ಸಂಜಯ್ ರಾವತ್
ದೇಶ
ಟ್ವೀಟ್ ಮಾಡುವ ಬದಲು ಸಾಕ್ಷ್ಯಾಧಾರದೊಂದಿಗೆ ಪೊಲೀಸ್ ಠಾಣೆಗೆ ಹೋಗಲಿ: ಸಂಜಯ್ ರಾವತ್
ಬೆದರಿಕೆ ಕರೆ ಬಂದಿದೆ ಎಂದಾದರೇ ನಟಿ ಕಂಗನಾ ರಣಾವತ್ ಅವರು ಟ್ವಿಟ್ಟರ್ ನಲ್ಲಿ ಆಟವಾಡುವುದನ್ನು ಬಿಟ್ಟು ಸಾಕ್ಷ್ಯಾಧಾರಗಳೊಂದಿಗೆ ಪೊಲೀಸ್ ಠಾಣೆಗೆ ಹೋಗಬೇಕು ಎಂದು ಶಿವಸೇನೆ ಮುಖಂಡ ಸಂಜಯ್ ರೌತ್ ಹೇಳಿದ್ದಾರೆ
ಮುಂಬಯಿ: ಬೆದರಿಕೆ ಕರೆ ಬಂದಿದೆ ಎಂದಾದರೇ ನಟಿ ಕಂಗನಾ ರಣಾವತ್ ಅವರು ಟ್ವಿಟ್ಟರ್ ನಲ್ಲಿ ಆಟವಾಡುವುದನ್ನು ಬಿಟ್ಟು ಸಾಕ್ಷ್ಯಾಧಾರಗಳೊಂದಿಗೆ ಪೊಲೀಸ್ ಠಾಣೆಗೆ ಹೋಗಬೇಕು ಎಂದು ಶಿವಸೇನೆ ಮುಖಂಡ ಸಂಜಯ್ ರೌತ್ ಹೇಳಿದ್ದಾರೆ.
ಸಂಜಯ್ ರೌತ್ ತಮಗೆ ಮುಂಬೈ ಪೊಲೀಸರಲ್ಲಿ ನಂಬಿಕೆ ಇಲ್ಲದೇ ಇದ್ದರೆ ಮುಂಬೈಗೆ ಬರದಂತೆ ಬಹಿರಂಗವಾಗಿ ಬೆದರಿಕೆ ಹಾಕಿದ್ದಾರೆ. ಮುಂಬೈ ನನಗೆ ಪಾಕ್ ಆಕ್ರಮಿತ ಕಾಶ್ಮೀರದಂತೆ ಕಾಣುತ್ತಿದೆ ಎಂದು ಕಂಗನಾ ಟ್ವೀಟ್ ಮಾಡಿದ್ದರು.
ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಸಂಜಯ್ ರಾವತ್, ನಟಿಯ ಹೆಸರು ಹೇಳದೇ ಟ್ವಿಟ್ಟರ್ ನಲ್ಲಿ ಆಟವಾಡುವ ಬದಲು ಸಾಕ್ಷ್ಯಾಧಾರದೊಂದಿಗೆ ಸರ್ಕಾರ ಅಥವಾ ಪೊಲೀಸರ ಬಳಿ ಹೋಗಲಿ ಎಂದು ಹೇಳಿದ್ದಾರೆ.
ಇದಕ್ಕೂ ಮುನ್ನ ಸಂಜಯ್ ರೌತ್ ಶಿವಸೇನೆ ಮುಖವಾಣಿಯಲ್ಲಿ ಕಂಗನಾ ಅವರನ್ನು ಟೀಕಿಸುವ ಭರದಲ್ಲಿ ತಾವು ವಾಸಿಸುತ್ತಿರುವ ನಗರದ ಪೊಲೀಸರ ಬಗ್ಗೆ ನಂಬಿಕೆ ಇಲ್ಲದೇ ಇದ್ದಲ್ಲಿ ಮುಂಬೈಗೆ ಬರಬಾರದು, ಕಂಗನಾ ವಿರುದ್ಧ ಗೃಹ ಸಚಿವಾಲಯ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದರು
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ