ಮುಂಬೈ: ತಮಗೆ ಬೆದರಿಕೆ ಹಾಕುತ್ತಿದ್ದಾರೆ ಎಂಬ ಬಾಲಿವುಡ್ ನಟಿ ಕಂಗನಾ ರನೌತ್ ಅವರ ಬೆಂಬಲಕ್ಕೆ ನಿಂತಿರುವ ಪ್ರತಿಕ್ರಿಯಿಸಿರುವ ಶಿವಸೇನೆ ಸಂಸದ ಸಂಜಯ್ ರೌತ್ ಅವರು, "ನೀವು (ನಟಿ ಕಂಗನಾ) ಮಹಾರಾಷ್ಟ್ರವನ್ನು ಅವಮಾನಿಸಲು ಪ್ರಯತ್ನಿಸುತ್ತಿದ್ದೀರಿ ಎಂದು ತಿರುಗೇಟು ನೀಡಿದ್ದಾರೆ.
ನಟಿ ಬೆಂಬಲಿಸುವ ಯಾವುದೋ ಒಂದು ರಾಜಕೀಯ ಪಕ್ಷ ಅಥವಾ ಯಾವುದೋ ಶಕ್ತಿ ಇರಬೇಕು. ಅದಕ್ಕಾಗಿಯೇ ಅವರು ಈ ರೀತಿ ಮಾತನಾಡುತ್ತಿದ್ದಾರೆ. ಮುಂಬೈ ಮತ್ತು ಮುಂಬೈ ಪೊಲೀಸ್ ವ್ಯವಸ್ಥೆ ಹಾಳು ಮಾಡಲು ಪಿತೂರಿ ನಡೆಸಲಾಗುತ್ತಿದೆ ಎಂದು ಸಂಸದ ಆರೋಪಿಸಿದ್ದಾರೆ.
ಸುಶಾಂತ್ ಸಿಂಗ್ ರಜಪೂತ್ ಪ್ರಕರಣದಲ್ಲಿ ಮುಂಬೈ ಪೋಲಿಸ್ ತನಿಖೆಯನ್ನು ಕಂಗನಾ ಟೀಕಿಸಿದ್ದರು. ಹೀಗಾಗಿ ನೀವು ದಯವಿಟ್ಟು ಮುಂಬೈಗೆ ಬರಬೇಡಿ ಎಂದು ಬಾಲಿವುಡ್ ನಟಿಗೆ ಸಂಜಯ್ ರೌತ್ ಮನವಿ ಮಾಡಿದ್ದರು.
ಸಂಜಯ್ ರೌತ್ ಅವರ ಈ ಮನವಿಗೆ ಪ್ರತಿಕ್ರಿಯಿಸಿದ ಕಂಗನಾ, ಶಿವಸೇನೆ ನಾಯಕ ಸಂಜಯ್ ನನಗೆ ಬಹಿರಂಗವಾಗಿಯೇ ಬೆದರಿಕೆ ಹಾಕಿದ್ದಾರೆ ಮತ್ತು ಮುಂಬೈಗೆ ಹಿಂತಿರುಗಬಾರದೆಂದು ಕೇಳಿಕೊಂಡಿದ್ದಾರೆ ಎಂದು ಟ್ವೀಟ್ ಮಾಡಿದ್ದರು.
Advertisement