ಶೈಲಜಾ
ಶೈಲಜಾ

ಕೇರಳ ಆರೋಗ್ಯ ಸಚಿವೆ ಕೆಕೆ ಶೈಲಜಾ ಪ್ರಪಂಚದ ಅತ್ಯುನ್ನತ ಚಿಂತಕಿ: ಬ್ರಿಟಿಷ್ ಮ್ಯಾಗ್ ಜೀನ್ ಪ್ರಾಸ್ಪೆಕ್ಟ್ 

ಕೊರೋನಾ ವೈರಸ್ ಸಾಂಕ್ರಾಮಿಕ ರೋಗದ ನಿರ್ವಹಣೆಯಲ್ಲಿ ಕೇರಳವು ಅಂತರಾಷ್ಟ್ರೀಯ ಮಟ್ಟದಲ್ಲಿ ಸ್ಫೂರ್ತಿಯಾಗಿ ಮುಂದುವರೆದಿದೆ. ಬ್ರಿಟಿಷ್ ನಿಯತ ಕಾಲಿಕ ಪ್ರಾಸ್ಪೆಕ್ಟ್, ಕೇರಳ ಆರೋಗ್ಯ ಸಚಿವೆ ಕೆಕೆ ಶೈಲಜಾ ಅವರನ್ನು ವಿಶ್ವದ ಅತಿ ಉನ್ನತ ಚಿಂತಕಿ ಎಂದು ಆಯ್ಕೆ ಮಾಡಿದೆ.

ತಿರುವನಂತಪುರ: ಕೊರೋನಾ ವೈರಸ್ ಸಾಂಕ್ರಾಮಿಕ ರೋಗದ ನಿರ್ವಹಣೆಯಲ್ಲಿ ಕೇರಳವು ಅಂತರಾಷ್ಟ್ರೀಯ ಮಟ್ಟದಲ್ಲಿ ಸ್ಫೂರ್ತಿಯಾಗಿ ಮುಂದುವರೆದಿದೆ. ಬ್ರಿಟಿಷ್ ನಿಯತ ಕಾಲಿಕ ಪ್ರಾಸ್ಪೆಕ್ಟ್, ಕೇರಳ ಆರೋಗ್ಯ ಸಚಿವೆ ಕೆಕೆ ಶೈಲಜಾ ಅವರನ್ನು ವಿಶ್ವದ ಅತಿ ಉನ್ನತ ಚಿಂತಕಿ ಎಂದು ಆಯ್ಕೆ ಮಾಡಿದೆ.

ನ್ಯೂಜಿಲೆಂಡ್‌ನ ಪ್ರಧಾನ ಮಂತ್ರಿ ಜಸಿಂಡಾ ಅರ್ಡೆರ್ನ್ ಸೇರಿದಂತೆ 50 ವ್ಯಕ್ತಿಗಳ ಪಟ್ಟಿಯಲ್ಲಿ ಶೈಲಜಾ ಅವರನ್ನು ಆಯ್ಕೆ ಮಾಡಲಾಗಿದೆ, ತತ್ವಜ್ಞಾನಿ ಕಾರ್ನೆಲ್ ವೆಸ್ಟ್, ಇತಿಹಾಸಕಾರ ಆಲಿವೆಟ್ ಒಟೆಲ್ ಇತರರು ಈ ಪಟ್ಟಿಯಲ್ಲಿದ್ದಾರೆ. ಪ್ರಾಸ್ಪೆಕ್ಟ್ ಮ್ಯಾಗಜೀನ್ ಪ್ರಕಾರ 'ಸರಿಯಾದ ಸ್ಥಳದಲ್ಲಿರುವ ಸರಿಯಾದ ಮಹಿಳೆ( ರೈಟ್ ವುಮೆನ್ ಇನ್ ರೈಟ್ ಪ್ಲೇಸ್) ಎಂದು
ಹೇಳಿದೆ.

ಜನವರಿಯಲ್ಲಿ ಕೋವಿಡ್ -19 ಇನ್ನೂ ಚೀನಾದ ಕಥೆಯಾಗಿದ್ದಾಗ, ನಿಖರವಾಗಿ ಕೊರೋನಾ ಆಗಮನವನ್ನು ಗಮನಿಸಿ ಅದರಿಂದ ಉಂಟಾಗುವ ಪರಿಣಾಮಗಳ ಮುನ್ಸೂಚನೆ ನೀಡಿದ್ದರು ಎಂದು ಮ್ಯಾಗಜೀನ್ ತಿಳಿಸಿದೆ.

ಕೊರೋನಾ ನಿರ್ವಹಣೆಯಲ್ಲಿ ಕೇರಳ ವಹಿಸಿದ ಪಾತ್ರದ ಹಾಗೂ ಕೈಗೊಂಡ ಕಾರ್ಯಕ್ರಮಗಳ ಬಗ್ಗೆ ಬಿಬಿಸಿ, ದಿ ನ್ಯೂಯಾರ್ಕ್ ಟೈಮ್ಸ್, ದಿ ಗಾರ್ಡಿಯನ್ ಮತ್ತಿತರ ಅಂತರಾಷ್ಟ್ರೀಯ ಮಾಧ್ಯಮಗಳು ಮೆಚ್ಚುಗೆ ವ್ಯಕ್ತ ಪಡಿಸಿದ್ದವು.

Related Stories

No stories found.

Advertisement

X
Kannada Prabha
www.kannadaprabha.com