾಡದಿರುವ ಬಗ್ಗೆ ಗ್ರಾಹಕರು ಕೇಂದ್ರದ ವಿರುದ್ಧ ಕಿಡಿ ಕಾರಿದ್ದಾರೆ. ದೇಶದಲ್ಲಿ  27 ಕೋಟಿ ಎಲ್ ಪಿಜಿ ಗ್ರಾಹಕರಿದ್ದಾರೆ.

X

Advertisement

X
Kannada Prabha
www.kannadaprabha.com