ರಾಜನಾಥ್ ಸಿಂಗ್ ಅವರೊಂದಿಗೆ ಸಭೆಗಾಗಿ ಚೀನಾ ರಕ್ಷಣಾ ಸಚಿವರಿಂದ 80 ದಿನಗಳಿಂದ ಸತತ ಮನವಿ!

ಸತತ ನಾಲ್ಕು ತಿಂಗಳಿನಿಂದ ಭಾರತದೊಂದಿಗೆ ಗಡಿ ಸಂಘರ್ಷದಲ್ಲಿ ತೊಡಗಿರುವ ಚೀನಾ ದೇಶದ ರಕ್ಷಣಾ ಸಚಿವ ವೀ ಫೆಂಗೆ ಅವರು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಿ ಮಾತನಾಡಲು 80 ದಿನಗಳಲ್ಲಿ ಮೂರು ಬಾರಿ ಮನವಿ ಮಾಡಿದ್ದು ಈಗ ಬಹಿರಂಗಗೊಂಡಿದೆ. 
ರಾಜನಾಥ್ ಸಿಂಗ್ (ಸಂಗ್ರಹ ಚಿತ್ರ)

ಶುಕ್ರವಾರದಂದು ಮಾಸ್ಕೋದಲ್ಲಿ ಶಾಂಘೈ ಸಹಕಾರ ಸಭೆಯ ಪಾರ್ಶ್ವದಲ್ಲಿ ಉಭಯ ದೇಶಗಳ ರಕ್ಷಣಾ ಸಚಿವರ ಭೇಟಿ ನಡೆಯಿತು. ಇದೂ ಸಹ ಚೀನಾದ ಮನವಿಯ ಮೇರೆಗೆ ನಡೆಯಿತು. 

ಇದಕ್ಕೂ ಮುನ್ನ ಚೀನಾ ರಕ್ಷಣಾ ಸಚಿವರು ರಾಜನಾಥ್ ಸಿಂಗ್ ಜೊತೆ ಮಾತುಕತೆ ನಡೆಸುವುದಕ್ಕೆ 80 ದಿನಗಳಲ್ಲಿ ಬರೊಬ್ಬರಿ 3 ಬಾರಿ ಮನವಿ ಸಲ್ಲಿಸಿದ್ದರು ಎಂದು ಮೂಲಗಳಿಂದ ತಿಳಿದುಬಂದಿದೆ. 

ಮಾಸ್ಕೋ ಭೇಟಿಯ ಸಂದರ್ಭದಲ್ಲಿ ಚೀನಾ ರಕ್ಷಣಾ ಸಚಿವರು ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಲು ಅವರಿದ್ದ ಹೊಟೇಲ್ ಗೇ ಬರುವುದಕ್ಕೂ ಸಿದ್ಧರಿದ್ದರು ಎಂಬುದು ಮತ್ತೊಂದು ಗಮನಾರ್ಹ ವಿಚಾರವಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com