ಬಸ್ಸಿನಲ್ಲಿ ಹೋಗಲು ನಿರಾಕರಿಸಿದ ಒಬ್ಬ ಮಹಿಳಾ ಪ್ರಯಾಣಿಕರೊಂದಿಗೆ ರಾಂಚಿ ತಲುಪಿದ ರಾಜಧಾನಿ ಎಕ್ಸ್‌ಪ್ರೆಸ್!

ಟೋರಿ ಜಂಕ್ಷನ್‌ನಲ್ಲಿ ತಾನಾ ಭಗತ್‌ರ ನಿರಂತರ ಪ್ರತಿಭಟನೆಯಿಂದಾಗಿ ದೆಹಲಿ-ರಾಂಚಿ ರಾಜಧಾನಿ ಎಕ್ಸ್‌ಪ್ರೆಸ್ ರೈಲು ಗುರುವಾರ ಹಲವು ಗಂಟೆಗಳ ಡಾಲ್ಟೋಂಗಂಜ್ ನಿಲ್ದಾಣದಲ್ಲಿ ಸಿಲುಕಿಕೊಂಡಿತ್ತು. ಅಂತಿಮವಾಗಿ ರೈಲು ಶುಕ್ರವಾರ ಒಬ್ಬ ಮಹಿಳಾ ಪ್ರಯಾಣಿಕರೊಂದಿಗೆ ರಾಂಚಿ ತಲುಪಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ರಾಂಚಿ: ಟೋರಿ ಜಂಕ್ಷನ್‌ನಲ್ಲಿ ತಾನಾ ಭಗತ್‌ರ ನಿರಂತರ ಪ್ರತಿಭಟನೆಯಿಂದಾಗಿ ದೆಹಲಿ-ರಾಂಚಿ ರಾಜಧಾನಿ ಎಕ್ಸ್‌ಪ್ರೆಸ್ ರೈಲು ಗುರುವಾರ ಹಲವು ಗಂಟೆಗಳ ಡಾಲ್ಟೋಂಗಂಜ್ ನಿಲ್ದಾಣದಲ್ಲಿ ಸಿಲುಕಿಕೊಂಡಿತ್ತು. ಅಂತಿಮವಾಗಿ ರೈಲು ಶುಕ್ರವಾರ ಒಬ್ಬ ಮಹಿಳಾ ಪ್ರಯಾಣಿಕರೊಂದಿಗೆ ರಾಂಚಿ ತಲುಪಿದೆ.

ರಾಜಧಾನಿ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣಿಸುತ್ತಿದ್ದ ಉಳಿದ 930 ಪ್ರಯಾಣಿಕರನ್ನು ಡಾಲ್ಟೋಂಗಂಜ್ ನಿಲ್ದಾಣದಿಂದ ರಾಂಚಿಗೆ ಬಸ್ ಮೂಲಕ ಕರೆದೊಯ್ಯಲಾಯಿತು. ಆದರೆ ಬಸ್ ಅಥವಾ ಟ್ಯಾಕ್ಸಿಯಲ್ಲಿ ತೆರಳಲು ನಿರಾಕರಿಸಿದ ಅನನ್ಯಾ ಎಂಬ ಮಹಿಳೆಯ ಮನವೊಲಿಸಲು ರೈಲ್ವೆ ಅಧಿಕಾರಿಗಳಿಗೆ ಸಾಧ್ಯವಾಗಲಿಲ್ಲ.

ಮಹಿಳೆ ರೈಲು ಪ್ರಯಾಣಕ್ಕೆ ಹಣ ಪಾವತಿಸಿದ್ದರಿಂದ ಬಸ್‌ನಲ್ಲಿ ಪ್ರಯಾಣಿಸಲು ಒಪ್ಪಲಿಲ್ಲ. ಅಂತಿಮವಾಗಿ, ರೈಲು ಅಧಿಕಾರಿಗಳು ಈ ಕಾನೂನು ವಿದ್ಯಾರ್ಥಿಯ ಗಟ್ಟಿತನಕ್ಕೆ  ತಲೆಬಾಗಬೇಕಾಯಿತು ಮತ್ತು ರೈಲಿನ ಮಾರ್ಗ ಬದಲಿಸಿ 535 ಕಿಲೋಮೀಟರ್ ದೂರವನ್ನು ಗೋಮೋ ಮತ್ತು ಬೊಕಾರೊ ಮೂಲಕ ತಿರುಗಿಸಲಾಯಿತು. ಇದು ಸಾಮಾನ್ಯ ಮಾರ್ಗಕ್ಕಿಂತ 225 ಕಿಲೋಮೀಟರ್ ಹೆಚ್ಚಾಗಿದೆ.

"ಬಸ್ ಅಥವಾ ಟ್ಯಾಕ್ಸಿ ಮೂಲಕ ತೆರಳುವಂತೆ ನನ್ನ ಮೇಲೆ ಒತ್ತಡ ಹಾಕಲಾಯಿತು, ಆದರೆ ನಾನು ಈಗಾಗಲೇ ರೈಲು ಪ್ರಯಾಣಕ್ಕೆ ಹಣ ಪಾವತಿಸಿದ್ದರಿಂದ ಅದಕ್ಕೆ ನಾನು ಒಪ್ಪಲಿಲ್ಲ. ಅಂತಿಮವಾಗಿ, ನಾನು ಟ್ವಿಟ್ಟರ್ ಮೂಲಕ ಭಾರತೀಯ ರೈಲ್ವೆಗೆ ಮಾಹಿತಿ ನೀಡಿದಾಗ, ಅವರು ನನ್ನನ್ನು ರಾಂಚಿಗೆ ರೈಲಿನಲ್ಲಿ ಕಳುಹಿಸಿದರು, ”ಎಂದು ಅನನ್ಯಾ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com